ಅಸ್ಸಾಂ ಭಾರೀ ಮಳೆ: ಆಸ್ಪತ್ರೆಗೂ ನೀರು; ರಸ್ತೆಯಲ್ಲೇ ಕೀಮೋ ಥೆರಪಿ
Team Udayavani, Jun 28, 2022, 1:06 AM IST
ಗುವಾಹಾಟಿ: ಅಸ್ಸಾಂನಲ್ಲಿ ಭಾರೀ ಮಳೆ ಯಿಂದಾಗಿ ಪ್ರವಾಹ ಸ್ಥಿತಿ ಇನ್ನೂ ಮುಂದುವರಿದಿದೆ.
ನೆರೆಯಿಂದಾಗಿ ಕಾಚಾರ್ ಜಿಲ್ಲೆಯ ಕಾಚಾರ್ ಕ್ಯಾನ್ಸರ್ ಆಸ್ಪತ್ರೆಯೂ ಜಲಾವೃತವಾಗಿದೆ. ಇದರಿಂದಾಗಿ ವೈದ್ಯಕೀಯ ಸಿಬಂದಿ ಕ್ಯಾನ್ಸರ್ ಪೀಡಿತರಿಗೆ ರಸ್ತೆಯಲ್ಲೇ ಕೀಮೋ ಥೆರಪಿ ನಡೆಸುವ ಅನಿವಾರ್ಯ ಸ್ಥಿತಿ ಉಂಟಾಗಿದೆ.
“ಆಸ್ಪತ್ರೆಯ ಹೊರಭಾಗದಲ್ಲೂ ಮಾಡಬಹುದಾದಂತಹ ಕೀಮೋ, ಪ್ರಾಥಮಿಕ ವೈದ್ಯಕೀಯ ಪರಿಶೀಲನೆ ಯನ್ನು ರಸ್ತೆಯ ಬದಿಯಲ್ಲೇ ಮಾಡಲಾರಂಭಿಸಿದ್ದೇವೆ. ಮಳೆ ಇಲ್ಲದ ಸಮಯ ನೋಡಿಕೊಂಡು ಈ ರೀತಿ ಚಿಕಿತ್ಸೆ ಕೊಡಲಾಗುತ್ತಿದೆ. ಪ್ರವಾಹಕ್ಕೂ ಮೊದಲು ವಾರಕ್ಕೆ 20ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು.
ಆದರೆ ಈಗ ಅತೀ ತುರ್ತಾಗಿರುವ ಕೆಲವೇ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಪ್ರವಾಹ ಆರಂಭವಾ ದಾಗಿನಿಂದ ಕೇವಲ 3 ಶಸ್ತ್ರಚಿಕಿತ್ಸೆ ನಡೆದಿದೆ’ ಎಂದು ಆಸ್ಪತ್ರೆಯ ಸಂಪನ್ಮೂಲ ಕ್ರೋಢೀ ಕರಣ ಇಲಾಖೆಯ ನಿರ್ವಾಹಕರಾಗಿರುವ ದರ್ಶನ ತಿಳಿಸಿದ್ದಾರೆ. ಆಸ್ಪತ್ರೆಗೆ ಕುಡಿಯುವ ನೀರು, ವಿದ್ಯುತ್ ಇಲ್ಲದಿದ್ದಾಗ ಬಳಕೆಗೆ ಡೀಸೆಲ್, ಅಡುಗೆ ಅನಿಲದ ಪೂರೈಕೆಯ ಆವಶ್ಯಕತೆಯಿದೆ ಎಂದಿದ್ದಾರೆ ಅವರು.
ಇನ್ನೊಂದೆಡೆ, ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ತಗ್ಗುತ್ತಿದೆ. ಪ್ರವಾಹದಿಂದಾಗಿ 22 ಲಕ್ಷ ಮಂದಿ ಸಂಕಷ್ಟದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಸ್ತ್ರಾಸ್ತ್ರ ಸಾಗಾಟ:ಜಮ್ಮು-ಕಾಶ್ಮೀರ ಜೈಲಿನಲ್ಲಿ ಶಂಕಿತ ಉಗ್ರ ಹೃದಯಾಘಾತದಿಂದ ಸಾವು
ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಶಾಸಕನ ಬಂಧನ
ಮುಂಬೈ: ಬೊರಿವಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ರಕ್ಷಣಾ ಕಾರ್ಯಾಚರಣೆ
ನಾನು ಸೇನೆಗೆ ಸೇರಲು ಬಯಸಿದ್ದೆ ಆದರೆ ಸಾಧ್ಯವಾಗಲಿಲ್ಲ: ರಕ್ಷಣಾ ಸಚಿವ ಸಿಂಗ್
“ರಾಷ್ಟ್ರೀಯ ಮಿಷನ್” ಗಾಗಿ “ಮಿಸ್ಡ್ ಕಾಲ್” ಅಭಿಯಾನ ಪ್ರಾರಂಭಿಸಿದ ಕೇಜ್ರಿವಾಲ್