ಬದಲಾಗಲಿದೆಯೇ ಖಾಸಗೀ ಜಗತ್ತು?


Team Udayavani, Aug 25, 2017, 7:05 AM IST

supreme-court_660_020913075.jpg

ಖಾಸಗೀತನವು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದೇ, ದಶಕಗಳಿಂದ ಮೂಲಭೂತಹಕ್ಕುಗಳ ವ್ಯಾಪ್ತಿ ಯಲ್ಲಿ ಬರಲು ಹವಣಿಸುತ್ತಿರುವ ಅನೇಕ ಸಂಗತಿಗಳಿಗೆ ಸ್ವಾತಂತ್ರ್ಯ ಸಿಗುವ ಸಾಧ್ಯತೆ ತೆರೆದು ಕೊಂಡಿದೆ. ಈ ತೀರ್ಪು ದೇಶದ ಪ್ರತಿಯೊಬ್ಬ ಪ್ರಜೆಗೂ ಅನ್ವಯವಾಗುವುದರಿಂದ  ಅನೇಕ ಬದಲಾವಣೆಗಳಿಗೆ ನಾವು ಸಾಕ್ಷಿಯಾಗಲಿದ್ದೇವೆ. 

ಸಲಿಂಗ ಲೈಂಗಿಕತೆಗೆ ಗೆಲುವು? 
ಖಾಸಗಿತನದ ಹಕ್ಕಿನಲ್ಲಿ ವ್ಯಕ್ತಿಯೊಬ್ಬನ ಲೈಂಗಿಕತೆಯೂ ಪ್ರಮುಖ ಅಂಶವಾಗಿರುವುದ ರಿಂದ ಈ ತೀರ್ಪು ಸಲಿಂಗಿಗಳ ಪಾಲಿಗೆ ವರ ದಾನವಾಗಿ ಪರಿಣಮಿಸಬಹುದು. ಆರ್ಟಿಕಲ್‌ 377 ಸಲಿಂಗಕಾಮವನ್ನು ನಿಷೇಧಿಸಿದೆ. ಅಂದರೆ ದೇಶದಲ್ಲಿ ಸಲಿಂಗ ಲೈಂಗಿಕ ಚಟುವಟಿಕೆಗಳನ್ನು ಶಿಕ್ಷಾರ್ಹ ಅಪರಾಧ ಎಂದೇ ಪರಿಗಣಿಸಲಾಗುತ್ತದೆ.  ಈಗ ಖುದ್ದು ಸುಪ್ರೀಂ ಕೋರ್ಟ್‌, “ಒಬ್ಬ ವ್ಯಕ್ತಿಯ ಲೈಂಗಿಕ ಒಲವು ನಿಸ್ಸಂಶಯವಾಗಿಯೂ ಖಾಸಗೀ ತನದ ವ್ಯಾಪ್ತಿಯಲ್ಲಿ ಬರುತ್ತದೆ’ ಎಂದಿದ್ದು, ಸಲಿಂಗ ಲೈಂಗಿಕತೆಯನ್ನು ಕಾನೂನು ಬದ್ಧವಾಗಿ ಸುವ ಸಾಧ್ಯತೆ ಹೆಚ್ಚಾಗಲಿದೆ.  ಇನ್ಮುಂದೆ ಒಬ್ಬ ವ್ಯಕ್ತಿಯ ಲೈಂಗಿಕತೆಯನ್ನು ಪ್ರಶ್ನೆ ಮಾಡು ವುದು ಖಾಸಗೀತನದ ಅತಿಕ್ರಮಣವಾಗಬಹುದು.

