
Delhi: ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ್ದ ವಿಕಲಚೇತನ ಮುಸ್ಲಿಂ ವ್ಯಕ್ತಿಗೆ ಥಳಿತ; ಮೃತ್ಯು
Team Udayavani, Sep 27, 2023, 1:58 PM IST

ದೆಹಲಿ: ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ್ದಕ್ಕೆ ವಿಕಲಚೇತನ ಮುಸ್ಲಿಂ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪರಿಣಾಮ ಮೃತಪಟ್ಟಿರುವ ದೆಹಲಿಯ ಸುಂದರ್ ನಗರಿ ಪ್ರದೇಶದಲ್ಲಿ ಮಂಗಳವಾರ(ಸೆ.26 ರಂದು) ನಡೆದಿರುವುದು ವರದಿಯಾಗಿದೆ.
ವಿಕಲಚೇತನ ಆಗಿರುವ ಮೊಹಮ್ಮದ್ ಇಸಾರ್ ಎಂಬಾತ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ ಎನ್ನುವ ಕಾರಣಕ್ಕೆ ಕೆಲ ವ್ಯಕ್ತಿಗಳು ಇಸಾರ ನನ್ನು ಹಿಡಿದು ಕಂಬಕ್ಕೆ ಕಟ್ಟಿದ್ದಾರೆ. ಆ ಬಳಿಕ ಆತನನ್ನು ಥಳಿಸಿದ್ದಾರೆ. ಏಟು ತಿಂದ ಪರಿಣಾಮ ಕೆಲ ಸಮಯದ ಬಳಿಕ ಇಸಾರ್ ಮೃತಪಟ್ಟಿದ್ದಾನೆ.
ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಗುಂಪೊಂದು ವ್ಯಕ್ತಿಯನ್ನು ಕೋಲುಗಳಿಂದ ಹಲ್ಲೆ ಮಾಡುವುದು ವಿಡಿಯೋದಲ್ಲಿ ಕಂಡುಬಂದಿದೆ.
ಈ ಸಂಬಂಧ ಪೊಲೀಸರು ಕೆಲ ವ್ಯಕ್ತಿಗಳನ್ನು ಬಂಧಿಸಿದ್ದು, ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದವರನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದ್ದಾರೆ. ಸದ್ಯ ಅಹಿತಕರ ಘಟನೆ ನಡೆಯದಂತೆ ಘಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಕೆಲವು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಹಿಂದೂ ಹುಡುಗನೊಬ್ಬನ ಹತ್ಯೆ ಆಗಿತ್ತು. ನಂತರ ಈ ಪ್ರದೇಶದಲ್ಲಿಉದ್ವಿಗ್ನತೆ ಉಂಟಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election; ಸನಾತನ ಧರ್ಮಕ್ಕೆ ನಿಂದಿಸಿದರೆ..: ಕಾಂಗ್ರೆಸ್ ವಿರುದ್ಧ ವೆಂಕಟೇಶ್ ಪ್ರಸಾದ್ ಟೀಕೆ

Lok Sabha Polls 2024: ಬಿಜೆಪಿಯ ಉತ್ಸಾಹ ಇಮ್ಮಡಿಗೊಳಿಸಿದ ಮೂರು ರಾಜ್ಯಗಳ ಫಲಿತಾಂಶ

Session: ಈ ಬಾರಿಯ ಅಧಿವೇಶನವು ಬಿರುಗಾಳಿಯ ಅಧಿವೇಶನವಾಗುವ ಸಾಧ್ಯತೆ ಇದೆ: ಪ್ರಹ್ಲಾದ್ ಜೋಶಿ

Rajasthan Election; ಭರ್ಜರಿ ಗೆಲುವು ಸಾಧಿಸಿದ ಮಾಜಿ ಸಿಎಂ ವಸುಂಧರಾ ರಾಜೆ

Revanth Reddy; ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಕಾಂಗ್ರೆಸ್ ನಸೀಬು ಬದಲಿಸಿದ್ದು ಹೇಗೆ?
MUST WATCH
ಹೊಸ ಸೇರ್ಪಡೆ

Election Result; ತೆಲಂಗಾಣ ಸರ್ಕಾರದ ವಿರುದ್ದ ಜನಾಕ್ರೋಶ: ಸಚಿವ ಪ್ರಿಯಾಂಕ್ ಖರ್ಗೆ

ವಿಕಲಚೇತನರಿಗೆ ಸರ್ಕಾರದ ಸೌಲಭ್ಯ ಒದಗಿಸುವ ಪ್ರಮಾಣಿಕ ಪ್ರಯತ್ನ: ಸಚಿವ ಪ್ರಿಯಾಂಕ್ ಖರ್ಗೆ

Illegal liquor; ಅಕ್ರಮ ಮದ್ಯ; ಮೌನಕ್ಕೆ ಜಾರಿದ ಅಬಕಾರಿ ಇಲಾಖೆ

Election; ಸನಾತನ ಧರ್ಮಕ್ಕೆ ನಿಂದಿಸಿದರೆ..: ಕಾಂಗ್ರೆಸ್ ವಿರುದ್ಧ ವೆಂಕಟೇಶ್ ಪ್ರಸಾದ್ ಟೀಕೆ

Dialysis machine: ಚಾ.ನಗರ ಜಿಲ್ಲೆಗೆ ಬೇಕು ಮತ್ತಷ್ಟು ಡಯಾಲಿಸಿಸ್ ಯಂತ್ರಗಳು