
Supreme Court; ಬೇರೆ ರಾಜ್ಯದಲ್ಲಿ ಕೇಸ್ ಆದರೂ ಜಾಮೀನು
Team Udayavani, Nov 21, 2023, 12:34 AM IST

ಹೊಸದಿಲ್ಲಿ: ಬೇರೆ ರಾಜ್ಯದಲ್ಲಿ ಎಫ್ಐಆರ್ ದಾಖಲಾಗಿದ್ದರೂ, ಆರೋಪಿಗೆ ಮತ್ತೊಂದು ರಾಜ್ಯದ ಹೈಕೋರ್ಟ್ ಅಥವಾ ಸೆಷನ್ಸ್ ಕೋರ್ಟ್ ನಿರೀಕ್ಷಣ ಜಾಮೀನು ಮಂಜೂರು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ನ್ಯಾಯ ಒದಗಿಸುವ ಉದ್ದೇಶದಿಂದ ವಿಶೇಷ ಪ್ರಕರಣಗಳಲ್ಲಿ ಅನಿವಾರ್ಯವಿದ್ದಾಗ ಮಾತ್ರ ಹೀಗೆ ಮಾಡಲು ಅವಕಾಶವಿದೆ ಎಂದೂ ನ್ಯಾ| ಬಿ.ವಿ.ನಾಗರತ್ನಾ ಮತ್ತು ನ್ಯಾ| ಉಜ್ಜಲ್ ಭುಯಾನ್ ನೇತೃತ್ವದ ನ್ಯಾಯಪೀಠ ಸ್ಪಷ್ಟ ಪಡಿಸಿದೆ.
ತನ್ನ ವ್ಯಾಪ್ತಿಯಲ್ಲಿರುವ ಹೈಕೋರ್ಟ್ ಮೊರೆ ಹೋಗಲು ಸಾಧ್ಯವಾಗುತ್ತಿಲ್ಲ ಎನ್ನು ವುದಕ್ಕೆ ಆರೋಪಿಯು ಸೂಕ್ತ ಕಾರಣಗಳನ್ನು ನೀಡಿದರೆ, ತನ್ನ ಜೀವಕ್ಕೆ ಅಪಾಯವಿರುವ ಬಗ್ಗೆ ಸಾಕ್ಷ್ಯ ಒದಗಿಸಿದರೆ ಅಂಥ ಸಂದರ್ಭಗಳಲ್ಲಿ, ಆ ವ್ಯಕ್ತಿಯ ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಪರಿಗಣಿಸಿ ಹೈಕೋರ್ಟ್ ಅಥವಾ ಸೆಷನ್ಸ್ ಕೋರ್ಟ್ ತಮ್ಮ ವ್ಯಾಪ್ತಿಯ ಹೊರತಾಗಿರುವ ಪ್ರಕರಣ ಗಳಲ್ಲೂ ನಿರೀಕ್ಷಣ ಜಾಮೀನು ನೀಡಬ ಹುದು ಎಂದು ನ್ಯಾಯಪೀಠ ಹೇಳಿದೆ.
ಟಾಪ್ ನ್ಯೂಸ್