ಬೀಫ್ ಚರ್ಚೆಗೆ ಟ್ವಿಸ್ಟ್‌? 
ರೈಟ್‌ ಟು ಪ್ರೇವಸಿಯಲ್ಲಿ ಒಬ್ಬ ವ್ಯಕ್ತಿ ಯಾವ ಆಹಾರ ಇಚ್ಛೆಯೂ ಬರುತ್ತದೆ. ಹೀಗಾದಾಗ ಇಂದು ದೇಶದಲ್ಲಿ ವ್ಯಾಪಕ ಚರ್ಚೆಯಲ್ಲಿರುವ “ಗೋಮಾಂಸ ಸೇವನೆ’ಗೆ ಹೊಸ ಆಯಾಮ ದೊರೆಯಲಿದೆಯೇ? ಗೋಮಾಂಸ ನಿಷೇಧಿಸ ಲಾದ ರಾಜ್ಯಗಳಲ್ಲಿ ಖಾಸಗೀತನದ ಪ್ರಶ್ನೆಯೆತ್ತಿ ನಿಷೇಧವನ್ನು ಪ್ರಶ್ನಿಸುವ ಸಾಧ್ಯತೆಯೂ ಇದೆ. 

ಗರ್ಭಪಾತದ ಹಕ್ಕು 
ಭಾರತದಲ್ಲಿ ಗರ್ಭಪಾತಕ್ಕೆ ಅನೇಕ ಬಿಗಿ ನಿಯಮಗಳಿವೆ. ಮಗುವಿನ ಬೆಳವಣಿಗೆಯಾಗಿಲ್ಲ ಅಥವಾ ತಾಯಿಯ ಜೀವಕ್ಕೆ ಅಪಾಯವಿದೆ ಎಂದಾದಾಗ ಮಾತ್ರ ಗರ್ಭಪಾತಕ್ಕೆ ಅನುಮತಿ ಸಿಗುತ್ತದೆ. ಆದರೆ ಇದರಿಂದಾಗಿ ತಮ್ಮದಲ್ಲದ ತಪ್ಪಿನಿಂದ ಗರ್ಭಧರಿಸಿದ ಅತ್ಯಾಚಾರ ಸಂತ್ರಸ್ತರು ತೊಂದರೆ ಪಡುವಂತಾಗಿತ್ತು. ಖಾಸಗೀತನದ ವ್ಯಾಪ್ತಿಯಲ್ಲಿ ಮಗುವನ್ನು ಹೆರಬೇಕೋ ಅಥವಾ ಗರ್ಭಪಾತ ಮಾಡಿಸಿಕೊಳ್ಳ ಬೇಕೋ ಎನ್ನುವ ವಿಚಾರವೂ ಬರುವುದರಿಂದ ಗರ್ಭಪಾತ ಕಾನೂನಲ್ಲಿ ಬದಲಾವಣೆಗಳಾಗಬಹುದು. 

ಇಚ್ಛಾಮರಣ ಓಕೆ? 
ಖಾಸಗೀತನದ ಹಕ್ಕು ಎಂದರೆ ಒಬ್ಬ ವ್ಯಕ್ತಿಗೆ ತಾನು ಜೀವನಪರ್ಯಂತ ಜೀವತ್ಛವವಾಗಿ ಬದುಕುವುದನ್ನು ನಿರಾಕರಿಸುವ ಹಕ್ಕೂ ಬರುತ್ತದಾ ಎನ್ನುವ ಪ್ರಶ್ನೆಯೀಗ ಉದ್ಭವವಾಗಿದೆ? ಹೌದು ಎನ್ನುವುದಾದರೆ ಇಚ್ಛಾಮರಣದ ವಿಚಾರದಲ್ಲಿ ದೇಶದಲ್ಲಿನ ಪ್ರಸಕ್ತ ಕಾನೂನು ಬದಲಾಗಲಿದೆಯೇ?  ಇಚ್ಛಾಮರಣಕ್ಕಾಗಿ ಹೋರಾಟ ನಡೆಸಿರುವವರು ಈಗ ಖಾಸಗೀತನದ ಹಕ್ಕು ವಿಚಾರವನ್ನು ಹಿಡಿದು ತಮ್ಮ ಹೋರಾಟ ವನ್ನು ಪ್ರಬಲಗೊಳಿಸಬಹುದು. 

