ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷರೇ ಮುಖ್ಯ ಅತಿಥಿ
Team Udayavani, Nov 27, 2022, 7:15 PM IST
ನವದೆಹಲಿ: ಈಜಿಪ್ಟ್ ಅಧ್ಯಕ್ಷ ಅಬ್ಧೆಲ್ ಫತ್ತಾಹ್ ಅಲ್-ಸಿಸಿ ಅವರು ಮುಂದಿನ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವುದು ಖಚಿತವಾಗಿದೆ. ವಿದೇಶಾಂಗ ಇಲಾಖೆಯೇ ಭಾನುವಾರ ಈ ಮಾಹಿತಿ ನೀಡಿದೆ.
“ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್ ನ ಅಧ್ಯಕ್ಷರೊಬ್ಬರು ಗಣರಾಜ್ಯ ದಿನದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.
ಪ್ರಧಾನಿ ನರೇಂದ್ರ ಮೋದಿಯವರು ಕಳುಹಿಸಿಕೊಟ್ಟಿದ್ದ ಅಧಿಕೃತ ಆಹ್ವಾನವನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅ.16ರಂದೇ ಈಜಿಪ್ಟ್ ಅಧ್ಯಕ್ಷರಿಗೆ ಹಸ್ತಾಂತರಿಸಿದ್ದರು. ಪ್ರಸಕ್ತ ವರ್ಷ ಎರಡೂ ದೇಶಗಳು ತಮ್ಮ ರಾಜತಾಂತ್ರಿಕ ಬಾಂಧವ್ಯದ 75ನೇ ವರ್ಷವನ್ನು ಆಚರಿಸುತ್ತಿವೆ. 2022-23ರಲ್ಲಿ ಭಾರತದ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಈಜಿಪ್ಟ್ ಅನ್ನು “ಅತಿಥಿ ದೇಶ’ವಾಗಿಯೂ ಆಹ್ವಾನಿಸಲಾಗಿದೆ’ ಎಂದೂ ವಿದೇಶಾಂಗ ಇಲಾಖೆಯ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೂಜು, ಮನಿ ಲಾಂಡರಿಂಗ್; ಚೀನದ್ದು ಸೇರಿದಂತೆ 232 ವಿದೇಶಿ ಅಪ್ಲಿಕೇಶನ್ಗಳಿಗೆ ನಿರ್ಬಂಧ
ಅತ್ಯಾಚಾರ ಎಸಗಿ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ 16 ವರ್ಷದ ಬಾಲಕ
ಗ್ಯಾಸ್ ಪೈಪ್ಲೈನ್ ಸ್ಪೋಟಗೊಂಡು ಇಬ್ಬರು ಕಾರ್ಮಿಕರ ಸಾವು
ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್!
“ವಂದೇ ಮೆಟ್ರೋ’ಗೆ ನಮೋ ಕರೆ! 100 ಕಿ.ಮೀ. ವ್ಯಾಪ್ತಿಯ 2 ನಗರಗಳ ನಡುವೆ ಸಂಚಾರಕ್ಕೆ ಯೋಜನೆ