
ಗುಜರಾತ್ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ-ಸ್ಪೋಟ
Team Udayavani, Dec 9, 2020, 9:04 AM IST

ಗುಜರಾತ್: ಇಲ್ಲಿನ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 25ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ವತ್ವಾ ಪ್ರದೇಶದಲ್ಲಿ ಬುಧವಾರ (ಡಿ.9) ಬೆಳಗಿನ ಜಾವ ದುರಂತ ನಡೆದಿದ್ದು, ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ. ದುರ್ಘಟನೆಯಲ್ಲಿ ಯಾವುದೇ ಸೋವುನೋವಿನ ಬಗ್ಗೆ ವರದಿಯಾಗಿಲ್ಲ. ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಗುಜರಾತ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪುಲ್ವಾಮದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾಪಡೆ: ಮುಂದುವರೆದ ಕಾರ್ಯಾಚರಣೆ !
ಕಳೆದ ಭಾನುವಾರ ಇಲ್ಲಿನ ಬಗಾಪುರದಲ್ಲಿ ಬೆಂಕಿ ದುರಂತ ಸಂಭವಿಸಿ 20ಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿದ್ದವು.
ಇದನ್ನೂ ಓದಿ: ಅಮಿತ್ ಷಾ-ರೈತ ಮುಖಂಡರ ನಡುವಿನ ಸಂಧಾನ ಸಭೆ ವಿಫಲ: ಇಂದಿನ ಮಾತುಕತೆ ರದ್ದು ?
Gujarat: Fire breaks out at a chemical factory in Vatva area of Ahmedabad; more than 20 fire tenders are at the spot. More details awaited. pic.twitter.com/PqS53VlpH5
— ANI (@ANI) December 8, 2020
ಟಾಪ್ ನ್ಯೂಸ್