ಡಿಎನ್‌ಎ ಮುಟ್ಟಂಗಿಲ್ಲ?
ಕೇಂದ್ರ ಸರಕಾರ ದೇಶವಾಸಿಗಳ ಜೈವಿಕ ಗುರುತನ್ನು ಶೇಖರಿಸಿಡಲು ಡಿಎನ್‌ಎ ದತ್ತಾಂಶ್‌ ಬ್ಯಾಂಕ್‌ ಸ್ಥಾಪಿಸುವ ಉದ್ದೇಶದಲ್ಲಿದೆ. ಅಪರಾಧ ಪ್ರಕರಣಗಳಲ್ಲಿ, ಜೈವಿಕ ಸಂಬಂಧಗಳನ್ನು ಪತ್ತೆ ಹಚ್ಚಲು ಡಿಎನ್‌ಎ ಪ್ರಮುಖ ಪಾತ್ರವಹಿಸುತ್ತದೆ ಎನ್ನುವುದು ನಿಜವಾದರೂ ಇಂಥ ಬ್ಯಾಂಕ್‌ನಿಂದ ಖಾಸಗಿತನಕ್ಕೆ ಪೆಟ್ಟು ಬೀಳುವ ಭಯವನ್ನೂ ವ್ಯಕ್ತಪಡಿಸಲಾಗುತ್ತಿದೆ. ಒಬ್ಬ ವ್ಯಕ್ತಿಗೆ ಯಾವ ಅಲರ್ಜಿಯಿದೆ, ಆತ ಯಾವ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಎನ್ನುವ ತೀರಾ ಖಾಸಗಿ ಮಾಹಿತಿಯೂ ಡಿಎನ್‌ಎ ಅಲ್ಲಿ ಇರುತ್ತದಾದ್ದರಿಂದ ಇದನ್ನು ಯಾರಾದರೂ ದುರ್ಬಳಕೆ ಮಾಡಿಕೊಂಡರೆ ಹೇಗೆ ಎನ್ನುವ ಭಯವೂ ಇದ್ದೇ ಇದೆ.  

ಡಿಜಿಟಲ್‌ ಲೋಕಕ್ಕೆ ಪೆಟ್ಟು? 
ನಾವೇನು ಮಾಡುತ್ತೇವೆ, ಎಲ್ಲಿಗೆ ಹೋಗುತ್ತೇವೆ, ನಮಗ್ಯಾವ ಆಹಾರ ಇಷ್ಟ ಎನ್ನುವುದರಿಂದ ಹಿಡಿದು ಅನೇಕ ವೈಯಕ್ತಿಕ ಮಾಹಿತಿಗಳನ್ನು ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿರುತ್ತೇವೆ. ಅಂತರ್ಜಾಲ ಮಾರಾಟ ತಾಣಗಳಿಗೆ ಈ ಮಾಹಿತಿ ಅತ್ಯಗತ್ಯ. ಅವಕ್ಕೆ ನಮ್ಮ ಇಷ್ಟಾನಿಷ್ಟಗಳನ್ನು ಸದ್ದಿಲ್ಲದೇ ಪೂರೈಸುತ್ತಿವೆ ಈ ಸೋಷಿಯಲ್‌ ಮೀಡಿಯಾಗಳು. ಹೀಗಾಗಿಯೇ ಸಜೆಸ್ಟೆಡ್‌ ಪೋಸ್ಟ್‌ಗಳ ಹೆಸರಲ್ಲಿ ನಮಗಿಷ್ಟವಾದ ಪ್ರಾಡಕ್ಟ್ ಗಳೇ ಕಣ್ಣೆದುರಾಗುತ್ತಿರುವುದು! ಖಾಸಗೀ ಹಕ್ಕು ಉಲ್ಲಂಘನೆಯ ಬಿಸಿ ಸೋಷಿಯಲ್‌ ಮೀಡಿಯಾಗಳಿಗೆ ತಟ್ಟಲಾರಂಭಿಸಬಹುದು.

