
ಧಾರಾವಿ ಪುನರ್‌ನಿರ್ಮಾಣಕ್ಕೆ ಗೌತಮ್ ಅದಾನಿ: 5,069 ಕೋಟಿ ರೂ. ಹೂಡಿಕೆ
Team Udayavani, Nov 30, 2022, 8:41 AM IST

ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಪ್ರಾಪರ್ಟೀಸ್‌ಗೆ ಭಾರತದ ದೊಡ್ಡ ಪುನರ್‌ನಿರ್ಮಾಣ ಯೋಜನೆಗಳಲ್ಲಿ ಒಂದಾಗಿರುವ ಧಾರಾವಿ ಪುನರ್‌ನಿರ್ಮಾಣ ಯೋಜನೆಯ ಟೆಂಡರ್ ಸಿಕ್ಕಿದೆ. ಮುಂಬಯಿಯಲ್ಲಿರುವ ಧಾರಾವಿ ಕೊಳೆಗೇರಿಯು ಏಷ್ಯಾದಲ್ಲೇ ಎರಡನೇ ಅತೀ ದೊಡ್ಡ ಕೊಳೆಗೇರಿ ಆಗಿದೆ. ಕೊಳೆಗೇರಿಯ ಪುನರ್‌ನಿರ್ಮಾಣಕ್ಕೆ ಅದಾನಿ ಪ್ರಾಪರ್ಟೀಸ್ 5,069 ಕೋಟಿ ರೂ. ಹೂಡಿಕೆ ಮಾಡಲಿದೆ.
ಡಿಎಲ್‌ಎಫ್ ಸೇರಿದಂತೆ ಜಗತ್ತಿನ ಎಂಟು ನಿರ್ಮಾಣ ಕಂಪೆನಿ ಗಳು ಬಿಡ್‌ನಲ್ಲಿ ಭಾಗವಹಿಸಿದ್ದವು. ಯೋಜನೆಗಾಗಿ ಸರಕಾರ 1,600 ಕೋಟಿ ರೂ.ಗಳನ್ನು ಬಿಡ್ ಮೊತ್ತವಾಗಿ ನಿಗದಿಪಡಿಸಿತ್ತು. ಅತೀ ಹೆಚ್ಚು ಮೊತ್ತ ಬಿಡ್ ಮಾಡಿದ ಅದಾನಿ ಪ್ರಾಪರ್ಟೀಸ್ ತೆಕ್ಕಗೆ ಈ ಯೋಜನೆ ಒಲಿದಿದೆ.
ಧಾರಾವಿ ಪುನರ್‌ನಿರ್ಮಾಣ
– 5,069 ಕೋಟಿ ರೂ. ಅದಾನಿ ಪ್ರಾಪರ್ಟೀಸ್ ಹೂಡಿಕೆ
– 240 ಹೆಕ್ಟೇರ್ ಪ್ರದೇಶ ಅಭಿವೃದ್ಧಿ ಕಾರ್ಯ
– 24.62 ಹೆಕ್ಟೇರ್ ಖಾಸಗಿ ಪ್ರದೇಶ ಭೂಸ್ವಾಧೀನ
– 60,000 ಕುಟುಂಬಗಳಿಗೆ ಉಚಿತ ಮನೆಗಳು ನಿರ್ಮಾಣ
– 13,000 ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ
– 405 ಚ.ಅಡಿ ಸ್ಥಳದಲ್ಲಿ ಪ್ರತೀ ಕೊಳೆಗೇರಿ ಕುಟುಂಬಕ್ಕೆ ಮನೆ ನಿರ್ಮಾಣ
ಟಾಪ್ ನ್ಯೂಸ್
