ನಿಮ್ಮ ಉಪ್ಪಿನಲ್ಲಿ ಪ್ಲಾಸ್ಟಿಕ್‌ ಇದೆಯೇ?

Team Udayavani, Feb 17, 2020, 6:08 AM IST

uppu

ಪ್ಲಾಸ್ಟಿಕ್‌ನ ಅತಿಯಾದ ಬಳಕೆಯ ದುಷ್ಪರಿಣಾಮಗಳ ಬಗ್ಗೆ ನಾವಿನ್ನೂ ಸಂಪೂರ್ಣ ಎಚ್ಚೆತ್ತಿಲ್ಲ. ನಾವೆಸೆಯುವ ಪ್ಲಾಸ್ಟಿಕ್ಕು ಸಾಗರ ಸೇರಿ, ವಾಪಸ್‌ ನಮ್ಮ ದೇಹಕ್ಕೇ ಬಂದು ಸೇರುತ್ತಲೇ ಇದೆ! ಈಗ ತಮಿಳುನಾಡಿನ ಸಂಶೋಧಕರ ತಂಡವೊಂದರ ವರದಿಯು ನಮ್ಮ ಆಹಾರ ಎಷ್ಟು ಸುರಕ್ಷಿತ ಎಂಬ ಪ್ರಮುಖ ಪ್ರಶ್ನೆ ಏಳುವಂತೆ ಮಾಡಿದೆ. ದೇಶದ ಪ್ರಮುಖ ಲವಣ ಉತ್ಪಾದನಾ ಸ್ಥಳವಾದ ಟ್ಯುಟಿಕಾರಿನ್‌ನ ಉಪ್ಪಿನಲ್ಲಿ ಮೈಕ್ರೋ ಪ್ಲಾಸ್ಟಿಕ್ಸ್‌ ಇರುವುದನ್ನು ಈ ವರದಿಯು ಸಾರುತ್ತಿದೆ.

ಇದೇ ಮೊದಲ ಬಾರಿಗೆ ಸಾಗರ ತಟದಲ್ಲಿರುವ ಉಪ್ಪು ಸಂಸ್ಕರಣಾ ಪಟ್ಟಿಗಳಲ್ಲಿ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನವನ್ನು ಭಾರತೀದಾಸನ್‌ ವಿ.ವಿ ಹಾಗೂ ವಿಯೆಟ್ನಾಂ ಮತ್ತು ದ.ಕೊರಿಯಾದಲ್ಲಿನ ವಿವಿಧ ವಿವಿಗಳ ಸಂಶೋಧಕರು ಜಂಟಿಯಾಗಿ ಕೈಗೊಂಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಪ್ರಸಕ್ತ ಅಧ್ಯಯನವು ಕಲ್ಲುಪ್ಪಿನ ಮೇಲೆ ನಡೆದಿದೆಯೇ ಹೊರತು ಕಾರ್ಖಾನೆಗಳಲ್ಲಿ ಶುದ್ಧೀಕರಿಸಿದ ಉಪ್ಪಿನ ಮೇಲಲ್ಲ. ಆದರೆ, ಕಳೆದ ಮೂರು ವರ್ಷಗಳಲ್ಲಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ನಡೆದಿರುವ ಅಧ್ಯಯನಗಳು ವಿವಿಧ ಬ್ರಾಂಡ್‌ಗಳ ಪ್ಯಾಕೇಜ್‌x ಉಪ್ಪಿನಲ್ಲೂ ಮೈಕ್ರೋ ಪ್ಲಾಸ್ಟಿಕ್‌ನ ಇರುವಿಕೆ ಪತ್ತೆ ಹಚ್ಚಿವೆ. 2018ರಲ್ಲಿ ನಡೆದ ಜಾಗತಿಕ ಅಧ್ಯಯನವು, “ಪ್ರಪಂಚದ 90 ಪ್ರತಿಶತ ಪ್ಯಾಕೇಜ್‌x ಉಪ್ಪಿನಲ್ಲಿ ಮೈಕ್ರೋ ಪ್ಲಾಸ್ಟಿಕ್‌ ಇವೆ, ಅದರಲ್ಲಿ ಅತಿ ಹೆಚ್ಚು ಮೈಕ್ರೋ ಪ್ಲಾಸ್ಟಿಕ್‌ ಇರುವುದು ಸಮುದ್ರದ ಉಪ್ಪಿನಲ್ಲಿ’ ಎಂದಿತ್ತು. ಜಾಗತಿಕವಾಗಿ ಪ್ರತಿಯೊಬ್ಬ ವ್ಯಕ್ತಿಯೂ ವರ್ಷಕ್ಕೆ 2000 ಮೈಕ್ರೋಪ್ಲಾಸ್ಟಿಕ್‌ ತುಣುಕುಗಳನ್ನು ಸೇವಿಸುತ್ತಿದ್ದಾನೆ ಎಂಬ ಅಂದಾಜಿದೆ. . ಟ್ಯುಟಿಕಾರಿನ್‌ನಲ್ಲಿನ ಉಪ್ಪು ದೇಶಾದ್ಯಂತ ಹಾಗೂ ಚೀನ ಮತ್ತು ಜಪಾನ್‌ಗೂ ರಫ್ತಾಗುತ್ತದೆ…

