ಗುಜರಾತ್: ಹೊಸ ಮುಖಗಳಿಗೆ ಮಣೆ; ಬಿಜೆಪಿ ಐಡಿಯಾ ವರ್ಕೌಟ್ ಆಯ್ತಾ?
Team Udayavani, Dec 9, 2022, 6:10 AM IST
ಗುಜರಾತ್: ಆಡಳಿತ ವಿರೋಧಿ ಅಲೆಯನ್ನು ಪರಿಗಣಿಸಿ ಬಿಜೆಪಿ ಈ ಬಾರಿ ಮಾಜಿ ಸಿಎಂ ವಿಜಯ್ ರೂಪಾಣಿ ಸೇರಿದಂತೆ 42 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು. ಅವರ ಬದಲಿಗೆ ಎಲ್ಲ ಹೊಸ ಮುಖಗಳನ್ನು ಕಣಕ್ಕಿಳಿಸಿತ್ತು. ಬಿಜೆಪಿಯ ಈ ಕಾರ್ಯತಂತ್ರ ನೂರಕ್ಕೆ ನೂರರಷ್ಟು ಫಲಿಸಿದೆ.
ವಿಜಯ್ ರೂಪಾಣಿ ಅವರ ಕ್ಷೇತ್ರವಾದ ರಾಜ್‌ಕೋಟ್ ಪಶ್ಚಿಮದಲ್ಲಿ ಸ್ಪರ್ಧಿಸಿದ್ದ ದರ್ಶಿತಾ ಶಾ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕಲಾರಿಯಾ ಮನಸುಖಭಾಯಿ ವಿರುದ್ಧ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. 2017ರಲ್ಲಿ ರೂಪಾಣಿ ಅವರು ಈ ಕ್ಷೇತ್ರದಲ್ಲಿ 53,755 ಮತಗಳ ಅಂತರದಿಂದ ಗೆದ್ದಿದ್ದರು.
ರಾಜ್‌ಕೋಟ್ ಪೂರ್ವ ಕ್ಷೇತ್ರದಲ್ಲಿ ಸಚಿವ ಅರವಿಂದ ರಾಜ್ಯಾನಿ ಅವರಿಗೆ ಟಿಕೆಟ್ ನಿರಾಕರಿಸಿ, ಮಾಜಿ ಮೇಯರ್ ಉದಯ್ ಕಾಂಗಾಡ್‌ರಿಗೆ ಟಿಕೆಟ್ ನೀಡ ಲಾಗಿತ್ತು. ಉದಯ್ ಅವರು ಸುಮಾರು 30 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ರಾಜ್‌ಕೋಟ್ ದಕ್ಷಿಣದಲ್ಲಿ ಶಾಸಕರಾಗಿದ್ದ ಗೋವಿಂದ್ ಪಟೇಲ್ ಬದಲಾಗಿ ರಮೇಶ್‌ಭಾಯಿಗೆ ಟಿಕೆಟ್ ಕೊಟ್ಟಿತ್ತು. ಅವರೂ ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸಿದ್ದಾರೆ. ಇನ್ನು, ಅಕೋಟಾ, ರಾವ್‌ಪುರ, ವೆಜಾಲ್ಪುರ್, ಕಾಮ್‌ರೇಜ್, ಉಧಾನಾ, ವೀರಂಗಾಮ್, ಗಾಂಧಿ ನಗರ ದಕ್ಷಿಣ ಸೇರಿದಂತೆ ಹೊಸ ಮುಖಗಳನ್ನು ಕಣಕ್ಕಿಳಿಸಿದ್ದ ಬಹುತೇಕ ಕ್ಷೇತ್ರಗಳನ್ನು ಬಿಜೆಪಿ ಬಾಚಿಕೊಂಡಿದೆ.
ಶೇ.80ಕ್ಕೂ ಹೆಚ್ಚು ಮತ ಪಡೆದ ಅಮಿತ್ ಶಾ! :
ಬಿಜೆಪಿ ಅಭ್ಯರ್ಥಿ ಅಮಿತ್ ಶಾ ಅವರು ವೆಲ್ಲಿಸ್‌ಬ್ರಿಡ್ಜ್ ಕ್ಷೇತ್ರದಲ್ಲಿ ಅಭೂತಪೂರ್ವ ಜಯ ಗಳಿಸಿದ್ದಾರೆ. ಅರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರೇ ಎಂದು ಯೋಚಿಸುತ್ತಿದ್ದೀರಾ? ಇದು ಬಿಜೆಪಿಯ ಚಾಣಕ್ಯ ಅಮಿತ್ ಶಾ ಅಲ್ಲ! ಮಾಜಿ ಮೇಯರ್ ಅಮಿತ್ ಪಿ. ಶಾ. ಈ ಬಾರಿ ಬಿಜೆಪಿ ಹಾಲಿ ಶಾಸಕ ರಾಕೇಶ್ ಶಾ ಅವರನ್ನು ಕೈಬಿಟ್ಟು ಅಮಿತ್ ಶಾ ಅವರಿಗೆ ವೆಲ್ಲಿಸ್‌ಬ್ರಿಡ್ಜ್ ಟಿಕೆಟ್ ನೀಡಿತ್ತು. ಅಚ್ಚರಿಯೆಂಬಂತೆ ಶಾ ಅವರು ಭರ್ಜರಿ ಜಯ ಗಳಿಸಿದ್ದು ಮಾತ್ರವಲ್ಲದೇ ಬರೋಬ್ಬರಿ ಶೇ.80.39ರಷ್ಟು ಮತಗಳನ್ನು ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇದೇ ವೇಳೆ ಘಟೊÉàಡಿಯಾದಿಂದ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೂ ಶೇ.82.95 ಮತಗಳನ್ನು ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani
ಹೊಸ ಸೇರ್ಪಡೆ
ಮಣಿಪಾಲ: ಅಪಾರ್ಟ್ ಮೆಂಟ್ ನಲ್ಲಿ ಲಕ್ಷಾಂತರ ರೂ. ಸೊತ್ತುಗಳ ಕಳವು
ಷೇರುಗಳ ಮೌಲ್ಯ ಕುಸಿತ; ಎಸ್ ಬಿಐ, ಪಿಎನ್ ಬಿ ಬ್ಯಾಂಕ್ ಗಳಿಂದ ಅದಾನಿ ಪಡೆದ ಸಾಲದ ಮೊತ್ತ ಎಷ್ಟು ಗೊತ್ತಾ?
ಮಾರಿಗುಡ್ಡದಲ್ಲಿ ಗಡ್ಡಧಾರಿಗಳ ಅಬ್ಬರ
ಮಂಗಳೂರು : ಜ್ಯುವೆಲ್ಲರಿ ಶಾಪ್ ನಲ್ಲಿ ಸಿಬಂದಿಗೆ ಚೂರಿ ಇರಿತ
ಬಸವ ಕಲ್ಯಾಣದಲ್ಲಿ ಸಿದ್ದರಾಮಯ್ಯ,ಕೋಲಾರದಲ್ಲಿ ಡಿಕೆಶಿ: ಪ್ರಜಾಧ್ವನಿ ಯಾತ್ರೆಗೆ ಚಾಲನೆ