

Team Udayavani, May 6, 2019, 6:15 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೊಡ್ಡ ಕಂಪೆನಿಗಳು ಅವ್ಯವಹಾರಗಳಿಂದ ಮೋಸ ಹೋಗುವ ಸಣ್ಣ ಹೂಡಿಕೆದಾರರಿಗೆ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ನೆರವಾಗಲು ಕೇಂದ್ರ ಸರಕಾರವು ನಿರ್ಧರಿಸಿದೆ.
ಕಂಪೆನಿಗಳ ಕಾಯ್ದೆ ಅಡಿಯಲ್ಲಿ ಕಂಪೆನಿಗಳ ವಿರುದ್ಧ ದಾವೆ ಹೂಡಲು ಅವಕಾಶವಿದೆ.ಆದರೆ ಈ ಕಾನೂನು ಸಮರದ ವೆಚ್ಚವೇ ಮೋಸದ ಮೊತ್ತಕ್ಕಿಂತ ಹೆಚ್ಚಾಗುವಂತಿದ್ದರೆ ಸಾಮಾನ್ಯವಾಗಿ ಹೂಡಿಕೆದಾರರು ದಾವೆ ಹೂಡದೇ ಸುಮ್ಮನಾಗುತ್ತಾರೆ. ಇದಕ್ಕಾಗಿ ಕೇಂದ್ರ ಸರಕಾರವು ಹೂಡಿಕೆದಾರರ ಶಿಕ್ಷಣ, ರಕ್ಷಣೆ ನಿಧಿ ಅಡಿಯಲ್ಲಿ ಸಣ್ಣ ಹೂಡಿಕೆದಾರರಿಗೆ ಹಣಕಾಸು ನೆರವು ನೀಡಲು ನಿರ್ಧರಿಸಿದೆ.
ಶೀಘ್ರದಲ್ಲೇ ಈ ಬಗ್ಗೆ ಸ್ಕೀಮ್ ಜಾರಿಗೊಳಿಸಲಾಗುತ್ತದೆ ಎಂದು ಕಾರ್ಪೊರೇಟ್ ವ್ಯವ ಹಾರಗಳ ಕಾರ್ಯದರ್ಶಿ ಇಂಜೆಟಿ ಶ್ರೀನಿವಾಸ್ ಹೇಳಿದ್ದಾರೆ. ವಿದೇಶ ಗಳಲ್ಲಿ ಕ್ಲಾಸ್ ಆಕ್ಷನ್ ದಾವೆ ಎಂದು ಕರೆಯಲಾಗುವ ಇಂತಹ ದಾವೆಯನ್ನು ಮೋಸ ಹೋದ ಹಲವು ಸಣ್ಣ ಹೂಡಿಕೆದಾರರು ಒಟ್ಟಾಗಿ ದಾಖಲಿಸುತ್ತಾರೆ. ಶೀಘ್ರದಲ್ಲೇ ಗುಂಪಿನ ಸದಸ್ಯರ ಸಂಖ್ಯೆ, ಕಂಪೆನಿಯಲ್ಲಿ ಈ ಗುಂಪು ಹೊಂದಿ ರಬೇಕಾದ ಪಾಲು ದಾರಿಕೆ ಪ್ರಮಾಣವನ್ನು ನಿಗದಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
Ad
Bihar: ಸರ್ಕಾರಿ ಹುದ್ದೆಗಳಲ್ಲಿ ಶೇ.35 ರಷ್ಟು ಮಹಿಳೆಯರಿಗೆ ಮೀಸಲು; ನಿತೀಶ್ ಕುಮಾರ್ ಘೋಷಣೆ
ಖಾಸಗಿ ವಿಡಿಯೋ ಹೆಸರಲ್ಲಿ ಬ್ಲಾಕ್‌ಮೇಲ್: ಕಾರು, 3ಕೋಟಿ ಹಣ ಕಳೆದುಕೊಂಡು ಆತ್ಮಹತ್ಯೆ ಶರಣಾದ CA
Himachal Pradesh: ಭೂಕುಸಿತಕ್ಕೂ ಮುನ್ನ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ.!
Tragedy: ಶಾಲಾ ಬಸ್ಸಿಗೆ ರೈಲು ಢಿಕ್ಕಿ… ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃ*ತ್ಯು
Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ
You seem to have an Ad Blocker on.
To continue reading, please turn it off or whitelist Udayavani.