ಉಪ್ಪೆಂದರೆ…
ಉಪ್ಪು ಜೀವನಕ್ಕೆ ಅವಶ್ಯಕವಾದ ಒಂದು ಖನಿಜ. ಖಾದ್ಯ ಉಪ್ಪು ಮುಖ್ಯವಾಗಿ ಸೋಡಿಯಮ್‌ ಕ್ಲೋರೈಡ್‌ ಅನ್ನು ಒಳಗೊಂಡಿರುತ್ತದೆ. ಮಾನವನು ಆಹಾರದಲ್ಲಿ ಬಳಸುವ ಉಪ್ಪು ಹಲವು ಬಗೆಯಲ್ಲಿ ತಯಾರಾಗುತ್ತದೆ. ಇದರಲ್ಲಿ ಶುದ್ಧೀಕರಣಗೊಳ್ಳದ ಸಮುದ್ರದ ಉಪ್ಪು (ಕಲ್ಲುಪ್ಪು), ಶುದ್ಧೀಕೃತ ಪುಡಿ ಉಪ್ಪು (ಟೇಬಲ್‌ ಸಾಲ್ಟ್) ಮತ್ತು ಅಯೊಡಿನ್‌ ಒಳಗೊಂಡಿರುವ ಉಪ್ಪು ಪ್ರಮುಖವಾದವು. ಉಪ್ಪನ್ನು ಸಾಮಾನ್ಯವಾಗಿ ಸಮುದ್ರದ ನೀರು ಅಥವಾ ಭೂಮಿಯಲ್ಲಿನ ಉಪ್ಪಿನ ಬಂಡೆಗಳಿಂದ (ಲವಣಶಿಲೆ) ಪಡೆಯಲಾಗುತ್ತದೆ.

ಮೈಕ್ರೋ  ಪ್ಲ್ರಾಸ್ಟಿಕ್‌ಗಳ ಮೂಲ
– ಪ್ಲಾಸ್ಟಿಕ್‌ ಕವರ್‌ಗಳು, ಚಾಕ್ಲೆಟ್‌-ಚಿಪ್ಸ್‌, ಹಾಲಿನ ಪ್ಯಾಕೆಟ್‌ಗಳು ಪಾಲಿಥಿಲೀನ್‌ ಮತ್ತು ಪಾಲಿಪ್ರೊಪಿಲೀನ್‌ನ ಪ್ರಮುಖ ಮೂಲಗಳಾಗಿವೆ. ಇನ್ನು ಮೀನಿನ ಬಲೆಗಳು ಮತ್ತು ಜವಳಿ ಉದ್ಯಮದ ತ್ಯಾಜ್ಯವೂ ಮೈಕ್ರೋಪ್ಲಾಸ್ಟಿಕ್‌ನ ಮೂಲವಾಗಿವೆ.
– ಪರಿಣತರ ಪ್ರಕಾರ ಕಚ್ಚಾ ಉಪ್ಪು ಶುದ್ಧೀಕರಿಸುವಾಗ ಮೈಕ್ರೋ ಪ್ಲಾಸ್ಟಿಕ್‌ಗಳನ್ನು ಪ್ರತ್ಯೇಕಿಸುವಂಥ ಪರಿಣಾಮಕಾರಿ ತಂತ್ರಜ್ಞಾನ ಇಲ್ಲ.

