ಗೋವಾ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಪರಿಶೀಲನೆ

Team Udayavani, Jan 24, 2023, 3:12 PM IST

ಗೋವಾ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಪರಿಶೀಲನೆ

ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದು ಗೋವಾ ಕನ್ನಡಿಗರ ಬಹು ವರ್ಷಗಳ ಕನಸಾಗಿದೆ. ಕಳೆದ ವರ್ಷ ಕರ್ನಾಟಕ ಸರ್ಕಾರವು ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ನೀಡುವುದಾಗಿ ಘೋಷಿಸಿತ್ತು. ಇದೀಗ ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಕನಸು ನನಸಾಗುವ ಕಾಲ ಸಮೀಪಿಸಿದಂತಿದೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಲು ಸರ್ಕಾರಕ್ಕೆ ಈ ಕುರಿತ ವರದಿ ಸಲ್ಲಿಸಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ರವರು ಗೋವಾಕ್ಕೆ ಆಗಮಿಸಿ ಗೋವಾದ ವಿವಿಧೆಡೆ ಜಾಗ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ, ಕಸಾಪ ಗೋವಾ ರಾಜ್ಯ ಘಟಕದ ಪರಿಶಿಷ್ಠ ಜಾತಿ ಪ್ರತಿನಿಧಿ ತವರಪ್ಪ ಲಮಾಣಿ, ಮಾಪ್ಸಾ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಉಪಾಧ್ಯಕ್ಷ ಪರಶುರಾಮ ಚೌವ್ಹಾಣ, ಖಜಾಂಚಿ ಮಾರುತಿ ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು.

ಗೋವಾದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಕನ್ನಡಿಗರು ವಾಸಿಸುತ್ತಿದ್ದು, ಗೋವಾದಲ್ಲಿ ಸುಮಾರು 20 ಕ್ಕೂ ಹೆಚ್ಚು ಕನ್ನಡ ಸಂಘಟನೆಗಳಿವೆ. ಇಷ್ಟೇ ಅಲ್ಲದೆಯೇ ಗೋವಾ ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಗೋವಾ ರಾಜ್ಯ, ಉತ್ತರಗೋವಾ, ದಕ್ಷಿಣ ಗೋವಾ, ಹಾಗೂ ವಿವಿಧ ತಾಲೂಕಾ ಘಟಕಗಳು ಸ್ಥಾಪನೆಯಾಗಿದೆ. ಆದರೆ ಗೋವಾದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕನ್ನಡಿಗರು ಇದ್ದರೂ ಕೂಡ ಸತತವಾಗಿ ಕನ್ನಡಿಗರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಕೂಡ ಕನ್ನಡಿಗರಿಗೆ ಇದುವರೆಗೂ ಈ ಕನ್ನಡಿಗರಿಗೆ ಏಕೈಕ ವೇದಿಕೆ ಕನ್ನಡ ಭವನ ನಿರ್ಮಾಣವಾಗದಿರುವುದು ಖೇದಕರ ಸಂಗತಿಯಾಗಿದೆ.

ಗೋವಾದಲ್ಲಿ ಜಾಗ ಖರೀದಿಗೆ 7 ರಿಂದ 8 ಕೋಟಿ ರೂ ಅಗತ್ಯವಿದೆ-ಪ್ರಕಾಶ ಮತ್ತೀಹಳ್ಳಿ:

ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಲು ಗೋವಾದಲ್ಲಿ ಐದಾರು ಸ್ಥಳಗಳಲ್ಲಿ ಜಾಗ ವೀಕ್ಷಿಸಿದ್ದೇನೆ. ಗೋವಾದಲ್ಲಿ ಕನ್ನಡಿಗರು ಹೆಚ್ಚಾಗಿ ವಾಸ್ತವ್ಯ ಹೊಂದಿರುವ ಸ್ಥಳದಲ್ಲಿಯೇ ಕನ್ನಡ ಭವನ ನಿರ್ಮಾಣವಾದರೆ ಹೆಚ್ಚಿನ ಅನುಕೂಲವಾಗಲಿದೆ ಮತ್ತು ಹೆಚ್ಚು ಉಪಯೋಗವೂ ಆಗಲಿದೆ. ಆದರೆ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಲು ಸುಮಾರು 7 ರಿಂದ 8 ಕೋಟಿ ರೂ ಅಗತ್ಯವಿದೆ. ಇದರಿಂದಾಗಿ ಈಗಾಗಲೇ ವೀಕ್ಷಿಸಿರುವ ಜಾಗಗಳ ವಿವರಗಳನ್ನು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಗೆ ಕಳುಹಿಸಲಾಗುವುದು. ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಮಂಜೂರಾತಿ ನೀಡಿದರೆ ಗೋವಾದಲ್ಲಿ ಕನ್ನಡ ಭವನಕ್ಕೆ ಜಾಗ ಖರೀದಿಸಲು ಸಾಧ್ಯವಾಗಲಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ರವರು ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ಕನ್ನಡಿಗರು ಹೆಚ್ಚಾಗಿ ವಾಸಿಸುತ್ತಿರುವ ಸ್ಥಳದಲ್ಲಿಯೇ ಕನ್ನಡ ಭವನ ನಿರ್ಮಾಣವಾದರೆ ಸೂಕ್ತ-ಡಾ.ಸಿದ್ಧಣ್ಣ ಮೇಟಿ

ಗೋವಾ ರಾಜ್ಯದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ಗೋವಾ ರಾಜ್ಯದ ಮೂಲೆ ಮೂಲೆಯಲ್ಲೂ ಕನ್ನಡಿಗರು ನೆಲೆಸಿದ್ದಾರೆ. ಗೋವಾದ ಯಾವುದೇ ಸ್ಥಳದಲ್ಲಿ ಕನ್ನಡ ಭವನ ನಿರ್ಮಾಣವಾದರೂ ಅಡ್ಡಿಯಿಲ್ಲ. ಆದರೆ ಕನ್ನಡಿಗರು ಹೆಚ್ಚಾಗಿ ವಾಸಿಸುತ್ತಿರುವ ಸ್ಥಳದಲ್ಲಿ ಕನ್ನಡ ಭವನ ನಿರ್ಮಾಣವಾದರೆ ಸೂಕ್ತ. ಕನ್ನಡ ಭವನವು ಗೋವಾದಲ್ಲಿ ಕನ್ನಡಿಗರ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕಾರ್ಯಕ್ರಮ ಆಯೋಜನೆಗೆ ಸದ್ಬಳಕೆಯಾಗುವಂತಿರಬೇಕು. ಕನ್ನಡ ಭವನ ನಿರ್ಮಾಣಕ್ಕೆ ಮೊದಲು ಗೋವಾದಲ್ಲಿ ಜಾಗ ಖರೀದಿಸಬೇಕಿದೆ. ಇದರಿಂದಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ರವರು ಗೋವಾಕ್ಕೆ ಆಗಮಿಸಿ ವಿವಿಧೆಡೆ ಜಾಗ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಸ್ತಾವನೆಯನ್ನು ಅವರು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ಟಾಪ್ ನ್ಯೂಸ್

