ಕಾಲೇಜಿನ ಎಲ್ಲ ಹುಡುಗಿಯರಿಗೂ ಬಾಯ್‌ಫ್ರೆಂಡ್ ಕಡ್ಡಾಯ; ನಕಲಿ ನೋಟಿಸ್ ವೈರಲ್
Team Udayavani, Jan 25, 2023, 7:10 AM IST
ಭುವನೇಶ್ವರ: ಫೆ.14ರ ಪ್ರೇಮಿಗಳ ದಿನದ ಹೊತ್ತಿಗೆ ಎಲ್ಲ ಹುಡುಗಿಯರು ಕಡ್ಡಾಯವಾಗಿ ಬಾಯ್‌ಫ್ರೆಂಡ್ ಹೊಂದಿರಬೇಕು ಎಂದು ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಕಾಲೇಜೊಂದರಲ್ಲಿ ಹಾಕಿರುವ ನಕಲಿ ನೋಟಿಸ್ ಎಲ್ಲರ ಗಮನ ಸೆಳೆದಿದೆ.
ಎಸ್‌ವಿಎಂ ಆಟಾನಮಸ್ ಕಾಲೇಜಿನ ಪ್ರಾಂಶುಪಾಲರ ನಕಲಿ ಸಹಿ ಹೊಂದಿರುವ ನೋಟಿಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಕಾಲೇಜಿನ ಪ್ರಾಂಶುಪಾಲರು ಜಗತ್‌ಸಿಂಗ್‌ಪುರ ಪೊಲೀಸರಿಗೆ ದೂರು ನೀಡಿದ್ದಾರೆ.
“ನಕಲಿ ನೋಟಿಸ್ ಕುರಿತು ನಮ್ಮ ಗಮನಕ್ಕೆ ಬಂದಿದೆ. ಕಾಲೇಜಿನ ಪ್ರತಿಷ್ಠೆ ಹಾಳು ಮಾಡಲು ಈ ರೀತಿ ಮಾಡಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ,’ ಎಂದು ತಿಳಿಸಿದ್ದಾರೆ.