ಲೈಂಗಿಕ ದೌರ್ಜನ್ಯ: ಅಪರಾಧಿಗೆ 26 ದಿನಗಳಲ್ಲಿ ಮರಣದಂಡನೆ ವಿಧಿಸಿದ ನ್ಯಾಯಾಲಯ


Team Udayavani, Mar 18, 2021, 6:45 PM IST

incident held at Rajasthan

ನವದೆಹಲಿ: 5 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಹಿನ್ನೆಲೆಯಲ್ಲಿ ಕೇವಲ  26 ದಿನಗಳ ಬಳಿಕ  ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ವಿಶೇಷ POCSO  ನ್ಯಾಯಾಲಯವು ಅಪರಾಧಿಗೆ ಮರಣದಂಡನೆಯನ್ನು ವಿಧಿಸಿದೆ.

ಘಟನೆಯ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸರು ಕಳೆದ ಫ್ರೆಬ್ರವರಿ 19 ರಂದು ತನ್ನ ಮನೆಯ ಬಳಿಯ ಹೊಲವೊಂದರಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿಯ ಮೇಲೆ 21 ವರ್ಷ ವಯಸ್ಸಿನ ಯುವಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಘಟನೆ ನಡೆದ ಬಳಿಕ ಬಾಲಕಿಯ ಜೊತೆಯಲ್ಲಿ ಆಟವಾಡುತ್ತಿದ್ದ ಮಕ್ಕಳು ಆಕೆಯ ಪೋಷಕರ ಬಳಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಬಾಲಕಿಯ ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದಾಗ ಆಕೆ ನಿರ್ಜನ ಪ್ರದೇಶದಲ್ಲಿ ಸಿಕ್ಕಿದ್ದಳು ಎಂದಿದ್ದಾರೆ.

ಆ ಬಳಿಕ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಸತತ 5 ಘಂಟೆಗಳ ನಿರಂತರ ಕಾರ್ಯಚರಣೆಯ ಬಳಿಕ ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಬಸವ ಕಲ್ಯಾಣ ಉಪ ಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಜೆಡಿಎಸ್

ಕೋರ್ಟ್ ಆದೇಶದ ಕುರಿತಾಗಿ ಮಾಹಿತಿ ನೀಡಿರುವ ಪ್ರಕರಣದ ತನಿಖಾ ಅಧಿಕಾರಿ ಸುರೇಶ್ ಶರ್ಮಾ, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿರುವ ನ್ಯಾಯಾಲಯವು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ POCSO ಕಾಯ್ದೆಯ ಅಡಿಯಲ್ಲಿ  ಅಪರಾಧಿಗೆ ಮರಣದಂಡನೆಯನ್ನು ವಿಧಿಸಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಪೊಲೀಸ್ ಇಲಾಖೆಯನ್ನು ಶ್ಲಾಘಿಸಿರುವ ನ್ಯಾಯಾಲಯವು ಇದು ಯಾವುದೇ ಪ್ರಕರಣಗಳನ್ನು ವ್ಯವಸ್ಥಿತವಾಗಿ ನಡೆಸುವಲ್ಲಿ ಮಾದರಿ ತನಿಖೆಯಾಗಿದ್ದು, ಈ ತನಿಖೆಯಲ್ಲಿ ಇಲಾಖೆಯು  ವೈಜ್ಞಾನಿಕ, ತಂತ್ರಜ್ಞಾನ ಹಾಗೂ ಸಾಂದರ್ಭಿಕ ಆದಾರಗಳನ್ನು ಕಲೆಹಾಕಿರುವುದಾಗಿ ತಿಳಿಸಿದ್ದಾರೆ.

ಈ ಕುರಿತಾಗಿ ತಮ್ಮ ಟ್ವೀಟ್ ಸಂದೇಶದ ಮೂಲಕ ಮಾಹಿತಿ ಹಂಚಿಕೊಂಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘಟನೆ ನಡೆದ ಕೇವಲ ಒಂಭತ್ತು ದಿನದ ಒಳಗೆ  ಪೊಲೀಸರು ಜಾರ್ಜ್ ಶೀಟ್ ಹಾಕಿದ್ದು, ಕೇವಲ 26 ದಿನಗಳಲ್ಲಿ ಕೋರ್ಟ್ ವಿಚಾರಣೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸಿದೆ.ಇದು ಪೊಲೀಸ್ ಇಲಾಖೆ, ನ್ಯಾಯಾಂಗ ವ್ಯವಸ್ಥೆ ಕಾರ್ಯ ಕ್ಷಮತೆ  ಹಾಗೂ ಸರ್ಕಾರದ ಬದ್ದತೆಯನ್ನು ಎತ್ತಿಹಿಡಿಯುವ ಅಂಶವಾಗಿದೆ ಎಂದಿದ್ದಾರೆ.

