Election ಪಂಚರಾಜ್ಯಗಳಲ್ಲಿ ಕಾಂಚಾಣ ಕುಣಿತ! ಏಳು ಪಟ್ಟು ಅಧಿಕ

ಈವರೆಗೆ ಒಟ್ಟು 1,760 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ

Team Udayavani, Nov 21, 2023, 12:38 AM IST

Election ಪಂಚರಾಜ್ಯಗಳಲ್ಲಿ ಕಾಂಚಾಣ ಕುಣಿತ! ಏಳು ಪಟ್ಟು ಅಧಿಕ

ಹೊಸದಿಲ್ಲಿ: ಪಂಚರಾಜ್ಯ ಚುನಾವಣೆಯಲ್ಲಿ ಈ ಬಾರಿ ಕಾಂಚಾಣದ ಸದ್ದು ಜೋರಾಗಿಯೇ ಕೇಳಿಬಂದಿದೆ. ಮತದಾರರಿಗೆ ಆಮಿಷವೊಡ್ಡ ಲೆಂದು ಸಂಗ್ರಹಿಡಲಾದ ಹಾಗೂ ಸಾಗಿಸಲಾಗು ತ್ತಿದ್ದ ಬರೋಬ್ಬರಿ 1,760 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಈವರೆಗೆ ವಶಪಡಿಸಿಕೊಳ್ಳಲಾಗಿದೆ. 2018ಕ್ಕೆ ಹೋಲಿಸಿದರೆ ಈ ಮೊತ್ತದಲ್ಲಿ 7 ಪಟ್ಟು ಏರಿಕೆ ಕಂಡುಬಂದಿದೆ ಎಂದು ಸ್ವತಃ ಚುನಾವಣ ಆಯೋಗ ತಿಳಿಸಿದೆ.

ಅ.9ರಂದು ಚುನಾವಣೆ ದಿನಾಂಕ ಘೋಷಣೆ ಯಾದಾಗಿನಿಂದ ಈವರೆಗೆ ಉಡುಗೊರೆಗಳು, ನಗದು, ಡ್ರಗ್ಸ್‌, ಮದ್ಯ, ಅಮೂಲ್ಯ ಲೋಹಗಳು ಸೇರಿದಂತೆ 1,760 ಕೋಟಿ ರೂ. ಮೌಲ್ಯದ ಸರಕುಗಳನ್ನು ಜಪ್ತಿ ಮಾಡಲಾಗಿದೆ. ಈ ಮೊತ್ತವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. 2018ರ ಚುನಾವಣೆಯಲ್ಲಿ 239.15 ಕೋಟಿ ರೂ. ಮೌಲ್ಯದ ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು ಎಂದು ಆಯೋಗ ಮಾಹಿತಿ ನೀಡಿದೆ.

ಈ ಹಿಂದೆ ಕರ್ನಾಟಕ, ಗುಜರಾತ್‌, ಹಿಮಾಚಲ, ನಾಗಾಲ್ಯಾಂಡ್‌, ಮೇಘಾಲಯ ಮತ್ತು ತ್ರಿಪುರಾ ವಿಧಾನ ಸಭೆಗಳಿಗೆ ನಡೆದ ಚುನಾವಣೆ ವೇಳೆ ಒಟ್ಟಾರೆ 1,400 ಕೋಟಿ ರೂ. ಮೌಲ್ಯದ ವಸ್ತು ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದೂ ತಿಳಿಸಿದೆ.

ಎಲ್ಲವೂ ಮೋದಿ ಹಿಡಿತದಲ್ಲಿ: ಬಂದರುಗಳಿಂದ ವಿಮಾನ ನಿಲ್ದಾಣದವರೆಗೆ ಎಲ್ಲವನ್ನೂ ಪ್ರಧಾನಿ ಮೋದಿಯವರೇ ನಿಯಂತ್ರಿಸುತ್ತಿದ್ದಾರೆ. ಅವರು ದೇಶವಾಸಿಗಳನ್ನು “ಗುಲಾಮರನ್ನಾಗಿಸುವ’ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಸಾರ್ವಜನಿಕ ಪ್ರಚಾರ ರ‍್ಯಾಲಿ ನಡೆಸಿ ಮಾತನಾಡಿದ ಅವರು, “ಮೋದಿಯವರು ಎಲ್ಲೆಲ್ಲಿ ಪ್ರಯಾಣಿಸುತ್ತಾರೋ, ಅಲ್ಲಿ ನಮಗೆ ವಿಮಾನ ದಲ್ಲಿ ಆಗಮಿಸಲು ಅನುಮತಿಯೇ ಸಿಗುತ್ತಿಲ್ಲ. ಅಂದರೆ ಭೂಮಿ, ವಾಯು, ಬಂದರು, ಏರ್‌ಪೋರ್ಟ್‌ ಎಲ್ಲವೂ ಅವರ ಹಿಡಿತದಲ್ಲಿದೆ. ಅವರು ನಮ್ಮನ್ನು ಹೆದರಿಸಲು ಯತ್ನಿಸುತ್ತಿದ್ದಾರೆ. ಆದರೆ ನಾವು ಯಾವುದಕ್ಕೂ ಹೆದರುವವರಲ್ಲ’ ಎಂದಿದ್ದಾರೆ.

ಕಿಸಾನ್‌ ಸಮ್ಮಾನ್‌ ಮೊತ್ತ 12 ಸಾವಿರಕ್ಕೇರಿಕೆ!
ರಾಜಸ್ಥಾನದಲ್ಲಿ ಈಗಾಗಲೇ ಕಡಿಮೆ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ ಘೋಷಿಸಿರುವ ಬಿಜೆಪಿ ಈಗ ಮತ್ತೂಂದು ಮಹತ್ವದ ಘೋಷಣೆ ಮಾಡಿದೆ. ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ರೈತರಿಗೆ ನೀಡಲಾಗುತ್ತಿದ್ದ ವಾರ್ಷಿಕ ಸಹಾಯಧನವನ್ನು ಈಗಿರುವ 6 ಸಾವಿರ ರೂ.ಗಳಿಂದ 12 ಸಾವಿರ ರೂ.ಗಳಿಗೆ ಏರಿಸುವುದಾಗಿ ಸೋಮವಾರ ಸ್ವತಃ ಪ್ರಧಾನಿ ಮೋದಿಯವರೇ ಆಶ್ವಾಸನೆ ನೀಡಿದ್ದಾರೆ. ಹನುಮಾನ್‌ಗಢದಲ್ಲಿ ನಡೆದ ರ್ಯಾಲಿಯಲ್ಲಿ ಅವರು ಈ ಘೋಷಣೆ ಮಾಡಿದ್ದು, ಬಿಜೆಪಿ ಅಧಿಕಾರಕ್ಕೇರಿದರೆ ರೈತರಿಗೆ ಬೋನಸ್‌ ನೀಡುವುದಾಗಿಯೂ ತಿಳಿಸಿದ್ದಾರೆ. ಇದೇ ವೇಳೆ ರಾಜಸ್ಥಾನದ ಕಾಂಗ್ರೆಸ್‌ ಸರಕಾರಕ್ಕೆ ಓಲೈಕೆ ರಾಜಕಾರಣ ಬಿಟ್ಟು ಬೇರೇನೂ ಗೊತ್ತಿಲ್ಲ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವುದೇ ಅದರ ಗುರಿ ಎಂದೂ ಮೋದಿ ಹೇಳಿದ್ದಾರೆ.

ಯಾರು ಜಾತಿ ಅಥವಾ ಧರ್ಮದ ಹೆಸರಲ್ಲಿ ಮತ ಯಾಚಿಸು ತ್ತಾರೋ, ಅಂಥವರು ತಮ್ಮ ಕೆಲಸದ ಆಧಾರದಲ್ಲಿ ಮತ ಕೇಳುವ ಸ್ಥಿತಿಯಲ್ಲಿಲ್ಲ ಎಂದು ಅರ್ಥ. ಹೀಗಾಗಿ ಪಕ್ಷಗಳು ಮಾಡಿರುವ ಕೆಲಸವನ್ನು ನೋಡಿಕೊಂಡು ಮತ ಚಲಾಯಿಸಿ.
-ಪ್ರಿಯಾಂಕಾ ವಾದ್ರಾ,
ಕಾಂಗ್ರೆಸ್‌ ನಾಯಕಿ

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ನೀಡಿರುವ ಶೇ.4 ಮೀಸಲಾತಿಯನ್ನು ಕಿತ್ತೂಗೆದು, ಅದನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಹಂಚುತ್ತೇವೆ.
-ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ತೆಲಂಗಾಣದಲ್ಲಿರುವ ಕಾಂಗ್ರೆಸ್‌ ಸಂಸದರು ಆರೆಸ್ಸೆಸ್‌ನಲ್ಲಿದ್ದವರು. ಕಾಂಗ್ರೆಸ್‌ನ ರಿಮೋಟ್‌ ಕಂಟ್ರೋಲ್‌ ಇರುವುದು ಮೋಹನ್‌ ಭಾಗವತ್‌ ಅವರ ಕೈಯ್ಯಲ್ಲಿ. ಬಿಜೆಪಿ ಮತ್ತು ಕಾಂಗ್ರೆಸ್‌ನದ್ದು ದ್ವೇಷದಿಂದ ಕೂಡಿದ ರಾಜಕಾರಣ.
-ಅಸಾದುದ್ದೀನ್‌ ಒವೈಸಿ, ಎಐಎಂಐಎಂ ಮುಖ್ಯಸ್ಥ