ಮಾಧ್ಯಮಗಳಿಗೂ ಪೆಟ್ಟು? 
ಮಾಧ್ಯಮ ಸ್ವಾತಂತ್ರ್ಯದ ಹೆಸರಲ್ಲಿ ರಾಜಕಾರಣಿಗಳ, ತಾರೆಗಳ ತೀರಾ ಖಾಸಗಿ ವಿಚಾರಗಳನ್ನೂ ರಸವತ್ತಾಗಿ ತೋರಿಸುತ್ತಾ ಟಿಆರ್‌ಪಿ ಗಿಟ್ಟಿಸಿಕೊಳ್ಳುವ ಮಾಧ್ಯಮಗಳಿಗೂ ರೈಟ್‌ ಟು ಪ್ರೈವೆಸಿಯಿಂದ ಪೆಟ್ಟು ಬೀಳಲಿದೆಯಾ? ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಆದರೆ ಈ ಎಲ್ಲಾ ವಿಚಾರಗಳಲ್ಲೂ ಸುಪ್ರೀಂ ಕೋರ್ಟಿನ ತೀರ್ಪು ಹೇಗೆ ಅನ್ವಯವಾಗಲಿದೆ ಎನ್ನುವ ಸ್ಪಷ್ಟತೆ  ಸಿಕ್ಕಿಲ್ಲ. 

ಮುಖ್ಯ ನ್ಯಾಯಮೂರ್ತಿ  ಜೆ.ಎಸ್‌. ಖೆಹರ್‌ ನೇತೃತ್ವದ ಸಾಂವಿಧಾನಿಕ ಪೀಠ ಖಾಸಗಿ ಹಕ್ಕಿನ ಬಗ್ಗೆ ಹೇಳಿದೆ. ಹಾಗಾದರೆ, ಖಾಸಗಿ ಹಕ್ಕು ಮತ್ತದರ  ಸುತ್ತ ಒಂದು ನೋಟ…

ಸುಪ್ರೀಂಕೋರ್ಟ್‌ ತೀರ್ಪು ಏನು ಹೇಳಿದೆ?
ಈ ಹಿಂದೆಯೇ ಖಾಸಗಿ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಗುರುತಿಸಲಾಗಿದ್ದರೂ ಇದಕ್ಕೆ ಅದರ ಸ್ಥಾನಮಾನ ಕೊಟ್ಟಿರಲಿಲ್ಲ. ಇದೀಗ ಭಾರತೀಯ ಸಂವಿಧಾನದ ಭಾಗವಾಗಿ ಖಾಸಗಿ ಹಕ್ಕಿಗೆ ಮೂಲಭೂತ ಹಕ್ಕಿನ ಶಕ್ತಿ ಕೊಡಲಾಗಿದೆ. ಹೀಗಾಗಿ ತಮ್ಮ ಪರಿಪೂರ್ಣ ಹಕ್ಕಿಗೆ ಧಕ್ಕೆಯಾದಲ್ಲಿ ಯಾವುದೇ ವ್ಯಕ್ತಿಗಳು, ಸರಕಾರದ ಯಾವುದೇ ಕ್ರಮಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ.

ಈಗ ಯಾವ ಕಾರಣಕ್ಕಾಗಿ ತೀರ್ಮಾನ?
ಆಧಾರ್‌ನ ಮಾಹಿತಿ ಸಂಗ್ರಹದ ಬಗ್ಗೆ ಚರ್ಚೆ­ಯಾಗುತ್ತಿರುವ ಸನ್ನಿವೇಶದಲ್ಲೇ ಕೇಂದ್ರ ಸರಕಾರ ಜನರ ಬಯೋಮೆಟ್ರಿಕ್‌ ಮಾಹಿತಿ ಸಂಗ್ರಹ ಮತ್ತು ಇತರ ದಾಖಲೆಗಳನ್ನು ಸಂಗ್ರಹಿಸಿಕೊಂಡು ಇತರ­ರೊಂದಿಗೆ ಹಂಚಿಕೊಳ್ಳುತ್ತಿರುವುದನ್ನು ಪ್ರಶ್ನಿಸ­ಲಾಗಿತ್ತು.  ಕೋರ್ಟ್‌ನಲ್ಲಿ ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಪರಿಭಾವಿಸುವುದೂ ಅಸಾಧ್ಯ, ಇದರಲ್ಲಿ ತನ್ನದೇ ಪರಮಾಧಿಕಾರ ಎಂದಿತ್ತು.

