Udayavni Special

ನೀವು ಹೃದಯಗಳನ್ನೂ ಒಡೆಯುತ್ತೀರಾ?


Team Udayavani, Aug 7, 2019, 4:05 AM IST

neevbu

“ಕೇಂದ್ರ ಸರ್ಕಾರವು ನಮ್ಮ ರಾಜ್ಯವನ್ನು ವಿಭಜಿಸಿತು. ಈಗ ಹೃದಯಗಳನ್ನೂ ವಿಭಜಿಸಲು ಹೊರಟಿದೆಯೇ? ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸಲು ಮುಂದಾಗಿದೆಯೇ? ನನ್ನ ಭಾರತವು ಎಲ್ಲರಿಗೆ ಸೇರಿದ್ದು, ಜಾತ್ಯತೀತತೆ ಮತ್ತು ಏಕತೆಯನ್ನು ನಂಬುವ ಎಲ್ಲರದ್ದು ಎಂದು ನಾನು ಭಾವಿಸಿದ್ದೆ.’ 370ನೇ ವಿಧಿ ರದ್ದು ಸಂಬಂಧ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ಅವರ ಮಾತುಗಳಿವು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಣ್ಣೀರಾದ ಅವರು, “370ನೇ ವಿಧಿ ರದ್ದು ವಿಚಾರದಲ್ಲಿ ಸರ್ವಾಧಿಕಾರದ ಅಧಿಕಾರವನ್ನು ಬಳಸಲಾಗಿದೆಯೇ ವಿನಾ ಪ್ರಜಾಸತ್ತಾತ್ಮಕ ಅಧಿಕಾರವನ್ನಲ್ಲ. 370ನೇ ವಿಧಿ ಎನ್ನುವುದು ರಾಷ್ಟ್ರಪತಿಯವರ ಆದೇಶವಲ್ಲ, ಅದು ಸಾಂವಿಧಾನಿಕ ಖಾತ್ರಿಯಾಗಿದೆ’ ಎಂದಿದ್ದಾರೆ. ಅಲ್ಲದೆ, ಮೋದಿ ಸರ್ಕಾರದ ನಿರ್ಧಾರದ ವಿರುದ್ಧ ನಾವು ಕೋರ್ಟ್‌ ಮೆಟ್ಟಿಲೇರುತ್ತೇವೆ. ನಮ್ಮ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ. ಜತೆಗೆ, ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದೂ ಹೇಳಿದ್ದಾರೆ.

ಕೊಲ್ಲುವುದಿದ್ದರೆ ಕೊಲ್ಲಲಿ: ಗೇಟು ತೆರೆದಾಕ್ಷಣ ನಾವು ಹೋರಾಟ ಆರಂಭಿಸುತ್ತೇವೆ. ನಾವೇನೂ ಬಂದೂಕುಧಾರಿಗಳಲ್ಲ, ಗ್ರೆನೇಡ್‌ ಎಸೆತಗಾರರಲ್ಲ, ಕಲ್ಲು ತೂರಾಟಗಾರರೂ ಅಲ್ಲ. ನಾವು ಎಲ್ಲವೂ ಶಾಂತಿಯುತವಾಗಿ ಪರಿಹಾರವಾಗಲಿ ಎಂದು ಬಯಸುವವರು. ಅವರು ನನ್ನನ್ನು ಕೊಲ್ಲಲು ಬಯಸಿದ್ದರೆ, ಕೊಲ್ಲಲಿ. ನಾನು ಸಿದ್ಧನಾಗಿದ್ದೇನೆ, ನನ್ನ ಎದೆಯೂ ಸಿದ್ಧವಾಗಿದೆ. ಗುಂಡು ಹಾರಿಸುವುದಿದ್ದರೆ ನನ್ನ ಎದೆಗೆ ಹಾರಿಸಲಿ, ಬೆನ್ನ ಹಿಂದಿನಿಂದ ಅಲ್ಲ ಎಂದು 81 ವರ್ಷದ ಅಬ್ದುಲ್ಲಾ ಆಕ್ರೋಶಭರಿತರಾಗಿ ನುಡಿದಿದ್ದಾರೆ.

ನಾನೇನೂ ಡಾಕ್ಟರ್‌ ಅಲ್ಲ ಎಂದ ಶಾ: ಲೋಕಸಭೆಯಲ್ಲಿ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರು, “ಎನ್‌ಸಿ ನಾಯಕ ಫಾರೂಕ್‌ ಅಬ್ದುಲ್ಲಾ ಅವರು ಅಸ್ವಸ್ಥರಾಗಿದ್ದಾರೆಯೇ? ಅವರೇಕೆ ಸದನದಲ್ಲಿ ಹಾಜರಿಲ್ಲ’ ಎಂದು ಅಮಿತ್‌ ಶಾರನ್ನು ಉದ್ದೇಶಿಸಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಶಾ, “ಅವರನ್ನು ವಶಕ್ಕೂ ಪಡೆದಿಲ್ಲ, ಗೃಹಬಂಧನದಲ್ಲೂ ಇರಿಸಿಲ್ಲ. ಅವರು ಅವರಿಚ್ಛೆಯಂತೆ ಮನೆಯಲ್ಲಿದ್ದಾರೆ’ ಎಂದಿದ್ದರಲ್ಲದೆ, “ಅವರು ಅಸ್ವಸ್ಥರಾಗಿದ್ದಾರೆಯೇ ಎಂದು ಹೇಳಲು ನಾನೇನೂ ಡಾಕ್ಟರ್‌ ಅಲ್ಲ. ಚಿಕಿತ್ಸೆ ಕೊಡಲೂ ನನ್ನಿಂದ ಸಾಧ್ಯವಿಲ್ಲ’ ಎಂದು ವ್ಯಂಗ್ಯವಾಡಿದ್ದರು.

