ಭಾರೀ ಮಳೆ: ಕೇರಳದ 12 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
Team Udayavani, May 19, 2022, 10:00 PM IST
ನವದೆಹಲಿ: ಅಗಾಧ ಮಳೆಗೆ ತುತ್ತಾಗಿರುವ ಕೇರಳದ 12 ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಆರೆಂಜ್ ಅಲರ್ಟ್ ಘೋಷಿಸಿದೆ. ಕಾಸರಗೋಡು, ಕಣ್ಣೂರು, ವಯನಾಡ್, ಕಲ್ಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್, ತ್ರಿಶ್ಶೂರ್, ಎರ್ನಾಕುಲಂ, ಇಡುಕ್ಕಿ, ಕೊಟ್ಟಾಯಂ, ಅಳಪ್ಪುಳ ಹಾಗೂ ಪಟ್ಟಣಂತಿಟ್ಟ ಜಿಲ್ಲೆಗಳಿಗೆ ಈ ಅಲರ್ಟ್ ಘೋಷಣೆಯಾಗಿದೆ.
ಅಸ್ತವ್ಯಸ್ತ: ಅಪಾರ ಮಳೆಯಿಂದಾಗಿ ಎರ್ನಾಕುಳಂ, ತ್ರಿಶ್ಶೂರ್ ಹಾಗೂ ತಿರುವನಂತಪುರ ಜಿಲ್ಲೆಗಳ ಅಲ್ಲಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಎರ್ನಾಕುಳಂನಲ್ಲಿ ಭಾರೀ ಮಳೆ ಹಾನಿಯಾಗಿದ್ದು, ತಗ್ಗು ಪ್ರದೇಶಗಳಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಗಳ ಕಡೆಗೆ ರವಾನಿಸಲಾಗಿದೆ. ಇದೇ ವೇಳೆ, ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ಕೂಡ ಧಾರಾಕಾರ ಮಳೆಯಿಂದ ನಗರ ಪ್ರಮುಖ ಸ್ಥಳಗಳಿಗೆ ನೀರು ನುಗ್ಗಿ ಜನರಿಗೆ ತೊಂದರೆಯಾಗಿದೆ.
ಧೂಳಿನ ಬಿರುಗಾಳಿ:
ಬಿಹಾರ ರಾಜಧಾನಿ ಪಾಟ್ನಾದಲ್ಲಿ ಗುರುವಾರ ಧೂಳಿನ ಬಿರುಗಾಳಿ ಉಂಟಾಗಿದೆ. ಇದರಿಂದಾಗಿ ನಗರದ ಹಲವು ಭಾಗಗಳಲ್ಲಿ ಭಾರಿ ಗಾತ್ರದ ಮರಗಳು ಉರುಳಿ ಬಿದ್ದಿವೆ. ಜತೆಗೆ ಧಾರಾಕಾರ ಮಳೆಯಾಗಿದೆ.
“ಗೂಗಲ್ ಮ್ಯಾಪ್’ ನಂಬಿ ಹಳ್ಳಕ್ಕೆ ಬಿದ್ದರು! :
ಗೂಗಲ್ ಮ್ಯಾಪ್ ನೀಡಿದ ತಪ್ಪು ಮಾಹಿತಿಯನ್ನು ನಂಬಿದ ಕರ್ನಾಟಕದ ಪ್ರವಾಸಿಗರಿದ್ದ ಕಾರೊಂದು ರಭಸವಾಗಿ ಹರಿಯುತ್ತಿದ್ದ ತೊರೆಯೊಂದಕ್ಕೆ ಹೋಗಿ ಬಿದ್ದ ಘಟನೆ ಕೇರಳದ ಕುರುಪ್ಪಂತರ ಕಡವು ಎಂಬಲ್ಲಿ ನಡೆದಿದೆ. ಈ ತಂಡ, ಕರ್ನಾಟಕದಿಂದ ಕೇರಳದ ಮುನ್ನಾರ್ ಮಾರ್ಗವಾಗಿ ಅಳಪ್ಪುಳಕ್ಕೆ ತೆರಳುತ್ತಿತ್ತು. ಆರಂಭದಿಂದಲೂ ಗೂಗಲ್ ಮ್ಯಾಪ್ ನೋಡಿಕೊಂಡೇ ಕಾರು ಚಾಲನೆ ಮಾಡಿಕೊಂಡು ಬರಲಾಗಿದ್ದು, ಕುರುಪ್ಪಂತರ ಕಡವು ಬಳಿ ಬಂದಾಗ ಗೂಗಲ್ ಮ್ಯಾಪ್‌ನಲ್ಲಿ ನೇರವಾಗಿ ಚಲಿಸುವಂತೆ ಸಂದೇಶ ಬಂದಿದೆ. ಅದನ್ನು ನಂಬಿದ ಚಾಲಕ ತಿರುವನ್ನು ಲೆಕ್ಕಿಸದೆ ನೇರವಾಗಿ ನುಗ್ಗಿದಾಗ ಕಾರು ತೊರೆಗೆ ಬಿದ್ದಿದೆ. ತಕ್ಷಣವೇ ಸ್ಥಳೀಯರು ಬಂದು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋಲ್ಕತಾ ವೈದ್ಯಕೀಯ ಕಾಲೇಜಿನಲ್ಲಿ ಕೊನೆ ಕ್ಷಣದಲ್ಲಿ ಪರೀಕ್ಷೆ ರದ್ದು
ಬಂಡಾಯ ಶಾಸಕರ ಮನವಿ : ಮಹಾ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ
ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆ
ರಾವುತ್ ಗೆ ಇಡಿ ಸಮನ್ಸ್; ತಲೆ ಕಡಿದರೂ ಗುವಾಹಟಿಯತ್ತ ಬರುವುದಿಲ್ಲ !
ಅವರ ದೇಹ ಮಾತ್ರ ವಾಪಸ್ ಬರಲಿದೆ…: ಸೇನಾ ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಎಚ್ಚರಿಕೆ