ಕೇಂದ್ರ ಸರಕಾರದ ನಿಲುವೇನು?
ಕೇಂದ್ರ ಸರಕಾರದ ಪ್ರಕಾರ, ಜನರಿಗೆ ಖಾಸಗಿ ಹಕ್ಕು ಎಂಬುದೇ ಇಲ್ಲ. ಹೀಗಾಗಿ ಇದನ್ನು ಮೂಲಭೂತ ಹಕ್ಕನ್ನಾಗಿ ಮಾಡಲಾಗದು ಎಂದಿತ್ತು. ದೇಶದಲ್ಲಿರುವ ಕೋಟ್ಯಂತರ ಕಡುಬಡವರಿಗೆ ಈ ಖಾಸಗಿ ಹಕ್ಕಿನ ಕಾರಣದಿಂದಾಗಿ ತಮಗೆ ದಕ್ಕಬಹುದಾದ ಸೌಲಭ್ಯಗಳನ್ನು ಕಳೆದುಕೊಳ್ಳುವ ಸ್ಥಿತಿ ಉಂಟಾಗಬಹುದು. ಈಗ ಆಧಾರ್‌ ಬಳಸಿ ಸೌಲಭ್ಯ ನೀಡಲಾಗುತ್ತಿದೆ. ಆಗ ಕಷ್ಟವಾಗಬಹುದು.

ತೀರ್ಪಿನಿಂದ ಜನರ ಮೇಲೇನು ಪರಿಣಾಮ?
ಈಗಾಗಲೇ ಸರಕಾರಗಳ ಸೌಲಭ್ಯಗಳು, ಆದಾಯ ತೆರಿಗೆ ಸಲ್ಲಿಕೆ, ಬ್ಯಾಂಕ್‌ ಅಕೌಂಟ್‌, ಶಾಲಾ ದಾಖಲಾತಿ, ಮೊಬೈಲ್‌ ಸಿಮ್‌ ಖರೀದಿ ಸಹಿತ ಹಲವಾರು ವಿಚಾರಗಳಿಗೆ ಆಧಾರ್‌ ಕಡ್ಡಾಯ ಮಾಡಲಾಗಿದೆ. ಆಧಾರ್‌ ಕಾರ್ಡ್‌ಗಾಗಿ ಬಯೋಮೆಟ್ರಿಕ್‌, ಕಣ್ಣಿನ ಐರಿಸ್‌ ದಾಖಲೆಗಳನ್ನೂ ಸಂಗ್ರಹಿಸಲಾಗಿದ್ದು, ಇವು ಸರಕಾರದ ಹೊರತಾಗಿ 3ನೇ ವ್ಯಕ್ತಿಗಳಿಗೆ ಸೋರಿಕೆ ಅಥವಾ ಹಂಚಿಕೆಯಾದಲ್ಲಿ ಅಪರಾಧ ಕೃತ್ಯಗಳಿಗೆ ಬಳಕೆ ಮಾಡಿಕೊಳ್ಳುವ ಅಪಾಯವಿತ್ತು. ಸಂದೇಶಗಳ ಹಂಚಿಕೆ, ಫೋಟೋಗಳ ಸೋರಿಕೆ, ಮೊಬೈಲ್‌ನಿಂದ ಮೊಬೈಲ್‌ಗೆ ಹಂಚಿಕೆ ಮಾಡುವುದು ಕಾನೂನಿನ ದೃಷ್ಟಿಯಲ್ಲಿ ತಪ್ಪಾಗುತ್ತದೆ. 