ಬಾಗಿಲು ಒಡೆದು ಹೊರಬಂದೆ: ಶ್ರೀನಗರದಲ್ಲಿ ಟಿವಿ ಚಾನೆಲ್‌ಗ‌ಳೊಂದಿಗೆ ಮಾತನಾಡಿದ ಅಬ್ದುಲ್ಲಾ, “ಗೃಹ ಸಚಿವ ಅಮಿತ್‌ ಶಾ ಅವರು ಸಂಸತ್‌ನಲ್ಲೇ ಸುಳ್ಳು ಹೇಳುತ್ತಿದ್ದಾರೆ. ನನ್ನನ್ನು ವಶಕ್ಕೂ ಪಡೆದಿಲ್ಲ, ಗೃಹಬಂಧನದಲ್ಲೂ ಇರಿಸಿಲ್ಲ ಎಂದು ಅವರು ಹೇಳಿದ್ದಾರೆ. ಇದೆಲ್ಲಾ ಸುಳ್ಳು. ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ನನ್ನ ಮನೆಯ ಹೊರಗೆ ಡಿಎಸ್‌ಪಿಯನ್ನು ನಿಯೋಜಿಸಲಾ ಗಿದೆ. ಮನೆಯಿಂದ ಯಾರೂ ಹೊರ ಹೋಗು ವಂತಿಲ್ಲ, ಮನೆ ಯೊಳಕ್ಕೂ ಯಾರೂ ಬರುವಂತಿಲ್ಲ ಎಂದು ಸೂಚಿಸ ಲಾಗಿದೆ. ಶಾ ಹೇಳಿದ್ದನ್ನೆಲ್ಲ ಕೇಳಿಸಿಕೊಂಡೆ. ಮಾಧ್ಯಮಗ ಳೊಂದಿಗೆ ಮಾತನಾಡ ಬೇಕೆಂದೇ ನಾನು ಬಾಗಿಲು ಒಡೆದು ಹೊರಬಂದೆ’ ಎಂದಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

“ಜಂಗಲ್‌ರಾಜ್‌ ಯುವರಾಜ’

“ಜಂಗಲ್‌ರಾಜ್‌ ಯುವರಾಜ’; ಮಹಾಘಟಬಂಧನ್‌ ಸಿಎಂ ಅಭ್ಯರ್ಥಿ ತೇಜಸ್ವಿ ವಿರುದ್ಧ ಮೋದಿ ವಾಗ್ಬಾಣ

ಕ್ರೆಡಿಟ್‌ ಕಾರ್ಡ್‌ಗಿಲ್ಲ ಚಕ್ರಬಡ್ಡಿ

ಕ್ರೆಡಿಟ್‌ ಕಾರ್ಡ್‌ಗಿಲ್ಲ ಚಕ್ರಬಡ್ಡಿ

ಗ್ರಾಮ ಪಂಚಾಯತ್ ಗಳಲ್ಲಿ ಶೀಘ್ರ ಆಧಾರ್‌ ತಿದ್ದುಪಡಿ

ಗ್ರಾಮ ಪಂಚಾಯತ್ ಗಳಲ್ಲಿ ಶೀಘ್ರ ಆಧಾರ್‌ ತಿದ್ದುಪಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

“ಜಂಗಲ್‌ರಾಜ್‌ ಯುವರಾಜ’

“ಜಂಗಲ್‌ರಾಜ್‌ ಯುವರಾಜ’; ಮಹಾಘಟಬಂಧನ್‌ ಸಿಎಂ ಅಭ್ಯರ್ಥಿ ತೇಜಸ್ವಿ ವಿರುದ್ಧ ಮೋದಿ ವಾಗ್ಬಾಣ

ಬೆಂಗಳೂರು, ಕಾಶ್ಮೀರದಲ್ಲಿ ದಾಳಿ ನಡೆಸಿದ ಎನ್‌ಐಎ

ಬೆಂಗಳೂರು, ಕಾಶ್ಮೀರದಲ್ಲಿ ದಾಳಿ ನಡೆಸಿದ ಎನ್‌ಐಎ

ಮ್ಯಾಪ್‌ ವಿವಾದ: ಲಿಖಿತ ವಿವರಣೆ ನೀಡಲು ಟ್ವಿಟರ್‌ಗೆ ಸಮಿತಿ ಸೂಚನೆ

ಮ್ಯಾಪ್‌ ವಿವಾದ: ಲಿಖಿತ ವಿವರಣೆ ನೀಡಲು ಟ್ವಿಟರ್‌ಗೆ ಸಮಿತಿ ಸೂಚನೆ

ಪಾಕ್‌ ಗೆ ಮತ್ತೂಮ್ಮೆ ಹಿನ್ನೆಡೆ

ಪಾಕ್‌ ಗೆ ಮತ್ತೂಮ್ಮೆ ಹಿನ್ನೆಡೆ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಅರ್ಹ ಸಾಧಕರಿಗೆ ಗೌರವ

ಅರ್ಹ ಸಾಧಕರಿಗೆ ಗೌರವ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.