ಅಂತ್ಯಕ್ರಿಯೆಗೆ ಗ್ರಾಮಸ್ಥರ ವಿರೋಧ : ಸೈಕಲ್ ಮೇಲೆ ಪತ್ನಿ ಶವ ಹೊತ್ತು ಊರೆಲ್ಲ ತಿರುಗಿದ ವೃದ್ಧ

Team Udayavani, Apr 28, 2021, 3:29 PM IST

fghfthdtt

ಉತ್ತರ ಪ್ರದೇಶ: ಪಾಪಿ ಕೋವಿಡ್ ಸೋಂಕು ಜನರ ಪ್ರಾಣದ ಜೊತೆಗೆ ಮಾನವೀಯತೆಯನ್ನು ಕಿತ್ತುಕೊಳ್ಳುತ್ತಿದೆ. ಕೋವಿಡ್ ಮಹಾಮಾರಿಗೆ ಭಯಪಟ್ಟು ಒಬ್ಬರಿಗೊಬ್ಬರು ಸಹಾಯ ಮಾಡದಂತಹ ಪರಿಸ್ಥಿತಿಗೆ ಜನರು ಬಂದು ತಲುಪಿದ್ದಾರೆ. ಇದೀಗ ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ.

ಅಂತ್ಯ ಸಂಸ್ಕಾರಕ್ಕಾಗಿ ತನ್ನ ಮಡದಿಯ ಶವವನ್ನು ವೃದ್ಧನೋರ್ವ ಸೈಕಲಿನಲ್ಲಿ ಹೊತ್ತು ಇಡೀ ಊರು ತಿರುಗಾಡಿದ ಮನಕಲಕುವಂತಹ ಘಟನೆ ಉತ್ತರ ಪ್ರದೇಶದ ಜೌನಪುರ್ ಜಿಲ್ಲೆಯ ಅಂಬೆರಪುರ ಗ್ರಾಮದಲ್ಲಿ ನಡೆದಿದೆ. ವಯಸ್ಸಾದ ತಿಲಕಧರಿ ಸಿಂಗ್ ಅವರಿಗೆ ಹೆಂಡತಿ ಕಳೆದುಕೊಂಡ ದುಃಖ ಒಂದು ಕಡೆಯಾದರೆ, ಆಕೆಯ ಅಂತ್ಯ ಸಂಸ್ಕಾರಕ್ಕೆ ಹಳ್ಳಿ ಜನ ಅವಕಾಶ ನೀಡದಿದ್ದದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ತಿಲಕಧರಿ ಅವರ ಪತ್ನಿ 50 ವರ್ಷದ ರಾಜಕುಮಾರಿ ಅವರ ಸ್ಥಿತಿ ಸೋಮವಾರ ತೀವ್ರ ಬಿಗಡಾಯಿಸಿತ್ತು. ಕೂಡಲೇ ಆಕೆಯನ್ನು ಉಮಾನಾಥ್ ಸಿಂಗ್ ಹೆಸರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಳು.

ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಸಿಗದ ಹಿನ್ನೆಲೆ ತಿಲಕ್ ಧರಿ ತನ್ನ ಪತ್ನಿಯ ಶವವನ್ನು ಸೈಕಲ್ ಮೇಲೆ ತನ್ನೂರಿಗೆ ತಂದಿದ್ದ. ಆದರೆ, ಊರಿನ ಜನ ಮೃತ ದೇಹದ ಅಂತ್ಯ ಸಂಸ್ಕಾರಕ್ಕೆ ಅನುಮತಿ ನೀಡಿಲ್ಲ. ಆಕೆ ಕೋವಿಡ್‍ನಿಂದ ಮೃತ ಪಟ್ಟಿರಬಹುದೆಂದು ಶಂಕಿಸಿದ ಗ್ರಾಮಸ್ಥರು, ಹೆಣ ಹೂಳಲು ವಿರೋಧ ವ್ಯಕ್ತಪಡಿಸಿದ್ದಾರೆ.

ಹೆಂಡತಿಯ ಶವ ಸೈಕಲ್ ಮೇಲೆ ಇಟ್ಟುಕೊಂಡು ಇಡೀ ಊರು ಸುತ್ತಿದ ವೃದ್ಧನಿಗೆ ಯಾರೋಬ್ಬರು ಸಹಾಯ ಮಾಡಿಲ್ಲ. ಕೊನೆಗೆ ನಡುರಸ್ತೆಯಲ್ಲಿಯೇ ಸೈಕಲ್ ಹಾಗೂ ಶವ ಬಿಟ್ಟು ದಿಕ್ಕು ತೋಚದಂತೆ ತಿಲಕಧರಿ ಕುಳಿತು ಬಿಟ್ಟಿದ್ದ. ಆತನ ದುಸ್ಥಿತಿಯ ಫೋಟೊಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಕಣ‍್ಣಾಲಿಗೆಗಳನ್ನು ತೇವಗೊಳಿಸುತ್ತಿವೆ.

ಕೊನೆಗೆ ಜೌನಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧನಿಗೆ ಸಹಾಯ ಮಾಡಿದ್ದಾರೆ. ಪೊಲೀಸರೆ ಮುಂದೆ ನಿಂತು ಶವಕ್ಕೆ ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ.

