ಐಟಿಬಿಪಿ ಕಾನ್ಸ್ ಟೇಬಲ್ ಹಾಡಿದ ಹಿಂದಿ ಹಾಡು ವೈರಲ್; ನೆಟ್ಟಿಗರು ಫಿದಾ
Team Udayavani, Jul 14, 2022, 3:34 PM IST
ಹೊಸದಿಲ್ಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಕಾನ್ಸ್ ಟೇಬಲ್ ಬಾಲಿವುಡ್ ನ ಪ್ರಸಿದ್ಧ ಹಾಡು ಹಾಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಅವರ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಅಧಿಕೃತ ಖಾತೆಯಲ್ಲಿ ಕಾನ್ಸ್ ಟೇಬಲ್ ಹಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಕಾನ್ಸ್ಟೆಬಲ್ ವಿಕ್ರಮಜೀತ್ ಸಿಂಗ್ ಅವರು ಗಾಯಕ ರೂಪ್ ಕುಮಾರ್ ರಾಥೋಡ್ ಅವರು ಹಾಡಿರುವ ಹಿಟ್ ಹಾಡನ್ನು ಹಾಡಿದ್ದಾರೆ.
1997ರ ಬಾರ್ಡರ್ ಚಲನಚಿತ್ರದ ‘ಎ ಜಾಥೇ ಹುಯೇ ಲಮಹೋ….’ ಎಂಬ ಹಾಡನ್ನು ಹಿಮ ವೀರ ಸಹೋದರರ ಕೋರಿಕೆಯ ಮೇರೆಗೆ ಕಾನ್ಸ್ ಟೇಬಲ್ ವಿಕ್ರಮಜೀತ್ ಸಿಂಗ್ ಅವರು ಹಾಡಿದ್ದಾರೆ.
ಇದನ್ನೂ ಓದಿ:ಎತ್ತಿನ ಕತ್ತಿನ ಭಾರಕ್ಕೆ ನೊಗವಾದ ‘ರೋಲಿಂಗ್ ಸಪೋರ್ಟ್’
ಬಹುತಾರಾಗಣದ ಬಾರ್ಡರ್ 1971 ರ ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯುಳ್ಳ ಸಿನಿಮಾ. ಬಾರ್ಡರ್ ಸಿನಿಮಾವನ್ನು ಜೆಪಿ ದತ್ತಾ ಬರೆದು, ನಿರ್ಮಿಸಿ ಮತ್ತು ನಿರ್ದೇಶಿಸಿದ್ದಾರೆ. ಈ ಸಿನಿಮಾ ಮತ್ತು ಹಾಡು ಸಿನಿಮಾ ಪ್ರೇಮಿಗಳ ಮನಗೆದ್ದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!