ದೆಹಲಿ ಹಿಂಸಾಚಾರ:ಆಸ್ಟ್ರೇಲಿಯಾದಿಂದ ಹಿಂದಿರುಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮೃತ ವ್ಯಕ್ತಿ
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರ ಕುರಿತಾಗಿ ಆತನ ಕುಟುಂಬಕ್ಕೆ ಮಾಹಿತಿಯೇ ಇರಲಿಲ್ಲ
Team Udayavani, Jan 27, 2021, 8:18 AM IST
ನವದೆಹಲಿ: ಗಣರಾಜ್ಯೋತ್ಸವ ದಿನದಂದು (ಜ.26) ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸಿದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾರೂಪಕ್ಕೆ ತಿರುಗಿ ಓರ್ವ ಮೃತಪಟ್ಟಿದ್ದ. ಈತ ಇತ್ತೀಚಿಗಷ್ಟೇ ಆಸ್ಟ್ರೇಲಿಯಾದಿಂದ ಹಿಂದಿರುಗಿದ್ದು, ದೆಹಲಿ ಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರ ಕುರಿತಾಗಿ ಆತನ ಕುಟುಂಬಕ್ಕೆ ಮಾಹಿತಿಯೇ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು 27 ವರ್ಷದ ನರ್ವೀತ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಆಸ್ಟ್ರೇಲಿಯಾದಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿದ್ದ. ರಾಂಪುರದ ಬಿಲಾಸ್ ಪುರ್ ಪ್ರದೇಶದಲ್ಲಿ ಹಲವಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೋಳ್ಳಲು ದೆಹಲಿಗೆ ತೆರಳಿದ್ದರು. 3 ದಿನಗಳ ಹಿಂದೆ ನರ್ವೀತ್ ಸಿಂಗ್ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ. ಆದರೆ ಮಂಗಳವಾರ (ಜ.16) ನಡೆದ ರೈತ ಪ್ರತಿಭಟನೆಯಲ್ಲಿ ಟ್ರ್ಯಾಕ್ಟರ್ ಮಗುಚಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಹಿಂಸೆಗೆ ತಿರುಗಿದ ರೈತರ ಪ್ರತಿಭಟನೆ, ಮುಂದೇನು ದಾರಿ?
ಹಿರಿಯ ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಕೆಲವು ಪ್ರತಿಭಟನಾಕಾರ ರೈತರು ಟ್ರ್ಯಾಕ್ಟರ್ ಅನ್ನು ಅಡ್ಡಾದಿಡ್ಡಿಯಾಗಿ, ಪೊಲೀಸರನ್ನು ಬೆನ್ನಟ್ಟಲೆಂದೇ ಚಲಾಯಿಸುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್ ಒಂದು ಬ್ಯಾರಿಕೇಡ್ ಗೆ ಗುದ್ದಿ ಮಗುಚಿ ಬಿದ್ದಿತ್ತು. ಕೂಡಲೇ ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಲು ಮುಂದಾಯಿತು. ಆದರೇ ರೈತರ ಗುಂಪು ಅವರನ್ನು ಸ್ಥಳಕ್ಕೆ ತೆರಳಲು ಬಿಡಲಿಲ್ಲ. ನರ್ವೀತ್ ಸಿಂಗ್ ಅಪಘಾತದಿಂದಲೇ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಆದರೇ ಪೊಲೀಸರ ಹೇಳಿಕೆಯನ್ನು ನಿರಾಕರಿಸಿದ ರೈತರು, ಟೀಯರ್ ಗ್ಯಾಸ್ ಪ್ರಯೋಗಿಸಿದ್ದರಿಂದಲೇ ಟ್ರ್ಯಾಕ್ಟರ್ ಮೇಲೆ ನಿಯಂತ್ರಣ ಕಳೆದುಕೊಂಡು ನರ್ವೀತ್ ಸಿಂಗ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಫೇಸ್‌ಬುಕ್ ಬಳಕೆದಾರರೇ ಎಚ್ಚರ : ಖಾತೆ ಹ್ಯಾಕ್; ನಿಮ್ಮ ಹೆಸರಲ್ಲಿ ಸ್ನೇಹಿತರಿಂದ ಹಣ ಲೂಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಮಾನದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ:ಬ್ಯಾಂಕಾಕ್‌ಗೆ ತೆರಳುತ್ತಿದ್ದ ವ್ಯಕ್ತಿ ಮೃತ್ಯು
ವಕೀಲರಾಗಿ ಆಯ್ಕೆಯಾದ ಕೇರಳದ ಮೊದಲ ತೃತೀಯಲಿಂಗಿ ಪದ್ಮಲಕ್ಷ್ಮಿ !
ಭಾರತ ನಮ್ಮ ಅನಿವಾರ್ಯ ಪಾಲುದಾರ: ದೆಹಲಿಯಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ
ಲಂಡನ್‌ನಲ್ಲಿ ಖಲಿಸ್ತಾನಿ ಬೆಂಬಲಿಗರ ಕುಕೃತ್ಯ: ದೆಹಲಿ ಯುಕೆ ಮಿಷನ್ ಹೊರಗೆ ಪ್ರತಿಭಟನೆ
ಅಮೃತಪಾಲ್ ಗಾಗಿ ಶೋಧ; ಐದು ಸಹಚರರರ ವಿರುದ್ಧ NSA ; ಐಎಸ್‌ಐ ಪಾತ್ರ?
MUST WATCH
ಹೊಸ ಸೇರ್ಪಡೆ
ವಿಮಾನದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ:ಬ್ಯಾಂಕಾಕ್‌ಗೆ ತೆರಳುತ್ತಿದ್ದ ವ್ಯಕ್ತಿ ಮೃತ್ಯು
ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕ್ಷೇತ್ರವೇ ಸಿಗುತ್ತಿಲ್ಲವೆಂದರೆ… ನಿರಾಣಿ ವ್ಯಂಗ್ಯ
ವಿದ್ಯಾವಂತರಿಗೆ ಸರಕಾರ ಉದ್ಯೋಗ ನೀಡದೆ ನರೇಗಾ ಕೆಲಸಕ್ಕೆ ತಳ್ಳಿದೆ : ಶಾಸಕ ಗಣೇಶ್
ಬಿದರಹಳ್ಳಿಯ ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರ ದಾಳಿ
ಅಧಿಕಾರಕ್ಕೆ ಬರುವುದೇ ಡೌಟು… ಆದರೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ: ಕಟೀಲ್