
ತತ್‌ಕ್ಷಣ ಚುನಾವಣೆ ನಡೆದರೆ ಮೋದಿಯೇ ಪಿಎಂ: “ಇಂಡಿಯಾ ಟುಡೇ’ “ಸಿ-ವೋಟರ್’ ಅಭಿಮತ
Team Udayavani, Jan 27, 2023, 7:10 AM IST

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ತತ್‌ಕ್ಷಣ ಚುನಾವಣೆ ನಡೆದರೆ ಅಧಿಕಾರ ಉಳಿಸಿಕೊಳ್ಳಲಿದೆ. ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಯಾಗಲಿದ್ದಾರೆ.
“ಇಂಡಿಯಾ ಟುಡೇ’ ಮತ್ತು “ಸಿ-ವೋಟರ್’ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. 543 ಕ್ಷೇತ್ರಗಳ ಪೈಕಿ ಎನ್‌ಡಿಎಗೆ 298, ಯುಪಿಎಗೆ 153, ಇತರರಿಗೆ 92 ಕ್ಷೇತ್ರಗಳಲ್ಲಿ ಜಯ ಸಿಗಲಿದೆ.
ಉತ್ತಮ ಅಭಿಪ್ರಾಯ: ಮೋದಿ ನೇತೃತ್ವದ ಸರಕಾರದ ಬಗ್ಗೆ ಜನರು ಇನ್ನೂ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಶೇ.67 ಮಂದಿ ಅವರ ಆಡಳಿತದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. 2022 ಆಗಸ್ಟ್‌ನಲ್ಲಿ ಇದ್ದ ಜನರ ಅಭಿಪ್ರಾಯಕ್ಕಿಂತ ಪ್ರಸಕ್ತ ವರ್ಷದ ಜನವರಿಯಲ್ಲಿ ದೇಶದ ಜನರು ಶೇ.11ರಷ್ಟು ಹೆಚ್ಚಾಗಿ ಮೋದಿ ಆಡಳಿತದ ಬಗ್ಗೆ ಹೆಚ್ಚಿನ ತೃಪ್ತಿ ಹೊಂದಿದ್ದಾರೆ. 2022ರ ಆಗಸ್ಟ್‌ನಲ್ಲಿ ದೇಶದ ಶೇ.37 ಜನರು ಸರಕಾರದ ಸಾಧನೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರೆ, ಅದರ ಪ್ರಮಾಣ ಈಗ ಶೇ.18ಕ್ಕೆ ಇಳಿದಿದೆ.
ಉತ್ತಮ ಕೆಲಸ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೇ.20 ಮಂದಿ ಸರಕಾರದ ಕೈಗೊಂಡ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಶೇ.14 ಮಂದಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾ ಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದು ಸರಿ ಎಂದಿದ್ದಾರೆ. ಶೇ.12 ಮಂದಿ ರಾಮ ಮಂದಿರ ನಿರ್ಮಾಣದ ಬಗ್ಗೆ ಸಮರ್ಥನೆ ನೀಡಿದ್ದಾರೆ.
ಶೇ.69 ಮಂದಿಗೆ ಬೇಕು ಯುಸಿಸಿ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಮಾನ ನಾಗರಿಕ ಸಂಹಿತೆ (ಯುಸಿಸಿ)ಗೆ ಶೇ.69 ಮಂದಿ ಬೆಂಬಲ ನೀಡಿದ್ದಾರೆ. ಶೇ.19 ಮಂದಿ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮತ ತಂದುಕೊಡದು ಭಾರತ್ ಜೋಡೋ
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಮತಗಳನ್ನು ಗಳಿಸಿ ಕೊಡುವಲ್ಲಿ ಹೆಚ್ಚಿನ ಯಶಸ್ಸು ನೀಡದು ಎಂದಿದೆ ಸಮೀಕ್ಷೆ. 3,500 ಕಿಮೀ ದೂರದ ಯಾತ್ರೆಯಿಂದ ಕಾಂಗ್ರೆಸ್‌ಗೆ ಮತಗಳು ಪ್ರಾಪ್ತಿಯಾಗಲಾರದು ಎಂದು ಶೇ.37 ಮಂದಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದು ಚರ್ಚೆಗೆ ಗ್ರಾಸವಾಗಿದೆ ಎಂಬುದನ್ನು ಒಪ್ಪಿದ್ದಾರೆ. ಶೇ.13 ಮಂದಿ ರಾಹುಲ್ ಅವರನ್ನು ರಿಬ್ರ್ಯಾಂಡ್ ಮಾಡುವ ಕಸರತ್ತು, ಹೆಚ್ಚಿನ ಜನಸಂಪರ್ಕಕ್ಕೆ ನೆರವಾಗಿದೆ ಎಂದು ಶೇ.29, ಯಾವುದೇ ವ್ಯತ್ಯಾಸ ಮಾಡಿಲ್ಲ ಎಂದು ಶೇ.9 ಮಂದಿ ಹೇಳಿದ್ದಾರೆ.
ಹಿಜಾಬ್ ನಿಷೇಧ: ಶೇ.57 ಬೆಂಬಲ
ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಬೇಕು ಎಂದು ಶೇ.57 ಮಂದಿ ಪ್ರತಿಪಾದಿಸಿದ್ದಾರೆ. ಶೇ.26 ಮಂದಿ ಅದರ ಮೇಲೆ ನಿಷೇಧ ಹೇರಬಾರದು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ದೇಶಾದ್ಯಂತ 1.41 ಲಕ್ಷ ಮಂದಿಯನ್ನು ಸಂಪರ್ಕಿಸಿ, ಅವರ ಅಭಿಪ್ರಾಯ ಕೇಳಲಾಗಿತ್ತು. ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿ ಇದೆ. 2022ರಲ್ಲಿ ಉಡುಪಿಯ ಸರಕಾರಿ ಪ.ಪೂ.ಕಾಲೇಜಿನ ಆರು ಮಂದಿ ವಿದ್ಯಾ ರ್ಥಿನಿಯರು ಈ ಬಗ್ಗೆ ಮೊದಲ ಬಾರಿ ಬೇಡಿಕೆ ಮಂಡಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
