ಥಾಣೆ: ಅಕ್ರಮ ಕಾಲ್ ಸೆಂಟರ್ ಪತ್ತೆ; ಮಾಲಕನ ಬಂಧನ
Team Udayavani, Oct 12, 2018, 11:57 AM IST
ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಟೌನ್ಶಿಪ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯವೆಸಗುತ್ತಿದ್ದ ಅಕ್ರಮ ಕಾಲ್ ಸೆಂಟರ್ ಒಂದನ್ನು ಪತ್ತೆ ಹಚ್ಚಲಾಗಿದೆ.
ಅಮೆರಿಕದ ಎರಡು ಫಾರ್ಮಾ ಕಂಪೆನಿಗಳಿಗೆ ಐಟಿ ಸೇವೆ ಒದಗಿಸುತ್ತಿದ್ದ ಈ ಅಕ್ರಮ ಕಾಲ್ ಸೆಂಟರ್ ನ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕನ್ನರಿಗೆ ಫೋನ್ ಮಾಡುವ ಸಲುವಾಗಿ ಮೂವರು ಆಪರೇಟರ್ಗಳನ್ನು ತಿಂಗಳಿಗೆ 12,000 ರೂ. ವೇತನದ ಮೇಲೆ ಇಲ್ಲಿ ಕೆಲಸಕ್ಕೆ ಇಟ್ಟುಕೊಳ್ಳಲಾಗಿತ್ತು.
ಬಂಧಿತ ಮಾಲಕನನ್ನು ಅಬ್ದುಲ್ ವಷೀದ್ ಕಾದಿರ್ ಚೌಧರಿ (23) ಎಂದು ಗುರುತಿಸಲಾಗಿದೆ. ಮುಂಬ್ರಾದ ಅಮೃತ್ ನಗರ ಪ್ರದೇಶದಲ್ಲಿ ಕಾರ್ಯವೆಸಗುತ್ತಿದ್ದ ಈ ಕಾಲ್ ಸೆಂಟರ್ನ ಮೇಲೆ ನಿನ್ನೆ ಗುರುವಾರ ಬೆಳಗ್ಗೆ ದಾಳಿ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!