Highest Temperature; ರಾಜಸ್ಥಾನದ ಫಲೋಡಿಯಲ್ಲಿ 50 ಡಿಗ್ರಿಗೆ ಏರಿದ ತಾಪ!
Team Udayavani, May 26, 2024, 7:30 AM IST
ಜೈಪುರ: ರಾಜಸ್ಥಾನದಲ್ಲಿ ಬಿಸಿಲ ಬೇಗೆ ವಿಪರೀತ ಹೆಚ್ಚಳವಾಗಿದ್ದು, ತಾಪಮಾನ 50 ಡಿಗ್ರಿ ಸೆ.ಗೆ ತಲುಪಿದೆ. ಹೀಗಾಗಿ ಉಷ್ಣಾಂಶ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.
ರಾಜಸ್ಥಾನದ ಫಲೋಡಿಯಲ್ಲಿ ಶನಿವಾರ ಉಷ್ಣತೆ 50 ಡಿ.ಸೆ. ದಾಟಿದೆ. ಉಳಿದಂತೆ ಜೈಸಲ್ಮೇರ್ನಲ್ಲಿ 48, ಬಿಕಾನೇರ್ನಲ್ಲಿ 47.2, ಜೋಧ್ಪುರದಲ್ಲಿ 46.9, ಗಂಗಾನಗರದಲ್ಲಿ 46.5, ಕೋಟಾದಲ್ಲಿ 46.3, ಜೈಪುರದಲ್ಲಿ 43.8 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ.
ಅಧಿಕಾರಿಗಳಿಗೆ ನೋಟಿಸ್:
ಹವಾಮಾನದಲ್ಲಿ ವೈಪರೀತ್ಯವುಂಟಾಗಿದ್ದರೂ ಆಸ್ಪತ್ರೆಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದ್ದಕ್ಕೆ 12 ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅತಿಯಾದ ತಾಪದಿಂದ ಜನ ತೊಂದರೆಗೀಡಾಗಬಹುದು ಎಂಬ ಕಾರಣಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿತ್ತು. ಆದರೂ ಸಿದ್ಧತೆ ಕೈಗೊಳ್ಳದ ಆರೋಗ್ಯ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanchanjunga Express Train Mishap: ಮೃತರ ಸಂಖ್ಯೆ 15ಕ್ಕೆ ಏರಿಕೆ, 60 ಜನರಿಗೆ ಗಾಯ
Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ
Jharkhand: ಪೊಲೀಸರ ಎನ್ ಕೌಂಟರ್ ಗೆ ಮಹಿಳೆ ಸೇರಿ ನಾಲ್ವರು ನಕ್ಸಲೀಯರು ಮೃತ್ಯು
Train Mishap: ಕಾಂಚನಜುಂಗಾ ಎಕ್ಸ್ಪ್ರೆಸ್ಗೆ ಡಿಕ್ಕಿ ಹೊಡೆದ ಗೂಡ್ಸ್ ರೈಲು, ಹಲವರಿಗೆ ಗಾಯ
VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ
MUST WATCH
ಹೊಸ ಸೇರ್ಪಡೆ
Kanchanjunga Express Train Mishap: ಮೃತರ ಸಂಖ್ಯೆ 15ಕ್ಕೆ ಏರಿಕೆ, 60 ಜನರಿಗೆ ಗಾಯ
Shimoga; ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ
ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ
Devil ಚಿತ್ರದ ನಾಯಕಿ ರಚನಾ ರೈ ಕನಸು ಭಗ್ನ
Tata Nexon: ಟಾಟಾ ನೆಕ್ಸಾನ್ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.