

Team Udayavani, Aug 23, 2018, 6:00 AM IST
ಹೊಸದಿಲ್ಲಿ: ವೈವಾಹಿಕ ಹಾಗೂ ವರದಕ್ಷಿಣೆ ವ್ಯಾಜ್ಯಗಳಲ್ಲಿ ಪತಿಯ ಸಂಬಂಧಿಕರನ್ನು ಅನಗತ್ಯವಾಗಿ ಎಳೆದು ತರಬಾರದು ಎಂದು ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿದೆ. ಇಂತಹ ಪ್ರಕರಣಗಳಲ್ಲಿ ಪತಿಯ ದೂರದ ಸಂಬಂಧಿಕರನ್ನು ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯಿಂದಿರಿ ಎಂದು ಕೆಳ ಹಂತದ ನ್ಯಾಯಾಲಯಗಳಿಗೆ ನ್ಯಾ.ಎಸ್ ಎ ಬೊಬ್ದೆ ಮತ್ತು ಎಲ್ ನಾಗೇಶ್ವರ ರಾವ್ ಅವರನ್ನೊಳಗೊಂಡ ಪೀಠ ಸೂಚಿಸಿದ್ದಾರೆ. ಪತಿಯನ್ನು ಸಂಬಂಧಿಕರು ಬೆಂಬಲಿಸಿದ್ದಾರೆ ಎಂದ ಮಾತ್ರಕ್ಕೆ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗದು. ಅಪರಾಧದಲ್ಲಿ ಭಾಗಿಯಾಗಿರುವುದು ಸ್ಪಷ್ಟವಿಲ್ಲ ದಿದ್ದರೆ ಅವರನ್ನು ಸೇರಿಸಲಾಗದು ಎಂದು ಹೇಳಿದೆ ನ್ಯಾಯಪೀಠ.
2016ರ ಜನವರಿಯಲ್ಲಿ ಹೈದರಾಬಾದ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ವಿನಾಕರಣವಾಗಿ ಪತಿಯ ಕುಟುಂಬ ಸದಸ್ಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಹೈಕೋರ್ಟ್ ಆದೇಶದ ಅನ್ವಯ ಸಂಬಂಧಿಗಳ ವಿರುದ್ಧವೂ ಕೇಸು ದಾಖಲಿಸಲಾಗಿತ್ತು.
Ad
ದಿಲ್ಲಿ ಸಿಎಂ ಅಧಿಕೃತ ನಿವಾಸ ನವೀಕರಣ ಟೆಂಡರ್ ರದ್ದುಗೊಳಿಸಿದ ಸರಕಾರ
ಸಿಎಂ ನೇತೃತ್ವದ ನಿಯೋಗದಿಂದ ರಕ್ಷಣಾ ಸಚಿವರ ಭೇಟಿ, 2 ಡಿಫೆನ್ಸ್ ಕಾರಿಡಾರ್‌ಗೆ ಮನವಿ
ರಾಜ್ಯದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರ ಸಕಾರಾತ್ಮಕ ಸ್ಪಂದನೆ: ಸಿದ್ದರಾಮಯ್ಯ
ಹಳಸಿದ ಆಹಾರ ಕೊಟ್ಟಿದ್ದಕ್ಕೆ ಕ್ಯಾಂಟೀನ್ ಸಿಬ್ಬಂದಿ ಮುಖಕ್ಕೆ ಗುದ್ದಿದ ಶಿವಸೇನೆ ಶಾಸಕ!
Shocking! ಬುದ್ಧಿಮಾತು ಹೇಳಿದ್ದಕ್ಕೆ ಕೊಡಲಿಯಿಂದ ಹ*ಲ್ಲೆ ನಡೆಸಿ ಅಜ್ಜಿಯನ್ನೇ ಕೊಂ*ದ ಮೊಮ್ಮಗ
You seem to have an Ad Blocker on.
To continue reading, please turn it off or whitelist Udayavani.