ಅಧ್ಯಯನದ ಮಾರ್ಗ
ಟ್ಯುಟಿಕಾರಿನ್‌ನ 25 ವಿವಿಧ ಉಪ್ಪು ತಯಾರಣಾ ಪಟ್ಟಿಗಳಿಂದ ತಲಾ 1.5 ಕೆ.ಜಿ. ಸ್ಯಾಂಪಲ್‌ ಸಂಗ್ರಹಿಸಲಾಗಿತ್ತು.

ಉಪ್ಪಿನಲ್ಲಿ ದೊರೆತ 60 ಪ್ರತಿಶತದಷ್ಟು ಮೈಕ್ರೋಪ್ಲಾಸ್ಟಿಕ್‌ಗಳು 100 ಮೈಕ್ರೋಮೀಟರ್‌ಗಿಂತಲೂ ಕಿರಿದಾಗಿವೆ.

ಮೈಕ್ರೋ ಪ್ಲಾಸ್ಟಿಕ್‌ಗಳಲ್ಲಿ ಪಾಲಿಪ್ರೊಪೈಲೀನ್‌, ಪಾಲಿಥಿಲೀನ್‌, ನೈಲಾನ್‌ ಮತ್ತು ಸೆಲ್ಯುಲೋಸ್‌ ಕೂಡ ಇವೆ.

ಮೈಕ್ರೋಪ್ಲಾಸ್ಟಿಕ್‌ ಹೇಗೆ ಸೇರಿಕೊಳ್ಳುತ್ತಿದೆ?
ಕಡಲು ಸೇರುವ ಪ್ಲಾಸ್ಟಿಕ್‌ ಕಪ್ಪುಗಳು, ಕವರ್‌ಗಳು, ಬಾಟಲಿಗಳು, ಮೀನಿನ ಬಲೆಗಳು, ಹಲವು ದೇಶಗಳ ಪ್ಲಾಸ್ಟಿಕ್‌ ತ್ಯಾಜ್ಯಗಳೆಲ್ಲ ಕ್ರಮೇಣ ಪುಡಿಯಾಗುತ್ತಾ ಮೈಕ್ರೋಪ್ಲಾಸ್ಟಿಕ್‌ಗಳಾಗುತ್ತವೆ. ದೊಡ್ಡ ಪ್ಲಾಸ್ಟಿಕ್‌ ಪುಡಿಯಾಗುತ್ತಾ 5 ಮಿಲಿಮೀಟರ್‌ಗೂ ಕಡಿಮೆ ತುಂಡಾಗಿ ಬದಲಾದರೆ ಅದನ್ನು ಮೈಕ್ರೋಪ್ಲಾಸ್ಟಿಕ್‌ ಎನ್ನುತ್ತಾರೆ. ಟ್ಯುಟಿಕಾರಿನ್‌ ಎಂದಷ್ಟೇ ಅಲ್ಲ, ಪ್ಲಾಸ್ಟಿಕ್‌ ತ್ಯಾಜ್ಯ ಹೊಂದಿರುವ ಯಾವುದೇ ಸಾಗರ ನೀರಿನ ಉಪ್ಪಿನಲ್ಲೂ ಮೈಕ್ರೋ ಪ್ಲಾಸ್ಟಿಕ್‌ಗಳು ಇದ್ದೇ ಇರುತ್ತವೆ.

