ನೀರವ್ ಮೋದಿ ಗಡೀಪಾರು: ಬ್ರಿಟನ್‌ಗೆ ಕೇಂದ್ರ ಸರಕಾರದ ಕೋರಿಕೆ
Team Udayavani, Aug 3, 2018, 6:01 PM IST
ಹೊಸದಿಲ್ಲಿ: 14,000 ಕೋಟಿ ರೂ. ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಹಗರಣದ ಮುಖ್ಯ ಆರೋಪಿಯಾಗಿ ದೇಶದಿಂದ ಪಲಾಯನ ಮಾಡಿ ಪ್ರಕೃತ ಬ್ರಿಟನ್‌ನಲ್ಲಿರುವ ಬಿಲಿಯಾಧಿಪತಿ ವಜ್ರ ಉದ್ಯಮಿ ನೀರವ್ ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಕೇಂದ್ರ ಸರಕಾರ ಬ್ರಿಟನ್ ಸರಕಾರವನ್ನು ಕೋರಿದೆ.
ನೀರವ್ ಮೋದಿ ವಿರುದ್ಧ ಇಂಟರ್ ಪೋಲ್ ಈಗಾಗಲೇ ಎರಡು ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಿದೆ ಎಂದು ಕೇಂದ್ರ ಸಹಾಯಕ ವಿದೇಶ ವ್ಯವಹಾರಗಳ ಸಚಿವ ವಿ ಕೆ ಸಿಂಗ್ ಹೇಳಿದರು.
ನೀರವ್ ಮೋದಿ ಗಡೀಪಾರು ಕೋರಿಕೆಯನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಶನ್‌ಗೆ ವಿಶೇಷ ರಾಜತಾಂತ್ರಿಕ ಬ್ಯಾಗ್ ಮೂಲಕ ಕಳುಹಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ಪ್ರಶ್ನೆಗೆ ನೀಡಿದ ಲಿಖೀತ ಉತ್ತರದಲ್ಲಿ ಸಿಂಗ್ ಹೇಳಿದರು.