Bollywood: ಪ್ರಿಯಕರನ ಖಾಸಗಿ ಫೋಟೋ ಹಂಚಿಕೊಂಡ ಮಲೈಕಾ: ನೆಟ್ಟಿಗರಿಂದ ಟ್ರೋಲ್

Bollywood: ಪ್ರಿಯಕರನ ಖಾಸಗಿ ಫೋಟೋ ಹಂಚಿಕೊಂಡ ಮಲೈಕಾ: ನೆಟ್ಟಿಗರಿಂದ ಟ್ರೋಲ್

ಸಿದ್ದರಾಮಯ್ಯ ಸಂಪುಟದ ಖಾತೆ ಹಂಚಿಕೆ: ಪ್ರಮುಖ ಖಾತೆಯನ್ನು ತನ್ನಲ್ಲೇ ಉಳಿಸಿಕೊಂಡ ಸಿಎಂ

ಸಿದ್ದರಾಮಯ್ಯ ಸಂಪುಟದ ಖಾತೆ ಹಂಚಿಕೆ: ಪ್ರಮುಖ ಖಾತೆಯನ್ನು ತನ್ನಲ್ಲೇ ಉಳಿಸಿಕೊಂಡ ಸಿಎಂ

ಮೂರೇ ದಿನಕ್ಕೆ ಹೈಕೋರ್ಟ್‌ ಸಿಜೆ ಆಗಿ ಪ್ರಮಾಣ ವಚನ ಸ್ವೀಕರಿಸಿದ ರಮೇಶ್‌ ದೇವಕಿನಂದನ್‌ ಧನುಕ

ಮೂರೇ ದಿನಕ್ಕೆ ಹೈಕೋರ್ಟ್‌ ಸಿಜೆ ಆಗಿ ಪ್ರಮಾಣ ವಚನ ಸ್ವೀಕರಿಸಿದ ರಮೇಶ್‌ ದೇವಕಿನಂದನ್‌ ಧನುಕ

ಖಾತೆ ಬದಲಿಗೆ ಪಟ್ಟು: ಅಸಮಾಧಾನಿಗಳ ಮನವೊಲಿಕೆ ಕಸರತ್ತು

ಖಾತೆ ಬದಲಿಗೆ ಪಟ್ಟು: ಅಸಮಾಧಾನಿಗಳ ಮನವೊಲಿಕೆ ಕಸರತ್ತು

ತೆರಿಗೆ ಪಾವತಿಗಾಗಿ ಗ್ರಾ.ಪಂ.ಗಳಲ್ಲಿ ಪಿಒಎಸ್‌ ಯಂತ್ರ

ತೆರಿಗೆ ಪಾವತಿಗಾಗಿ ಗ್ರಾ.ಪಂ.ಗಳಲ್ಲಿ ಪಿಒಎಸ್‌ ಯಂತ್ರ

new parliament night

Parliament: ಬೇರೆ ದೇಶಗಳಲ್ಲಿ ಹೇಗಿವೆ ಗೊತ್ತಾ ಪಾರ್ಲಿಮೆಂಟ್‌?

ಬಂಡಾಜೆ ಫಾಲ್ಸ್‌ ಕಡೆ ಟ್ರೆಕ್ಕಿಂಗ್‌ಗೆ ಬಂದು ದಾರಿ ತಪ್ಪಿದ ಯುವಕ: ಪೊಲೀಸರಿಂದ ಹುಡುಕಾಟ

ಬಂಡಾಜೆ ಫಾಲ್ಸ್‌ ಕಡೆ ಟ್ರೆಕ್ಕಿಂಗ್‌ಗೆ ಬಂದು ದಾರಿ ತಪ್ಪಿದ ಯುವಕ: ಪೊಲೀಸರಿಂದ ಹುಡುಕಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂರೇ ದಿನಕ್ಕೆ ಹೈಕೋರ್ಟ್‌ ಸಿಜೆ ಆಗಿ ಪ್ರಮಾಣ ವಚನ ಸ್ವೀಕರಿಸಿದ ರಮೇಶ್‌ ದೇವಕಿನಂದನ್‌ ಧನುಕ

ಮೂರೇ ದಿನಕ್ಕೆ ಹೈಕೋರ್ಟ್‌ ಸಿಜೆ ಆಗಿ ಪ್ರಮಾಣ ವಚನ ಸ್ವೀಕರಿಸಿದ ರಮೇಶ್‌ ದೇವಕಿನಂದನ್‌ ಧನುಕ

stalin

Sengol ಮೊದಲ ದಿನವೇ ‘ಬಾಗಿದೆ’ ಎಂದ ಎಂ.ಕೆ.ಸ್ಟಾಲಿನ್

NAVIK

NVS-01: ನಾವಿಕ ಉಪಗ್ರಹ ಉಡಾವಣೆಗೆ‌ ಕ್ಷಣಗಣನೆ

ಸಾವರ್ಕರ್‌ ತ್ಯಾಗ, ದಿಟ್ಟತನ ಸ್ಮರಿಸಿದ ಮೋದಿ

ಸಾವರ್ಕರ್‌ ತ್ಯಾಗ, ದಿಟ್ಟತನ ಸ್ಮರಿಸಿದ ಮೋದಿ

1-sadad

Sengol ಇತಿಹಾಸ ಪ್ರಶ್ನಿಸಿದ ಕಾಂಗ್ರೆಸ್ ಕ್ಷಮೆಯಾಚಿಸಬೇಕು: ರಾಜಗೋಪಾಲಾಚಾರಿ ಮರಿಮೊಮ್ಮಗ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