 

ಟಾಪ್ ನ್ಯೂಸ್

1-sdsadsad

Sugar factory; ಎಥೆನಾಲ್‌ಗೆ ಕಬ್ಬಿನ ರಸ ಬಳಸದಿರಿ: ಕೇಂದ್ರ ಸರಕಾರ ನಿರ್ದೇಶನ 

1-sadsdsa-d

BJP ಜನರ ಆಯ್ಕೆ ಎನ್ನುವುದು ಸಾಬೀತು: 3 ರಾಜ್ಯಗಳ ಗೆಲುವಿನ ಬಗ್ಗೆ ಮೋದಿ ಬಣ್ಣನೆ

1-sadasdd

Pro Kabaddi-10; ಗುಜರಾತ್‌ಗೆ ಆಘಾತ: ಪಾಟ್ನಾ ಜಯಭೇರಿ

1-sadasd

Painkiller ‘ಮೆಫ್ತಾಲ್’ ಮಾತ್ರೆ ಅಡ್ಡಪರಿಣಾಮ ಬೀರುತ್ತದೆ: ಸರಕಾರದ ಎಚ್ಚರಿಕೆ

ARINDAM BAGCHI

PoK ಭಾರತದ ಭಾಗ; ಯಾವುದೇ ಕಾರಣಕ್ಕೂ ಹೇಳಿಕೆಯನ್ನು ಬದಲಿಸುವುದಿಲ್ಲ: MEA

ವಾರದಲ್ಲಿ ಐಸಿಸ್ ನಂಟು ಸಾಬೀತಿಗೆ ಯತ್ನಾಳ್ ಗೆ ತನ್ವೀರ ಹಾಶ್ಮಿ ಸವಾಲು

Vijayapura; ವಾರದಲ್ಲಿ ಐಸಿಸ್ ನಂಟು ಸಾಬೀತಿಗೆ ಯತ್ನಾಳ್ ಗೆ ತನ್ವೀರ ಹಾಶ್ಮಿ ಸವಾಲು

pinarayi

Dowry ಬೇಡಿಕೆ ಪ್ರಸ್ತಾಪಗಳನ್ನು ತಿರಸ್ಕರಿಸಲು ಯುವತಿಯರಿಗೆ ಪ್ರೋತ್ಸಾಹ ನೀಡಬೇಕು:ಕೇರಳ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cen

Politics: ಶೋಭಾ ಕರಂದ್ಲಾಜೆ, ರಾಜೀವ್‌ ಚಂದ್ರಶೇಖರ್‌,ಅರ್ಜುನ್‌ ಮುಂಡಾಗೆ ಹೆಚ್ಚುವರಿ ಖಾತೆ

china pnuemonia

China: ದೇಶಕ್ಕೆ ಚೀನ ಸೋಂಕು?- ದಿಲ್ಲಿ ಏಮ್ಸ್‌ನಲ್ಲಿ ಏಳು ಮಾದರಿ ಪಾಸಿಟಿವ್‌

1-wewwqee

Deepfake ರತನ್‌ ಟಾಟಾ ಫೋಟೋ ಬಳಕೆ

1-sdsadsad

Sugar factory; ಎಥೆನಾಲ್‌ಗೆ ಕಬ್ಬಿನ ರಸ ಬಳಸದಿರಿ: ಕೇಂದ್ರ ಸರಕಾರ ನಿರ್ದೇಶನ 

Supreme Court

Historic ಕನ್ನಡದಲ್ಲೂ ಕೇಶವಾನಂದ ಭಾರತಿ ತೀರ್ಪು

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

cen

Politics: ಶೋಭಾ ಕರಂದ್ಲಾಜೆ, ರಾಜೀವ್‌ ಚಂದ್ರಶೇಖರ್‌,ಅರ್ಜುನ್‌ ಮುಂಡಾಗೆ ಹೆಚ್ಚುವರಿ ಖಾತೆ

vijayendra R Ashok

ಬೆಳಗಾವಿ ಕಲಾಪದಲ್ಲಿ BJP ಗಲಿಬಿಲಿ!- ಅಶೋಕ್‌, ವಿಜಯೇಂದ್ರ ನಡುವೆ ಧರಣಿ, ಸಭಾತ್ಯಾಗ ಗೊಂದಲ

china pnuemonia

China: ದೇಶಕ್ಕೆ ಚೀನ ಸೋಂಕು?- ದಿಲ್ಲಿ ಏಮ್ಸ್‌ನಲ್ಲಿ ಏಳು ಮಾದರಿ ಪಾಸಿಟಿವ್‌

kempanna

ಕೆಂಪಣ್ಣ ಹೊಸ ಕಮಿಷನ್‌ ಬಾಂಬ್‌ -ಆಗ ರಾಜಕಾರಣಿಗಳು; ಈಗ ಅಧಿಕಾರಿಗಳ ದರಬಾರು ನಡೆಯುತ್ತಿದೆ

pro

Mangaluru: ಅತಿಥಿ ಉಪನ್ಯಾಸಕರ ಖಾಯಮಾತಿ ಆಗ್ರಹಿಸಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.