
49 ಪೈಸೆಗೆ 10 ಲಕ್ಷ ವಿಮೆ ನೀಡಲಿರುವ ಇಂಡಿಯನ್ ರೈಲ್ವೇ
Team Udayavani, Sep 19, 2019, 8:45 PM IST

ಹೊಸದಿಲ್ಲಿ: ಇಂಡಿಯನ್ ರೈಲ್ವೇ ಕೇವಲ 49 ಪೈಸೆಗೆ 10 ಲಕ್ಷ ರೂ. ಮೌಲ್ಯದ ವಿಮೆಯನ್ನು ನೀಡಲಿದೆ. ಇದು ಪ್ರಯಾಣ ವಿಮೆಯಾಗಿದ್ದು, ಪ್ರಯಾಣಿಕರು ಟಿಕೇಟ್ ಬುಕ್ ಮಾಡುವ ಸಂದರ್ಭ ಇದನ್ನು ಹೊಂದಬಹುದಾಗಿದೆ.
ಇಂಡಿಯನ್ ರೈಲ್ವೇಯಲ್ಲಿ Indian Railways Catering and Tourism Corporation ಮುಖಾಂತರ ಟಿಕೇಟ್ ನೋಂದಣಿ ಮಾಡುವವರಿಗೆ ಮಾತ್ರ ಇದರ ಪ್ರಯೋಜನ ದೊರೆಯುತ್ತದೆ. ಆನ್‌ಲೈನ್‌ನಲ್ಲಿ ಟಿಕೇಟ್ ಬುಕ್ ಮಾಡುವ ಸಂದರ್ಭ ಅಲ್ಲಿ ‘Travel Insurance’ ಎಂಬ ಹೊಸ ಆಯ್ಕೆಯನ್ನು ನೀಡಲಾಗಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಾವು ಟಿಕೇಟ್ ಬುಕ್ ಮಾಡಿದವರ ಹೆಸರಿನಲ್ಲಿ (ಪಿಎನ್‌ಆರ್) ವಿಮೆ ನೋಂದಣಿಯಾತ್ತದೆ.
ಯಾರು ಅರ್ಹರು?
ಈ ಸೇವೆ ಕೇವಲ ಭಾರತೀಯರಿಗೆ ಮಾತ್ರ ಅನ್ವಯವಾಗಲಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್ ಪಡೆಯುವವರಿಗೆ ಮಾತ್ರ ಪ್ರಯೋಜನವಾಗಲಿದೆ. ಇದು ಸಾವು ಸಂಭವಿಸಿದರೆ, ಶಾಶ್ವತ ವೈಕಲ್ಯಕ್ಕೆ ಒಳಗಾದರೆ, ಶಾಶ್ವತ ಭಾಗಶ: ಹಾನಿ ಸಂಭವಿಸಿದರೆ, ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ ಇಂಡಿಯನ್ ರೈಲ್ವೇಯ ಈ ನೂತನ ವಿಮೆ ಬಳಕೆಗೆ ಬರಲಿದೆ. ಪ್ರಯಾಣದ ಸಂದರ್ಭ ಗಾಯಗಳು ಸಂಭವಿಸಿದರೆ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ರೈಲ್ವೇ ಭರಿಸಲಿದೆ.
ಈ ಸೇವೆಯಲ್ಲಿ ಸಾವು ಸಂಭವಿಸಿದರೆ ಮತ್ತು ಶಾಶ್ವತ ವೈಕಲ್ಯ ಘಟಿಸಿದರೆ 10 ಲಕ್ಷ ದೊರೆಯಲಿದೆ. ಶಾಶ್ವತ ಭಾಗಶಃ ಹಾನಿಯುಂಟಾದರೆ 7.5 ಲಕ್ಷ ರೂ., ಗಾಯಗೊಂಡು ಆಸ್ಪತ್ರೆ ಸೇರಿದರೆ 2 ಲಕ್ಷ ರೂ. ಮಂಜೂರಾಗಲಿದೆ. ಇದು ರೈಲು ಸೇವೆಯ ಎಲ್ಲಾ ಕ್ಲಾಸ್‌ಗಳಿಗೂ ಅನ್ವಯವಾಗಲಿದ್ದು, ಏಕ ರೂಪದ ಯೋಜನೆ ಇದಾಗಿದೆ. ಆದರೆ 5 ವರ್ಷಕ್ಕಿಂತ ಕೆಳಗಿನ ಮಗುವಿಗೆ ಇದು ಅನ್ವಯವಾಗುವುದಿಲ್ಲ.
ನೀವು ಮಾಡಬೇಕಾಗಿದಿಷ್ಟು?
ಟಿಕೇಟ್ ಬುಕಿಂಗ್ ಸಂದರ್ಭ ‘Travel insurance’ ಮೆನುವಿನ ಮೇಲೆ ಕ್ಲಿಕ್ ಮಾಡಿ. ಬಳಿಕ ತತ್‌ಕ್ಷಣ ನಿಮ್ಮ ಮೊಬೈಲ್ ಸಂಖ್ಯೆಗೆ ಮತ್ತು ರಿಜಿಸ್ಟರ್ ಇ-ಮೇಲ್‌ಗೆ ವಿಮಾ ಸಂಸ್ಥೆಯವರು ಪಾಲಿಸಿಯನ್ನು ಕಳುಹಿಸುತ್ತಾರೆ. ಆ ಇ- ಮೇಲ್‌ನಲ್ಲಿ ಪ್ರಯಾಣಿಕರು ತಮ್ಮ ಹೆಚ್ಚಿನ ಮಾಹಿತಿಯನ್ನು ತುಂಬಬೇಕಾಗುತ್ತದೆ. ಇಲ್ಲಿ ಭಾರ್ತಿ ಅಕ್ಸಾ ಜನರಲ್ ಇನ್ಸ್ಯುರೆನ್ಸ್, ಬಜಾಜ್ ಆಲಿಯನ್ಸ್ ಜನರಲ್ ಇನ್ಸ್ಯುರೆನ್ಸ್ ಮತ್ತು ಶ್ರೀರಾಮ್ ಜನರಲ್ ಇನ್ಸ್ಯುರೆನ್ಸ್ ಯೋಜನೆಗಳು ಲಭ್ಯ ಇವೆ. ಒಮ್ಮೆ ನಾವು ಇದಕ್ಕೆ ನೋಂದಣಿ ಮಾಡಿದ ಬಳಿಕ ಮತ್ತೆ ರದ್ದುಗೊಳಿಸಲು ಬರುವುದಿಲ್ಲ. ಒಂದು ವೇಳೆ ಪ್ರಯಾಣಿಕ ತನ್ನ ವಿಮೆಗೆ ನೋಂದಾಯಿಸಿ ಹೆಚ್ಚಿನ ಮಾಹಿತಿ ನೀಡಲು ವಿಫಲನಾದರೆ ವಿಮೆಯು ಮಂಜೂರಾಗುವುದಿಲ್ಲ ಎಂದು ಇಂಡಿಯನ್ ರೈಲ್ವೇ ಹೇಳಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Love Story: ಪತ್ನಿಯನ್ನೇ ಪ್ರಿಯಕರನ ಜೊತೆ ಮದುವೆ ಮಾಡಿಸಿಕೊಟ್ಟ ಪತಿ ಮಹಾಶಯ.!

Viral Video; ಗಣೇಶೋತ್ಸವದಲ್ಲಿ ಬುರ್ಖಾ ಧರಿಸಿ ಡ್ಯಾನ್ಸ್ ಮಾಡಿದ ಹಿಂದೂ ಯುವಕ

Video: ಕಾಣೆಯಾದ ನಾಯಿಯ ಪೋಸ್ಟರ್ ತೆಗೆದಿದ್ದಕ್ಕಾಗಿ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಮಹಿಳೆ

Crime News: ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ; ವಿಷ ಸೇವಿಸಿ ಪ್ರಾಣ ಕಳೆದುಕೊಂಡ ದಂಪತಿ

Vande Bharat: ಇಂದು 9 ವಂದೇ ಭಾರತ್ ಶುರು; ದಿಲ್ಲಿಯಿಂದ ವರ್ಚುವಲ್ ಮೂಲಕ ಪ್ರಧಾನಿ ಚಾಲನೆ
MUST WATCH
ಹೊಸ ಸೇರ್ಪಡೆ

INDvsAUS; ಇಂಧೋರ್ ನಲ್ಲಿ ಟಾಸ್ ಗೆದ್ದ ಆಸೀಸ್; ಭಾರತ ತಂಡದಲ್ಲಿ ಪ್ರಸಿದ್ಧ್ ಕೃಷ್ಣಗೆ ಅವಕಾಶ

Love Story: ಪತ್ನಿಯನ್ನೇ ಪ್ರಿಯಕರನ ಜೊತೆ ಮದುವೆ ಮಾಡಿಸಿಕೊಟ್ಟ ಪತಿ ಮಹಾಶಯ.!

Theerthahalli: ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಎಸ್. ವಿಶ್ವನಾಥ್ ನಿಧನ

Shimoga; ವಿದ್ಯುತ್ ಪ್ರವಹಿಸಿ ಕಂಬದಲ್ಲೇ ಕೊನೆಯುಸಿರೆಳೆದ ಲೈನ್ ಮ್ಯಾನ್

Kannada Cinema; ‘ಯಾವೋ ಇವೆಲ್ಲಾ’- ಇದು ಹೊಸಬರ ಕನಸು