ಹೈದರಾಬಾದ್: ಜಗತ್ತಿನ ದೊಡ್ಡ ಚಿನ್ನದ ನಾಣ್ಯಕ್ಕೆ ಮತ್ತೆ ಶೋಧ
1987ರಲ್ಲಿ ಸ್ವಿಜರ್ಲೆಂಡ್‌ನಲ್ಲಿ ಹರಾಜಿಗೆ ನಡೆದಿತ್ತು ಯತ್ನ
Team Udayavani, Jun 28, 2022, 7:25 AM IST
ಹೈದರಾಬಾದ್: ನಾಪತ್ತೆಯಾಗಿದೆ ಎಂದು ಸದ್ಯಕ್ಕೆ ನಂಬಲಾಗಿರುವ ಜಗತ್ತಿನ ಅತ್ಯಂತ ದೊಡ್ಡ ಚಿನ್ನದ ನಾಣ್ಯದ ಬಗ್ಗೆ ಕೇಂದ್ರ ಸರಕಾರ 35 ವರ್ಷಗಳ ಬಳಿಕ ಮತ್ತೆ ಶೋಧ ಕಾರ್ಯ ಶುರು ಮಾಡಿದೆ. ಅದು 11.7 ಕೆಜಿ ತೂಕ ಇದ್ದು, ಹೈದರಾಬಾದ್‌ನ 8ನೇ ನಿಜಾಮ ಮುಕರ್ರಮ್ ಝಾ ಎಂಬಾತನ ಬಳಿ ಇತ್ತು ಎಂದು ಹೇಳಲಾಗಿತ್ತು.
ಅದನ್ನು ಜಹಾಂಗೀರ್ ಎಂಬಾತನ ಕಾಲದಲ್ಲಿ ರಚಿಸಲಾಗಿತ್ತು. ಮುಕರ್ರಮ್ ಝಾ ಎಂಬಾತನಿಗೆ ಆತನ ಅಜ್ಜ ಮಿರ್ ಒಸ್ಮಾನ್ ಅಲಿ ಖಾನ್ ಮೂಲಕ ಲಭಿಸಿತ್ತು. ಮುಕರ್ರಮ್ ಕುಟುಂಬದ ಸದಸ್ಯರು 1987ರಲ್ಲಿ ಬೆಲೆಕಟ್ಟಲಾಗದ ಚಿನ್ನದ ನಾಣ್ಯವನ್ನು ಸ್ವಿಸ್‌ನ ಹರಾಜು ವ್ಯವಸ್ಥೆ ಯೊಂದರ ಮೂಲಕ ಅದನ್ನು ಹರಾಜು ಮಾಡಲು ಪ್ರಯತ್ನ ಮಾಡಿದ್ದರು.
ಕೇಂದ್ರ ಸರಕಾರ ಸಿಬಿಐ ಮೂಲಕ ಐರೋಪ್ಯ ಒಕ್ಕೂಟದ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರಿಂದ ಆ ಪ್ರಯತ್ನ ತಪ್ಪಿಸಲಾಗಿತ್ತು ಎಂದು ಹೈದರಾಬಾದ್‌ನಲ್ಲಿರುವ ಮೌಲಾನಾ ಆಜಾದ್ ನ್ಯಾಶನಲ್ ಉರ್ದು ಯುನಿವರ್ಸಿಟಿಯ ಇತಿಹಾಸ ಪ್ರಾಧ್ಯಾಪಕಿ ಪ್ರೊ|ಸಲ್ಮಾ ಅಹ್ಮದ್ ಫಾರೂಕಿ ಹೇಳಿದ್ದಾರೆ.
ಈ ಬೆಳವಣಿಗೆ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಚಿನ್ನದ ನಾಣ್ಯ 1 ಸಾವಿರ ತೊಲ ಇತ್ತು. ಆ ಕಾಲಕ್ಕೇ ಅದರ ಮೌಲ್ಯ 16 ಮಿಲಿಯನ್ ಡಾಲರ್ ಆಗಿತ್ತು. ಅದನ್ನು ಹರಾಜು ಹಾಕುವ ಮೂಲಕ ನಿಜಾಮರ ಕುಟುಂಬ 9 ಮಿಲಿಯನ್ ಸ್ವಿಸ್ ಫ್ರಾಂಕ್ ಸಾಲ ಪಡೆಯಲು ಮುಂದಾಗಿದ್ದರು ಎಂದು ಹೇಳಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಿದ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳೂ ಕೂಡ ಈಗ ಇಲ್ಲ ಎಂದಿದ್ದಾರೆ. ಇದೊಂದು ಬೆಲೆ ಕಟ್ಟಲಾಗದ ಚಿನ್ನದ ನಾಣ್ಯ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರೈತರಿಗೆ ಬಡ್ಡಿ ದರ ಇಳಿಕೆ ಸಿಹಿ: ಶೇ.1.5ರಷ್ಟು ಬಡ್ಡಿ ವಿನಾಯಿತಿ
ದಿಲ್ಲಿಗೆ ಮತ್ತೆ ಕೋವಿಡ್ ಏರಿಕೆ: ಸೋಂಕಿತರಲ್ಲಿ ಶೇ.60 ಮಂದಿ ಆಸ್ಪತ್ರೆಗೆ ದಾಖಲು
ಶೇ.72 ಸಚಿವರ ವಿರುದ್ಧ ಕ್ರಿಮಿನಲ್ ಕೇಸು; ಬಿಹಾರ ಸಂಪುಟದ ಬಗ್ಗೆ ಎಡಿಆರ್ ಅಧ್ಯಯನ ವರದಿ
“ರೋಹಿಂಗ್ಯಾ ವಲಸಿಗರಿಗೆ ಫ್ಲ್ಯಾಟ್ ಕೊಡಲು ನಿರ್ದೇಶಿಸಿಲ್ಲ’
ಉಚಿತ ಕೊಡುಗೆ: ಪಕ್ಷಗಳಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್
MUST WATCH
ಹೊಸ ಸೇರ್ಪಡೆ
ಮನೆಬಾಗಿಲಿಗೆ ರೈಲ್ವೆ ಪಾರ್ಸೆಲ್ ತರಲಿದ್ದಾನೆ ಅಂಚೆಯಣ್ಣ
ಬೊಮ್ಮಾಯಿಗೆ ಚೌತಿ ಚಂದ್ರನಂತಾದ ಜನೋತ್ಸವ: 28ರ ಜನೋತ್ಸವ ಮತ್ತೆ ಮುಂದಕ್ಕೆ..
ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ
ಎಪಿಕ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ
ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್ ಮೇಲೆ ಪೊಲೀಸ್ ಕಣ್ಣು