
ಸುಪ್ರೀಂ ಕೋರ್ಟ್‌ನಲ್ಲಿ ಇಂಗ್ಲಿಷ್ ಪ್ರಧಾನ ಭಾಷೆ: ನ್ಯಾಯಪೀಠ
ಹಿಂದಿಯಲ್ಲಿ ವಾದಿಸಲು ಹೊರಟ ಅರ್ಜಿದಾರರಿಗೆ ಮನವರಿಕೆ
Team Udayavani, Nov 18, 2022, 7:10 AM IST

ಹೊಸದಿಲ್ಲಿ: “ಸುಪ್ರೀಂ ಕೋರ್ಟ್‌ನ ಭಾಷೆ ಇಂಗ್ಲಿಷ್. ಹಿಂದಿ ಅಲ್ಲ’ ಹೀಗೆಂದು ಕಕ್ಷಿದಾರರೊಬ್ಬರಿಗೆ ಕಿವಿ ಮಾತು ಹೇಳಿದ್ದು ಸುಪ್ರೀಂ ಕೋರ್ಟ್.
ನ್ಯಾ| ಕೆ.ಎಂ.ಜೋಸೆಫ್ ಮತ್ತು ನ್ಯಾ| ಹೃಷಿ ಕೇಶ್ ರಾಯ್ ಅವರನ್ನೊಳ ಗೊಂಡ ನ್ಯಾಯಪೀಠದ ಎದುರು ಅರ್ಜಿದಾರ ಶಂಕರ್‌ಲಾಲ್ ಶರ್ಮಾ ಎಂಬುವರು ತಮ್ಮ ಪ್ರಕರಣವನ್ನು ತಾವೇ ಹಿಂದಿಯಲ್ಲಿ ವಾದ ಮಂಡಿಸಲು ಆರಂಭಿ ಸಿದರು. ಹಿರಿಯ ನಾಗರಿಕರಾಗಿರುವ ಅವರು “ವಿವಿಧ ಹಂತದ ಕೋರ್ಟ್‌ಗಳಿಗೆ ಮೊರೆ ಹೊಕ್ಕರೂ ನನಗೆ ನ್ಯಾಯ ಸಿಗಲಿಲ್ಲ’ ಎಂದು ಅರಿಕೆ ಮಾಡಿಕೊಂಡರು.
ನ್ಯಾಯಮೂರ್ತಿಗಳಿಗೆ ಅರ್ಜಿ ದಾರರು ಹೇಳುವ ಅಂಶಗಳು ಗೊತ್ತಾಗುತ್ತಿರಲಿಲ್ಲ. “ನಿಮ್ಮ ಅರ್ಜಿ ಯಲ್ಲಿನ ಅಂಶಗಳನ್ನು ನಾವು ಓದಿದ್ದೇವೆ. ಆದರೆ ನೀವು ಹೇಳುವುದು ನಮಗೆ ಅರ್ಥ ವಾಗುತ್ತಿಲ್ಲ. ಕೋರ್ಟ್‌ನ ಭಾಷೆ ಇಂಗ್ಲಿಷ್’ ಎಂದು ನ್ಯಾ| ಜೋಸೆಫ್ ಅರ್ಜಿದಾರರಿಗೆ ತಿಳಿಸಿದರು.
ಮತ್ತೊಂದು ಕೋರ್ಟ್ ಹಾಲ್‌ನಲ್ಲಿ ಇದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ಅಲ್ಲಿಗೆ ಆಗಮಿಸಿ, ಅರ್ಜಿದಾರ ಶರ್ಮಾ ಅವರಿಗೆ ನೆರವಾದರು. ನ್ಯಾಯಪೀಠದ ಸೂಚನೆಯನ್ನು ವಕೀಲರ ನೆರವಿನಿಂದ ಕಾನೂನು ಹೋರಾಟ ಮುಂದುವರಿಸಲು ಒಪ್ಪಿದ್ದಾರೆ.
ಟಾಪ್ ನ್ಯೂಸ್
