
ರಾಷ್ಟ್ರಪತಿ ಭವನದ ‘ಮೊಘಲ್ ಗಾರ್ಡನ್ ‘ ಇನ್ನು ‘ಅಮೃತ್ ಉದ್ಯಾನ್’ ಆಗಿ ಮರುನಾಮಕರಣ
Team Udayavani, Jan 28, 2023, 4:37 PM IST

ನವದೆಹಲಿ: ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ ಅನ್ನು ‘ಅಮೃತ್ ಉದ್ಯಾನ್’ ಎಂದು ಕೇಂದ್ರ ಸರ್ಕಾರ ಶನಿವಾರ ಮರುನಾಮಕರಣ ಮಾಡಿದೆ.
ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸುವ ‘ಅಮೃತ ಮಹೋತ್ಸವ’ದ ಥೀಮ್ ಗೆ ಅನುಗುಣವಾಗಿ ಕೇಂದ್ರ ಸರ್ಕಾರವು ಮೊಘಲ್ ಗಾರ್ಡನ್ ಹೆಸರನ್ನು ಅಮೃತ್ ಉದ್ಯಾನ್ ಎಂದು ಬದಲಾಯಿಸಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉಪ ಪತ್ರಿಕಾ ಕಾರ್ಯದರ್ಶಿ ನಾವಿಕಾ ಗುಪ್ತಾ ಮಾತನಾಡಿ, ‘ಸ್ವಾತಂತ್ರ್ಯದ 75 ವರ್ಷಗಳನ್ನು ‘ಆಜಾದಿ ಕಾ ಅಮೃತ್ ಮಹೋತ್ಸವ’ ಎಂದು ಆಚರಿಸುವ ಸಂದರ್ಭದಲ್ಲಿ, ಭಾರತದ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದ ಉದ್ಯಾನಗಳಿಗೆ ಅಮೃತ್ ಉದ್ಯಾನ ಎಂಬ ಕಾಮನ್ ಹೆಸರನ್ನು ನೀಡಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ವಿರಾಟ್, ಸಚಿನ್, ಗಾವಸ್ಕರ್ ರಂತಹ ಆಟಗಾರರನ್ನು ಮತ್ತೆ ತಯಾರಿಸಲು ಸಾಧ್ಯವಿಲ್ಲ: ಕೋಚ್ ಗುರುಚರಣ್ ಸಿಂಗ್
ಜನವರಿ 29 ರ ಭಾನುವಾರದಂದು ಅಮೃತ್ ಉದ್ಯಾನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದಾರೆ. ಜನವರಿ 31 ರಿಂದ ಮಾರ್ಚ್ 26 ರವರೆಗೆ ಎರಡು ತಿಂಗಳ ಕಾಲ ಇದು ತೆರೆದಿರುತ್ತದೆ.
On the occasion of the celebrations of 75 years of Independence as ‘Azadi ka Amrit Mahotsav’, the President of India has given a common name to the Rashtrapati Bhavan gardens as ‘Amrit Udyan’: Navika Gupta, Deputy Press Secretary to President pic.twitter.com/VPsJKPdGwZ
— ANI (@ANI) January 28, 2023
ಟಾಪ್ ನ್ಯೂಸ್
