ಪಂಜಾಬ್ ನ ಮಾಜಿ ಕಾಂಗ್ರೆಸ್ ನಾಯಕ ಸುನೀಲ್ ಜಾಖಡ್ ಬಿಜೆಪಿ ಸೇರ್ಪಡೆ
Team Udayavani, May 19, 2022, 1:58 PM IST
ನವದೆಹಲಿ: ಮಾಜಿ ಕಾಂಗ್ರೆಸ್ ನಾಯಕರಾದ ಸುನೀಲ್ ಜಾಖಡ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಗುರುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಡ್ಡಾ, ಪಂಜಾಬ್‌ನಲ್ಲಿ ಬಿಜೆಪಿ ರಾಷ್ಟ್ರೀಯವಾದಿ ಶಕ್ತಿಗಳ ಮೊದಲ ಸ್ಥಾನವನ್ನು ಪಡೆಯುತ್ತಿದೆ. ಆದ್ದರಿಂದ ರಾಷ್ಟ್ರೀಯವಾದಿ ದೃಷ್ಟಿಕೋನ ಹೊಂದಿರುವ ಎಲ್ಲರೂ ಬಿಜೆಪಿಗೆ ಸೇರ್ಪಡೆಗೊಂಡು ಪಕ್ಷವನ್ನು ಬಲಪಡಿಸುವ ಅಗತ್ಯವಿದೆ ಎಂದರು.
ಇದನ್ನೂ ಓದಿ : ಔರಂಗಜೇಬ್ ಸಮಾಧಿಗೆ 5 ದಿನಗಳ ಕಾಲ ಪ್ರವೇಶವಿಲ್ಲ: ಅಜಿತ್ ಪವಾರ್
68 ರ ಹರೆಯದ ಪಂಜಾಬ್‌ನ ಹಿರಿಯ ನಾಯಕ ಸುನೀಲ್ ಜಾಖಡ್ ಕಾಂಗ್ರೆಸ್‌ನಿಂದ ಎರಡು ವರ್ಷ ಅಮಾನತುಗೊಂಡಿದ್ದರು.