ಜಯಪ್ರದಾ ವಿರುದ್ಧ ಲೈಂಗಿಕ ಅವಹೇಳನ: ಆಜಂ ವಿರುದ್ಧ FIR

Team Udayavani, Apr 15, 2019, 11:47 AM IST

ಲಕ್ನೋ : ಬಿಜೆಪಿ ಅಭ್ಯರ್ಥಿ, ಮಾಜಿ ಚಿತ್ರ ನಟಿ, ಜಯಪ್ರದಾ ವಿರುದ್ಧ ಅತ್ಯಂತ ಕೀಳುಮಟ್ಟದ ಲೈಂಗಿಕ ಅವಹೇಳನದ ಮಾತುಗಳನ್ನು ಆಡಿರುವ ಕಾರಣಕ್ಕೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ವಿರುದ್ಧ ಎಫ್ ಐ ಆರ್‌ ದಾಖಲಾಗಿದೆ.

‘ಮಹಿಳೆಯರ ಬಗ್ಗೆ, ವಿಶೇಷವಾಗಿ ತನ್ನ ಬಗೆ, ಅತ್ಯಂತ ಕೀಳು ಮಟ್ಟದ ಟೀಕೆ ಮಾಡುವ ಆತನನ್ನು (ಆಜಂ ಖಾನ್‌) ಚುನಾವಣೆಗೆ ನಿಲ್ಲಲು ಬಿಡಬಾರದು; ಆತ ಒಂದೊಮ್ಮೆ ಗೆದ್ದು ಬಂದರೆ ಮಹಿಳೆಯರು ಮತ್ತು ದೇಶದ ಪ್ರಜಾಸತ್ತೆಯ ಗತಿ ಏನು ? ಆತನಿರುವ ಸಮಾಜದಲ್ಲಿ ಮಹಿಳೆಯರಿಗೆ ಸ್ಥಾನವೇ ಇರಲಾರದು. ಹಾಗಿರುವಾಗ ನಾವೆಲ್ಲಿಗೆ ಹೋಗಬೇಕು ? ನಾನು ಸಾಯಬೇಕೇ ? ಸತ್ತರೆ ನಿಮಗೆ (ಆಜಂ ಖಾನ್‌ ಗೆ) ತೃಪ್ತಿಯೇ ? ನಿಮ್ಮ ಕೀಳು ಮಟ್ಟದ ಮಾತಿಗೆ ಬೆದರಿ ನಾನು ರಾಮಪುರ ವನ್ನು ಬಿಡುವೆನೆಂದು ಭಾವಿಸುವಿರಾ ? ಇಲ್ಲ, ನಾನಂತೂ ಇಲ್ಲಿಂದ ಹೋಗುವುದಿಲ್ಲ’ ಎಂದು ಜಯಪ್ರದಾ ಹೇಳಿದ್ದಾರೆ.

‘ಆಜಂ ಖಾನ್‌ ಮಾತನಾಡುವ ರೀತಿ ನನಗೇನೂ ಹೊಸದಲ್ಲ; 2009ರಲ್ಲಿ ಅವರದ್ದೇ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದಾಗ ಅಗಲೂ ಅವರು ನನ್ನ ಬಗ್ಗೆ ತುಂಬಾ ಕೀಳಾಗಿ ಮಾತನಾಡಿದ್ದರು; ಆಗ ಪಕ್ಷದಲ್ಲಿ ಯಾರೂ ನನ್ನ ಬೆಂಬಲಕ್ಕೆ ಬರಲಿಲ್ಲ; ನಾನೋರ್ವ ಮಹಿಳೆ; ಆತನ ಕೀಳು ಮಾತನ್ನು ಪುನರುಚ್ಚರಿಸಲು ಕೂಡ ನನ್ನಿಂದ ಅಸಾಧ್ಯ. ನಾನು ಆತನಿಗೆ ಏನು ಮಾಡಿದ್ದೇನೆ ಎಂಬುದನ್ನು ನಾನು ಅರಿಯೆ; ಆದರೂ ಆತ ನನ್ನ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಿಲ್ಲಿಸಿಲ್ಲ’ ಎಂದು ಜಯಪ್ರದಾ ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

  • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

  • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

  • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

  • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

  • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...