ಸಾಲದ ಆ್ಯಪ್ಗಳಿಗೆ Google ನಿರ್ಬಂಧ
Team Udayavani, Apr 7, 2023, 7:33 AM IST
ಹೊಸದಿಲ್ಲಿ: ಆನ್ಲೈನ್ ಮೂಲಕ ಖಾಸಗಿ ಸಾಲ ನೀಡುವ ಆ್ಯಪ್ಗಳ ವಂಚನೆ ಹೆಚ್ಚುತ್ತಿರುವ ನಡುವೆಯೇ, ಗೂಗಲ್ ಎಲ್ಲ ಸಾಲ ನೀಡುವ ಅಪ್ಲಿಕೇಶನ್ಗಳ ಮೇಲೆ ಕೆಲವು ನಿರ್ಬಂಧ ಹಾಕಿದೆ.
ಬಳಕೆದಾರರ ಸಂಪರ್ಕ ಹಾಗೂ ಚಿತ್ರದ ಮಾಹಿತಿ ಸಿಗದಂತೆ ನಿರ್ಬಂಧಿಸಿರುವುದಾಗಿ ಘೋಷಿಸಿದೆ. ಗೂಗಲ್ ಪ್ಲೇಸ್ಟೋರ್ನಲ್ಲಿರುವ ಅನೇಕ ಆ್ಯಪ್ಗ್ಳು ಬಳಕೆದಾರರಿಗೆ ತತ್ಕ್ಷಣ ಸಾಲ ಸೌಲಭ್ಯ ಒದಗಿಸುತ್ತಿವೆ. ಅದಕ್ಕಾಗಿ ಬಳಕೆದಾರರ ಫೋನ್ನಲ್ಲಿರುವ ಸಂಪರ್ಕ ಹಾಗೂ ಚಿತ್ರಗಳನ್ನು ನೋಡುವ ಅವಕಾಶ ಪಡೆದಿರುತ್ತವೆ. ಅನೇಕ ನಕಲಿ ಆ್ಯಪ್ಗ್ಳು ಅದನ್ನೇ ಬಳಸಿ, ಬಳಕೆದಾರರನ್ನು ವಂಚಿಸುವ, ಬೆದರಿಕೆ ಒಡ್ಡುವ ಕೃತ್ಯಗಳನ್ನು ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಬಳಕೆದಾರರ ಸುರಕ್ಷತೆ ಹಿನ್ನೆಲೆ ಗೂಗಲ್, ಸಾಲ ನೀಡುವ ಇಂಥ ಎಲ್ಲ ಅಪ್ಲಿಕೇಶನ್ಗಳಿಗೆ ನಿರ್ಬಂಧ ಹೇರಿದೆ. ಮೇ 31ರಿಂದ ಈ ನಿಯಮ ಜಾರಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು