ಚುನಾವಣಾ ಆಯುಕ್ತರಾಗಿ ಅರುಣ್ ಗೋಯಲ್ ನೇಮಕ
Team Udayavani, Nov 19, 2022, 9:30 PM IST
ನವದೆಹಲಿ: ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಪಂಜಾಬ್ ಕೇಡರ್ ಮತ್ತು 1985ನೇ ಬ್ಯಾಚ್ನ ಅಧಿಕಾರಿ. ಈ ಬಗ್ಗೆ ಶನಿವಾರ ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಮೇ ನಲ್ಲಿ ನಿವೃತ್ತಿಯಾಗಿದ್ದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರ ಸ್ಥಾನದಲ್ಲಿ ಗೋಯಲ್ ನೇಮಕಗೊಂಡಿದ್ದಾರೆ.
ಸದ್ಯ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಆಯುಕ್ತ ಅನೂಪ್ ಚಂದ್ರಪಾಂಡೆ ಇದ್ದಾರೆ.