ಟಾಪ್ ನ್ಯೂಸ್

ಬಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಡಬಲ್ ಸಂಭ್ರಮ: ಸ್ವರ್ಣ ಗೆದ್ದ ಲಕ್ಷ್ಯ ಸೇನ್

ಬಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಡಬಲ್ ಸಂಭ್ರಮ: ಸ್ವರ್ಣ ಗೆದ್ದ ಲಕ್ಷ್ಯ ಸೇನ್

Shindhe

ಕೊನೆಗೂ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್

14

ವಿಟ್ಲ: ಆಕ್ಟಿವಾ- ಜೀಪ್ ಡಿಕ್ಕಿ; ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಸಾವು

1-sdsdsa

ಪ್ರವಾದಿ ಚರ್ಚೆ: ಬಂಧನ ಭೀತಿಯಿಂದ ನಾವಿಕಾ ಕುಮಾರ್ ಪಾರು

‘ಹೊಂದಿಸಿ ಬರೆಯಿರಿ’ ಚಿತ್ರದ ಮೊದಲ ಹಾಡು ಬಿಡುಗಡೆ

‘ಹೊಂದಿಸಿ ಬರೆಯಿರಿ’ ಚಿತ್ರದ ಮೊದಲ ಹಾಡು ಬಿಡುಗಡೆ

priyaanka

ಬಿಜೆಪಿಗನ ಮನೆ ಬುಲ್ಡೋಜ್ ಕೇವಲ ಪ್ರದರ್ಶನ: ಪ್ರಿಯಾಂಕಾ ಗಾಂಧಿ

tdy-7

ಸಾರ್ವಜನಿಕರೇ ಇಲ್ಲಿ ಕೇಳಿ.. ವಿಶೇಷ ಪೋಸ್ಟ್‌ ಹಾಕಿ ಕಾಳಜಿ ತೋರಿಸಿದ ರಶ್ಮಿಕಾ ಮಂದಣ್ಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shindhe

ಕೊನೆಗೂ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್

1-sdsdsa

ಪ್ರವಾದಿ ಚರ್ಚೆ: ಬಂಧನ ಭೀತಿಯಿಂದ ನಾವಿಕಾ ಕುಮಾರ್ ಪಾರು

priyaanka

ಬಿಜೆಪಿಗನ ಮನೆ ಬುಲ್ಡೋಜ್ ಕೇವಲ ಪ್ರದರ್ಶನ: ಪ್ರಿಯಾಂಕಾ ಗಾಂಧಿ

ಬ್ಲ್ಯಾಕ್‌ ಮ್ಯಾಜಿಕ್‌: 5 ವರ್ಷದ ಬಾಲಕಿಯನ್ನು ಥಳಿಸಿ ಹತ್ಯೆಗೈದ ಹೆತ್ತವರು

ಬ್ಲ್ಯಾಕ್‌ ಮ್ಯಾಜಿಕ್‌: 5 ವರ್ಷದ ಬಾಲಕಿಯನ್ನು ಥಳಿಸಿ ಹತ್ಯೆಗೈದ ಹೆತ್ತವರು

ಪತ್ರಾ ಚವ್ಲಾ ಪ್ರಕರಣ: ಸಂಜಯ್ ರಾವತ್ ನ್ಯಾಯಾಂಗ ಬಂಧನ ಆ.22ರವರೆಗೆ ವಿಸ್ತರಣೆ

ಪತ್ರಾ ಚವ್ಲಾ ಹಗರಣ: ಸಂಜಯ್ ರಾವತ್ ನ್ಯಾಯಾಂಗ ಬಂಧನ ಆ.22ರವರೆಗೆ ವಿಸ್ತರಣೆ

MUST WATCH

udayavani youtube

ತುಂಬಿ ಹರಿಯುತ್ತಿದೆ ಬಾರೇಹಳ್ಳ ಚೆಕ್ ಡ್ಯಾಂ… ನೋಡಲು ಅದೆಷ್ಟು ಸುಂದರ…

udayavani youtube

ಮಾನ ಮರ್ಯಾದೆ ಇದೆಯೇನ್ರಿ…? ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ

udayavani youtube

ಅಕ್ರಮ ಗೋಹತ್ಯೆ ತಡೆಯಲು ಯೋಗಿ ಮಾದರಿಗೆ ಮುಂದಾದ ಚಿಕ್ಕಮಗಳೂರು ನಗರಸಭೆ

udayavani youtube

ಜೆಸ್ಕಾಂ ಅಧಿಕಾರಿಗಳೇ ಇಲ್ಲಿ ಗಮನಿಸಿ.. ಮನೆಯ ಮಾಳಿಗೆ ತಾಗುತ್ತಿವೆ ವಿದ್ಯುತ್ ತಂತಿಗಳು!

udayavani youtube

NEWS BULLETIN 08-08-2022

ಹೊಸ ಸೇರ್ಪಡೆ

ಬಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಡಬಲ್ ಸಂಭ್ರಮ: ಸ್ವರ್ಣ ಗೆದ್ದ ಲಕ್ಷ್ಯ ಸೇನ್

ಬಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಡಬಲ್ ಸಂಭ್ರಮ: ಸ್ವರ್ಣ ಗೆದ್ದ ಲಕ್ಷ್ಯ ಸೇನ್

Shindhe

ಕೊನೆಗೂ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್

14

ಪಾಲಿಕ್ಲಿನಿಕ್‌ಗೆ ಬೇಕಿದೆ ಎಕ್ಸರೇ ಟ್ರೀಟ್‌ಮೆಂಟ್‌!

tdy-13

ಸಾಗರ: ಉಪ ವಲಯ ಅರಣ್ಯಾಧಿಕಾರಿ ಪ್ರಮೋದ್ ಮೇಲಿನ ಪ್ರಕರಣ ವಾಪಾಸಿಗೆ ಆಗ್ರಹ

14

ವಿಟ್ಲ: ಆಕ್ಟಿವಾ- ಜೀಪ್ ಡಿಕ್ಕಿ; ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.