ಯಾವ ಸಂಗತಿಗಳಿಗೆ ಈ ತೀರ್ಪು ಅನ್ವಯ?
ಆಧಾರ್‌ ಜತೆಯಲ್ಲಿ ಐಪಿಸಿ ಸೆಕ್ಷನ್‌ 377ರ ಅಡಿಯಲ್ಲಿ ಸಲಿಂಗ ವಿವಾಹ ಅಪ ರಾಧವೆಂಬುದು ಬಿದ್ದು ಹೋಗಬಹುದು. ಖಾಸಗಿತನ ಹಕ್ಕಾದ ಮೇಲೆ ಸಂಬಂಧ ಗಳೂ ಖಾಸಗಿಯಾಗುತ್ತವೆ. ಇದರ ಮೇಲೆ ಸರಕಾರಗಳು ಅಂಕುಶ ಹಾಕಲು ಸಾಧ್ಯವಾಗದು. ಆರ್ಥಿಕ ಸಂಸ್ಥೆಗಳು ತಮ್ಮ ಮಾಹಿತಿಯ ಹಂಚಿಕೆ ಮಾಡುವುದು, ಟೆಲಿಕಾಲರ್‌ಗಳು ಜನರ ಮಾಹಿತಿ ಪಡೆದು ತೊಂದರೆ ಕೊಡುವುದು ತಪ್ಪುತ್ತದೆ.

ನಿವೃತ್ತಿಗೆ ಮುನ್ನ ಎರಡು ಪ್ರಮುಖ ತೀರ್ಪುಗಳು
ನಿವೃತ್ತಿಗೆ ಕೇವಲ 3 ದಿನಗಳಿರುವಾಗಲೇ, ವ್ಯಾಪಕ ಬದಲಾವಣೆಗೆ ಕಾರಣವಾ ಗುವ, ಭಾರೀ ಚರ್ಚೆಗೆ ಎಡೆಮಾಡಿದ ಎರಡು ತೀರ್ಪುಗಳನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜಗದೀಶ್‌ ಸಿಂಗ್‌ ಖೆಹರ್‌ ನೀಡಿದ್ದಾರೆ. ಆ.27ರಂದು ಅವರು ನಿವೃತ್ತಿಯಾಗಲಿದ್ದು, ಬುಧವಾರ ತ್ರಿವಳಿ ತಲಾಖ್‌ ಅಸಾಂವಿಧಾನಿಕ ಎಂದು ತೀರ್ಪು ನೀಡಿದ್ದರು, ಗುರುವಾರದ ತೀರ್ಪಿನಲ್ಲಿ ಖಾಸಗಿತನ ಮೂಲಭೂತ ಹಕ್ಕು ಎಂದು ಐತಿಹಾಸಿಕ ತೀರ್ಪನ್ನು ನೀಡಿದ್ದಾರೆ. 

ತಂದೆಯ ತೀರ್ಪಿಗೆ ವಿರುದ್ಧ !
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾ| ವೈ.ವಿ.ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ ನೀಡಿದ್ದ ಖಾಸಗಿ ಹಕ್ಕಿನ ಕುರಿತಾಗಿ ಈ ಹಿಂದೆ ನೀಡಿದ್ದ ತೀರ್ಪನ್ನು, ಅವರ ಪುತ್ರ, ನ್ಯಾ.ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ ಸಂಪೂರ್ಣವಾಗಿ ತಿರಸ್ಕರಿಸಿ, ವಿರುದ್ಧ ತೀರ್ಪನ್ನು ನೀಡಿದೆ. 

ಇಲ್ಲಿ ಯಾವುದೂ ಅಸ್ಪಷ್ಟ ಅಥವಾ ನಿರಾಕಾರವಾದುದಲ್ಲ. ಖಾಸಗಿತನ ಒಂದು ಮೂಲಭೂತ ಹಕ್ಕು ಎಂದು ಅಧಿಕೃತ ಮುದ್ರೆ ಒತ್ತಿರುವ ಸುಪ್ರೀಂ ಕೋರ್ಟ್‌ನ ತೀರ್ಪು ಅತ್ಯಂತ ಸ್ಪಷ್ಟವಾಗಿದೆ. ಸದೃಢ ಭಾರತ ನಿರ್ಮಾಣಕ್ಕೆ ಇಂಥ ಆದೇಶಗಳು ಪೂರಕ. ನ್ಯಾಯಾಧೀಶರಿಗೆ ಎಲ್ಲ ಭಾರತೀಯರು ಧನ್ಯವಾದ ಹೇಳಲೇಬೇಕು.
 – ಕಮಲ್‌ ಹಾಸನ್‌, ಬಹುಭಾಷಾ ನಟ

