20 ಸೆಕೆಂಡುಗಳಲ್ಲಿ 10 ಲಕ್ಷ ಮೌಲ್ಯದ ಚಿನ್ನದ ಸರ ಕದ್ದ ವೃದ್ಧೆ: ವೀಡಿಯೋ ವೈರಲ್
Team Udayavani, Nov 28, 2022, 4:58 PM IST
ಉತ್ತರ ಪ್ರದೇಶ: ವಯಸ್ಸಾದ ಮಹಿಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ, ಮಹಿಳೆ ಆಭರಣ ಅಂಗಡಿಯಿಂದ ನೆಕ್ಲೇಸ್ ಅನ್ನು ಕದಿಯುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಆಕೆ ಕದ್ದ ಚಿನ್ನದ ಸರದ ಮೌಲ್ಯ 10 ಲಕ್ಷ ರೂಪಾಯಿಗಳಾಗಿವೆ. ಈ ವಯಸ್ಸಾದ ಮಹಿಳೆ ಜಾಣ್ಮೆಯಿಂದ ಕೇವಲ 20 ಸೆಕೆಂಡುಗಳಲ್ಲಿ ಸರವನ್ನು ಕದ್ದು ತನ್ನ ಸೆರಗಿನೊಳಗೆ ಹಾಕಿಕೊಂಡಿದ್ದಾಳೆ.
ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನವೆಂಬರ್ 17 ರಂದು ಮಹಿಳೆ ಬಲ್ ದೇವ್ ಪ್ಲಾಜಾದಲ್ಲಿರುವ ‘ಬೆಚು ಲಾಲ್ ಸರಾಫ್ ಪ್ರೈವೇಟ್ ಲಿಮಿಟೆಡ್’ಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
गोरखपुर में काले चश्मे वाली महिला ने जूलरी शॉप में ऐसे पार किया सोने का हार pic.twitter.com/rqpzQGkw1n
— Samir Abbas (@TheSamirAbbas) November 26, 2022
ಆಕೆ ಆಭರಣಗಳನ್ನು ನೋಡುತ್ತಾ ಕುಳಿತಿದ್ದಳು ಮತ್ತು ಸೀರೆಯಲ್ಲಿ ಆಭರಣ ಪೆಟ್ಟಿಗೆಯನ್ನು ಹಾಕಲು ಕೇವಲ 10 ಸೆಕೆಂಡುಗಳ ಸಮಯ ತೆಗೆದುಕೊಂಡಿದ್ದಳು ಆದರೆ ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಕೆ ನೆಕ್ಲೇಸ್ ಕಳವು ಮಾಡಿರುವುದನ್ನು ಯಾರೂ ಗಮನಿಸಲಿಲ್ಲ ಮತ್ತು ಒಟ್ಟಾರೆ 20 ಸೆಕೆಂಡುಗಳ ಒಳಗೆ ಆಕೆಯು ಸಹಜವಾಗಿಯೇ ಆಭರಣದ ಅಂಗಡಿಯಿಂದ ಹೊರ ಹೋಗಿದ್ದಳು.!