ಟಾಪ್ ನ್ಯೂಸ್

13-uv-fusion

UV Fusion: ಪ್ರವಾಸದಲ್ಲಿ ನಿವಾಸ ನೋಡೋಣ…

Mangaluru ಸಹಿತ 5 ಕಡೆ ಸರಕಾರಿ ವಿಶೇಷ ದತ್ತು ಸಂಸ್ಥೆ

Mangaluru ಸಹಿತ 5 ಕಡೆ ಸರಕಾರಿ ವಿಶೇಷ ದತ್ತು ಸಂಸ್ಥೆ

Horoscope: ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ

Horoscope: ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ

1-sadasad

T20; ಇಂದು ದ್ವಿತೀಯ ಟಿ20: ಗೆಲುವಿನ ಗೌರವಕ್ಕೆ ಕಾದಿದೆ ಕೌರ್‌ ಪಡೆ

1-adsadas

Women’s Premier League:ಇಂದು ಹರಾಜು; ರೇಸ್‌ನಲ್ಲಿದ್ದಾರೆ 165 ಆಟಗಾರ್ತಿಯರು

mPuttur ಹಾಲು ಸಂಸ್ಕರಣೆ, ಪ್ಯಾಕಿಂಗ್‌ ಘಟಕ: ಜಾಗ ಮಂಜೂರಿಗೆ ಸರಕಾರದ ಅನುಮತಿ

Puttur ಹಾಲು ಸಂಸ್ಕರಣೆ, ಪ್ಯಾಕಿಂಗ್‌ ಘಟಕ: ಜಾಗ ಮಂಜೂರಿಗೆ ಸರಕಾರದ ಅನುಮತಿ

Actress Leelavathi ಲೀನಾ ಸಿಕ್ವೇರಾ ಲೀಲಾವತಿಯಾಗಿ ಸಿನಿ ಲೋಕದ ಪಯಣ

Actress Leelavathi ಲೀನಾ ಸಿಕ್ವೇರಾ ಲೀಲಾವತಿಯಾಗಿ ಸಿನಿ ಲೋಕದ ಪಯಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jharkhand mon

ಕೈ ಸಂಸದನಲ್ಲಿ 220 ಕೋ.ರೂ. ನೋಟು ಕಂತೆ!

shaktikanth das

RBI: ಆಸ್ಪತ್ರೆ, ಶಿಕ್ಷಣಕ್ಕೆ ಯುಪಿಐ ಪಾವತಿ ಮಿತಿ 5 ಲ.ರೂ.- ಶಕ್ತಿಕಾಂತ ದಾಸ್‌

mike recorder

Rappers: ಜಾಲತಾಣಗಳಲ್ಲಿ ಕಾಶ್ಮೀರಿ ರ‍್ಯಾಪರ್‌ಗಳ ಸಂಚಲನ

sibal sharma

ಇತಿಹಾಸದ ಅರಿವಿಲ್ಲದೆ ಮಾತನಾಡಕೂಡದು: ಕಪಿಲ್‌ ಸಿಬಲ್‌ ವಿರುದ್ಧ ಹಿಮಂತ ಬಿಸ್ವಾ ಶರ್ಮಾ ಕಿಡಿ

garbha

Garba: ವಿದೇಶದಲ್ಲೂ ಗರ್ಬಾ ನೃತ್ಯ ವೈರಲ್‌

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

13-uv-fusion

UV Fusion: ಪ್ರವಾಸದಲ್ಲಿ ನಿವಾಸ ನೋಡೋಣ…

Mangaluru ಸಹಿತ 5 ಕಡೆ ಸರಕಾರಿ ವಿಶೇಷ ದತ್ತು ಸಂಸ್ಥೆ

Mangaluru ಸಹಿತ 5 ಕಡೆ ಸರಕಾರಿ ವಿಶೇಷ ದತ್ತು ಸಂಸ್ಥೆ

Horoscope: ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ

Horoscope: ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ

1-sadasad

T20; ಇಂದು ದ್ವಿತೀಯ ಟಿ20: ಗೆಲುವಿನ ಗೌರವಕ್ಕೆ ಕಾದಿದೆ ಕೌರ್‌ ಪಡೆ

1-adsadas

Women’s Premier League:ಇಂದು ಹರಾಜು; ರೇಸ್‌ನಲ್ಲಿದ್ದಾರೆ 165 ಆಟಗಾರ್ತಿಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.