ಮಹಿಳಾ ಅಧಿಕಾರಿಯಿಂದ ಡಾಕ್ಟರ್ ಗೆ ಮಸಾಜ್! ಫೋಟೊ- ವಿಡಿಯೋ ವೈರಲ್
Team Udayavani, Feb 4, 2023, 12:04 PM IST
ಪಾಟ್ನಾ: ಬಿಹಾರದ ಖಗಾರಿಯಾದಲ್ಲಿ ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿಯೊಬ್ಬರಿಂದ ವೈದ್ಯರೊಬ್ಬರು ಮುಖಕ್ಕೆ ಮಸಾಜ್ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿ ದೀಪಿಕಾ ಸಾಹಿನಿ ಅವರು ವೈದ್ಯ ಕೃಷ್ಣ ಕುಮಾರ್ ಅವರಿಗೆ ಮಸಾಜ್ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋ ವೈರಲ್ ಆದ ಬಳಿಕ ಸಿವಿಲ್ ಸರ್ಜನ್ ಅವರು ಇಬ್ಬರಿಗೂ ಶೋಕಾಸ್ ನೋಟಿಸ್ ನೀಡಿದ್ದಾರೆ. ಈ ಇಬ್ಬರ ವೈದ್ಯರ ಕೆಲವು ಫೋಟೊಗಳು ಕೂಡಾ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಮಲಯಾಳಂನ “ಕೋಲ್ಡ್ ಕೇಸ್” ಸಿನೆಮಾ ಹೋಲುವ ಪ್ರಕರಣ
ಇಬ್ಬರೂ ವಿವಾಹಿತರಾಗಿದ್ದು, ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ವರದಿಯಾಗಿದೆ. ವೈರಲ್ ವೀಡಿಯೊದಲ್ಲಿ, ಇಬ್ಬರನ್ನೂ ಪರಸ್ಪರ ಹತ್ತಿರವಾಗಿರುವುದು ಕಾಣಬಹುದಾಗಿದೆ.
ಮಾಹಿತಿಯ ಪ್ರಕಾರ, ವಿಡಿಯೋ ವೈರಲ್ ಆಗಿದ್ದರಿಂದ ಪಿಎಚ್‌ಸಿ ಪ್ರಭಾರಿ ತಲೆಮರೆಸಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಮತ್ತು ಫೋಟೋಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ತೆಗೆಯಲಾಗಿದೆ ಎನ್ನಲಾಗಿದೆ.
ಇಬ್ಬರ ಅನೇಕ ಚಿತ್ರಗಳು ವೈರಲ್ ಆಗಿದ್ದು, ಇದರಲ್ಲಿ ಇಬ್ಬರೂ ಅನ್ಯೋನ್ಯತೆಯಿಂದ ಕಾಣಿಸಿಕೊಂಡಿದ್ದಾರೆ. ಮಸಾಜ್ ವೀಡಿಯೊದಲ್ಲಿ, ಮಹಿಳಾ ಅಧಿಕಾರಿ ವೀಡಿಯೊ ಮಾಡಬೇಡಿ ಎಂದು ಹೇಳುತ್ತಿದ್ದಾರೆ, ಆದರೆ ವೈದ್ಯ ವಿಡಿಯೋ ಮಾಡುವುದನ್ನು ಮುಂದುವರೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ
ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ
ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮಹತ್ವದ ಒಪ್ಪಂದ
ಝಾಕಿರ್ ನಾಯ್ಕನ ವಿಚಾರ ಒಮಾನ್ ನೊಂದಿಗೆ ಹಂಚಿಕೊಂಡಿದ್ದೇವೆ :ಅರಿಂದಮ್ ಬಾಗ್ಚಿ
ಅಂದು ರಾಹುಲ್ ಹರಿದು ಹಾಕಿದ್ದ ಸುಗ್ರೀವಾಜ್ಞೆ ಪ್ರತಿ ಇಂದು ಅವರಿಗೆ ಮುಳುವಾಯ್ತು!
MUST WATCH
ಹೊಸ ಸೇರ್ಪಡೆ
ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು
ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ
ನೇಕಾರ ಸಮ್ಮಾನ್ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ
ಮಂಗಳೂರು/ಉಡುಪಿ: ಬಿಸಿಲ ನಡುವೆಯೂ ಪ್ರವಾಸಿಗರ ದಂಡು, ಚಾರಣಕ್ಕೆ ಸದ್ಯ ಅವಕಾಶವಿಲ್ಲ