ಮುಂಬಯಿ: ಗರ್ಭಿಣಿಯ ಕತ್ತು ಹಿಸುಕಿ ಹತ್ಯೆ
Team Udayavani, Apr 28, 2022, 11:00 PM IST
ಮುಂಬಯಿ: ವ್ಯಕ್ತಿಯೊಬ್ಬ ಎಂಟು ತಿಂಗಳ ಗರ್ಭಿಣಿಯನ್ನು ಆಕೆಯ ನಿವಾಸದಲ್ಲಿ ಕತ್ತು ಹಿಸುಕಿ ಹತ್ಯೆಗೈದ ಘಟನೆ ಮುಂಬಯಿ ಕುರ್ಲಾ ಪ್ರದೇಶದಲ್ಲಿ ಸಂಭವಿಸಿದೆ.
ಸಂತ್ರಸ್ತೆ ಕೋಮಲ್ ಸಂಜಯ್ ಸೋನ್ಕರ್ (20) ಬುಧವಾರ ಮಧ್ಯಾಹ್ನ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಭ್ರೂಣವೂ ಗರ್ಭದಲ್ಲಿ ಸಾವನ್ನಪ್ಪಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿ ಅರ್ಜುನ್ ಸೋನ್ಕರ್ (22) ಸಂತ್ರಸ್ತೆಯ ಪತಿ ಸಂಜಯ್ ಅವರ ಸೋದರ ಸಂಬಂಧಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಅವರೊಂದಿಗೆ ವಾಸಿಸುತ್ತಿದ್ದ. ಕೊಲೆಗೆ ಕಾರಣ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.