ಹಿಂದಿನ ಅಧ್ಯಯನಗಳು
2019: ತೈವಾನ್‌ನಲ್ಲಿ ನಡೆದ ಅಧ್ಯಯನವು 4.4ಕೆ.ಜಿ. ಉಪ್ಪಿನಲ್ಲಿ 43 ಮೈಕ್ರೋ ಪ್ಲಾಸ್ಟಿಕ್‌ ಕಣಗಳಿರುವುದನ್ನು ತೋರಿಸಿತು.
2018: ಐಐಟಿ ಬಾಂಬೆಯ ಸಂಶೋಧಕರು, ದೇಶದ ಹಲವು ಉಪ್ಪಿನ ಬ್ರಾಂಡ್‌ಗಳಲ್ಲಿ 626 ಮೈಕ್ರೋ ಪ್ಲಾಸ್ಟಿಕ್‌ ಪಾರ್ಟಿಕಲ್‌ಗಳನ್ನು ಪತ್ತೆ ಹಚ್ಚಿದ್ದರು.
2018: ದಕ್ಷಿಣ ಕೊರಿಯಾ ಮತ್ತು ಗ್ರೀನ್‌ಪೀಸ್‌ ಈಸ್ಟ್‌ ಏಷ್ಯಾದ ಸಂಶೋಧಕರು, ಜಗತ್ತಿನಾದ್ಯಂತ 39 ಪ್ರಮುಖ ಬ್ರಾಂಡ್‌ಗಳ ಅಧ್ಯಯನ ನಡೆಸಿ, ಅವುಗಳಲ್ಲಿ 36 ಕಂಪನಿಗಳ ಉಪ್ಪಿನಲ್ಲಿ ಮೈಕ್ರೋಪ್ಲಾಸ್ಟಿಕ್‌ ಇರುವುದನ್ನು ಪತ್ತೆ ಹಚ್ಚಿದರು.
2017: ಚೀನಾದಲ್ಲಿ ನಡೆದ ಈ ಅಧ್ಯಯನವು ಒಂದು ಕೆ.ಜಿ. ಸಮುದ್ರದ ಉಪ್ಪಿನಲ್ಲಿ 550-681 ಮೈಕ್ರೋಪ್ಲಾಸ್ಟಿಕ್‌ಗಳು, ಹಾಗೂ ಶಿಲೆ/ಬಾವಿಗಳಿಂದ ತೆಗೆದ ಉಪ್ಪಿನಿಂದ 7-200 ಮೈಕ್ರೋಪ್ಲಾಸ್ಟಿಕ್‌ ಇರುವುದನ್ನು ಕಂಡುಕೊಂಡಿತ್ತು.

2018ರಲ್ಲೂ ಬಂದಿತ್ತು ಅಧ್ಯಯನ ವರದಿ 
2018ರಲ್ಲಿ ಐಐಟಿ ಬಾಂಬೆಯ ಇಬ್ಬರು ಸಂಶೋಧಕರು ದೇಶದ ವಿವಿಧ ಉಪ್ಪಿನ ಬ್ರಾಂಡ್‌ಗಳಲ್ಲಿ 626 ಮೈಕ್ರೋಪ್ಲಾಸ್ಟಿಕ್‌ ಕಣಗಳನ್ನು ಪತ್ತೆಹಚ್ಚಿದ್ದರು. ಇದರಲ್ಲಿ 63 ಪ್ರತಿಶತ ಮೈಕ್ರೋಪ್ಲಾಸ್ಟಿಕ್‌ ಕಣಗಳು “ತುಣುಕು’ಗಳ ರೂಪದಲ್ಲಿದ್ದರೆ, 37 ಪ್ರತಿಶತ” ನಾರಿನ’ ರೂಪದಲ್ಲಿದ್ದವು. ಸದ್ಯಕ್ಕಂತೂ ಮೈಕ್ರೋ ಪ್ಲಾಸ್ಟಿಕ್‌ಗಳನ್ನು 100 ಪ್ರತಿಶತ ಬೇರ್ಪಡಿಸುವಂಥ ತಂತ್ರಜ್ಞಾನ ಇಲ್ಲ ಎನ್ನುತ್ತಾರೆ, ಸಂಶೋಧಕರಲ್ಲೊಬ್ಬರಾದ ಅಮೃತಾಂಶೂ ಶ್ರೀವಾಸ್ತವ್‌. ಇದಷ್ಟೇ ಅಲ್ಲದೇ ಒಬ್ಬ ಭಾರತೀಯ ದಿನಕ್ಕೆ 5 ಗ್ರಾಂ ಉಪ್ಪು ಸೇವಿಸುತ್ತಾನೆ ಎಂದರೆ, ವಾರ್ಷಿಕವಾಗಿ ಅವನ ದೇಹದಲ್ಲಿ 117 ಮೈಕ್ರೋಗ್ರಾಮ್‌ನಷ್ಟು ಮೈಕ್ರೋಪ್ಲಾಸ್ಟಿಕ್‌ ಸೇರುತ್ತಿದೆ ಎಂದೂ ‘Contamination of Indian Sea Salts with Microplastics and a Potential Prevention Strategy’ ಎಂಬ ಈ ಅಧ್ಯ ಯನ ಹೇಳಿತ್ತು.

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.