ಸುಶಾಂತ್ಗೂ ಬ್ಲ್ಯೂಟಿಕ್: ಮಸ್ಕ್ ಸುಳ್ಳಾಡುತ್ತಿದ್ದಾರಾ?
Team Udayavani, Apr 29, 2023, 7:45 AM IST
ನವದೆಹಲಿ: ಬ್ಲ್ಯೂಟಿಕ್ ಬದಲಾವಣೆ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಗೊಂದಲ ಸೃಷ್ಟಿಸಿರುವ ಟ್ವಿಟರ್, ಇದೀಗ ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (ಎಸ್ಎಸ್ಆರ್ ) ಅವರ ಖಾತೆಗೆ ಬ್ಲ್ಯೂಟಿಕ್ ನೀಡುವ ಎಡವಟ್ಟು ಮಾಡಿದೆ.
ಈ ಸಂಬಂಧಿಸಿದಂತೆ ಭಾರತದ ಮಾಜಿ ಟ್ವಿಟರ್ ಮುಖ್ಯಸ್ಥರಾದ ಮನೀಷ್ ಮಹೇಶ್ವರಿ, ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ, ನ್ಯೂ ವೆರಿಫಿಕೇಶನ್ ಹೆಸರಲ್ಲಿ ಮಸ್ಕ್ ಜನರಿಗೆ ಸುಳ್ಳು ಹೇಳುತ್ತಿದ್ದಾರೆಂದು ಆರೋಪಿಸಿದ್ದಾರೆ.
ಈ ಕುರಿತು ಮನೀಷ್ ಟ್ವೀಟ್ ಮಾಡಿ, “ಎಸ್ಎಸ್ಆರ್ ಖಾತೆಗೆ ಬ್ಲೂéಟಿಕ್ ದೊರೆತಿದ್ದು ಹೇಗೆ ? ಮೊಬೈಲ್ ನಂಬರ್ ವೆರಿಫಿಕೇಶನ್ ಆದ ಬಳಿಕವಷ್ಟೇ ಬ್ಲ್ಯೂಟಿಕ್ ಸಿಗುವುದಲ್ಲವೇ? ಇದರರ್ಥ ಒಂದು ಹೊಸ ವೆರಿಫಿಕೇಶನ್ ಹೆಸರಲ್ಲಿ ಮಸ್ಕ್ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಅಥವಾ ಸತ್ತಮೇಲೂ ಜನರು ಫೋನ್ ಬಳಕೆ ಮಾಡುವುದನ್ನು ಕಲಿತಿದ್ದಾರೆ ಅಷ್ಟೇ ಎಂದಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ಬ್ಲ್ಯೂಟಿಕ್ ಅವ್ಯವಸ್ಥೆ ಬೆಳಕಿಗೆ ತರಲು ಮಾತ್ರ ಸುಶಾಂತ್ ಅವರ ಖಾತೆಯ ಉದಾಹರಣೆ ನೀಡಿರುವುದಾಗಿಯೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್