ಖಾಸಗಿ ಅಂದ್ರೆ ಏನು? ಹೇಗೆ?
ಸು.ಕೋರ್ಟ್‌ ಹೇಳಿದ್ದು
ಖಾಸಗಿತನವನ್ನು ಮೂರು ವಲಯಗಳಲ್ಲಿ ಗುರುತಿಸಬಹುದು
1. ಮದುವೆ, ಲೈಂಗಿಕತೆ, ಸಂಬಂಧಗಳು
2. ಕ್ರೆಡಿಟ್‌ ಕಾರ್ಡ್‌ ಖಾಸಗಿ ಮಾಹಿತಿ, ಸಾಮಾಜಿಕ ಜಾಲತಾಣ-ಐಟಿ ಮಾಹಿತಿ
3. ವ್ಯಕ್ತಿಗಳು ದೇಹದಿಂದ ಮನಸ್ಸಿನವರೆಗೆ ಖಾಸಗಿತನ ಕಾಯ್ದುಕೊಳ್ಳಬಹುದು.

ಖಾಸಗಿ ಹಕ್ಕಿನ ಬಗ್ಗೆ 
ನ್ಯಾ| ಎ.ಪಿ. ಶಾ ಸಮಿತಿಯ 9 ತತ್ತ‌Ìಗಳು

1. ಮೊದಲೇ ಹೇಳುವ ತತ್ತÌ
2. ಆಯ್ಕೆ ಮತ್ತು ಒಪ್ಪಿಗೆಯ ತತ್ತÌ
3. ಸಂಗ್ರಹ ಮಿತಿ ತತ್ತÌ
4. ಉದ್ದೇಶ ಮಿತಿ ತತ್ತÌ
5. ಪ್ರವೇಶ ಮತ್ತು ತಿದ್ದುಪಡಿ ತತ್ತÌ
6. ಮಾಹಿತಿ ಬಹಿರಂಗ ತತ್ತÌ
7. ಸುರಕ್ಷತೆಯ ತತ್ತÌ
8. ಮುಕ್ತತೆಯ ತತ್ತÌ
9. ಹೊಣೆಗಾರಿಕೆಯ ತತ್ತÌ

ಕೇಂದ್ರ ಸರಕಾರದ ವಾದವೇನಾಗಿತ್ತು?
  ಖಾಸಗಿತನವೆಂಬುದು ಅಸ್ಪಷ್ಟ ಕಲ್ಪನೆ. ಹೀಗಾಗಿಯೇ ಇದನ್ನು ಮೂಲಭೂತ ಹಕ್ಕನ್ನಾಗಿ ಮಾಡಲು ಸಾಧ್ಯವಿಲ್ಲ.
– ಸಂವಿಧಾನ ರಚನೆ ಮಾಡುವಾಗ ಖಾಸಗಿ ಹಕ್ಕನ್ನೂ ಮೂಲಭೂತ ಪರಿಧಿಯೊಳಗೆ ಸೇರಿಸುವ ಚರ್ಚೆಯಾಗಿದ್ದರೂ ಕಡೆಗೆ ಕೈಬಿಟ್ಟರು.
– ಖಾಸಗಿ ಹಕ್ಕಿಗಿಂತ ಜೀವನದ ಹಕ್ಕು ಮತ್ತು ಆಹಾರದ ಹಕ್ಕು ಹೆಚ್ಚು ಪ್ರಮುಖವಾದದ್ದು
– ಅಂತಾರಾಷ್ಟ್ರೀಯ ಮಟ್ಟದಲ್ಲೂ ಖಾಸಗಿ ಹಕ್ಕನ್ನು ಸರಿಯಾಗಿ ಗುರುತಿಸಲಾಗಿಲ್ಲ. 

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.