ಪಶ್ಚಿಮ ಬಂಗಾಳ : ಮಮತಾ ಮೇಲೆ ನಡೆದಿದ್ದು ದಾಳಿಯೇ.? ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು..?


Team Udayavani, Mar 11, 2021, 11:02 AM IST

Is It attack Or Accident On West Bangal CM Mamatha Banarjee

ಕೋಲ್ಕತ್ತಾ :  ಪಶ್ಚಿಮ ಬಂಗಾಳದ ಚುನಾವಣೆ ದಿನಕ್ಕೊಂದು ಹೊಸ ತಿರುವು ಕಂಡುಕೊಳ್ಳುತ್ತಿದೆ. ನಂದಿಗ್ರಾಮ್ ನ ಬಿರುಲಿಯಾ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ನಡೆದ ಘಟನೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದಾರೆ.

ಬ್ಯಾನರ್ಜಿ ಅವರ ಎಡಗಾಲಿಗೆ ಗಾಯವಾಗಿದ್ದು ಅವರನ್ನು ಕೋಲ್ಕತ್ತಾದ ಎಸ್‌ ಎಸ್‌ ಕೆ ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಮತಾ ಬ್ಯಾನರ್ಜಿ ಇದನ್ನು ದಾಳಿ ಎಂದು ಬಣ್ಣಿಸಿದ್ದು, ಈ ಘಟನೆ ಒಂದು ಪಿತೂರಿ ಎಂದು ಆರೋಪಿಸಿದ್ದರು, ಆದರೇ, ಈಗ ಈ ಘಟನೆ ಹೊಸ ತಿರುವನ್ನು ಪಡೆದುಕೊಂಡಿದೆ.

ಓದಿ : ತಂದೆಯೇ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿ ಸಿಲುಕಿದ ಎಂಟರ ಹರೆಯದ ಬಾಲಕ‌ ದಾರುಣ ಬಲಿ!

ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದು, ಮಮತಾ ಬ್ಯಾನರ್ಜಿ ಅವರು ಹೇಳಿದ ಹಾಗೆ ಘಟನೆ ಸಂಭವಿಸಿಲ್ಲ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎ ಎನ್ ಐ ಗೆ ಹೇಳಿಕೊಂಡಿರುವುದು, ಈಗ ಪಶ್ಚಿಮ ಬಂಗಾಳದ ವಿಧಾನ ಸಭೆ ಚುನಾವಣೆಯಲ್ಲಿ ರಾಜಕೀಯ ಹೈ ಡ್ರಾಮ ನಡೆಯುತ್ತಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದಕ್ಕೆ ಕಾರಣವಾಗಿದೆ.

ಮಮತಾ ಬ್ಯಾನರ್ಜಿ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದ್ದ ಸ್ಥಳದಲ್ಲಿದ್ದ ವಿದ್ಯಾರ್ಥಿ ಸುಮನ್ ಮೈಥಿ, ‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಲ್ಲಿಗೆ ಬಂದಾಗ ಅವರನ್ನು ನೋಡಲು ಅಪಾರ ಜನಸಮೂಹವು ಸೇರಿತ್ತು, ಅವರನ್ನು ನೋಡಲು ಜನರು ಸುತ್ತುವರೆದು ನಿಂತರು.  ಈ ಸಮಯದಲ್ಲಿ ಯಾರೂ ಅವರನ್ನು ತಳ್ಳಲಿಲ್ಲ. ಅವರ ಕಾರು ಕೂಡ ನಿಧಾನವಾಗಿ ಚಲಿಸುತ್ತಿತ್ತು ಎಂದು ಸುಮನ್ ತಿಳಿಸಿದ್ದಾರೆ.

ಮತ್ತೊಬ್ಬ ಪ್ರತ್ಯಕ್ಷದರ್ಶಿ ಚಿತ್ತರಂಜನ್ ದಾಸ್, “ನಾನು ಅಲ್ಲಿದ್ದೆ, ಅವರು (ಮಮತಾ ಬ್ಯಾನರ್ಜಿ) ತನ್ನ ಕಾರಿನಲ್ಲಿ ಕುಳಿತಿದ್ದರು, ಆದರೆ ಬಾಗಿಲು ತೆರೆದಿತ್ತು” ಎಂದು ಹೇಳಿದರು. ಯಾರೂ ತಳ್ಳಲಿಲ್ಲ. ಆ ಸಮಯದಲ್ಲಿ ಬಾಗಿಲಿನ ಬಳಿ ಯಾರೂ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಓದಿ : ಟ್ರಕ್ – ಸ್ಕಾರ್ಪಿಯೋ ವಾಹನದ ಮಧ್ಯೆ ಭೀಕರ ಅಪಘಾತ: ಎಂಟು ಮಂದಿ ದುರ್ಮರಣ, ಮೂವರಿಗೆ ಗಾಯ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಕಾರಿನ ಬಳಿ ನಿಂತಾಗ 4 ರಿಂದ 5 ಜನರು ಅವರನ್ನು ತಳ್ಳಿದರು ಮತ್ತು ಅವರ ಕಾಲಿಗೆ ಗಾಯವಾಯಿತು ಎಂದು ಹೇಳಿದರು. ಘಟನೆ ನಡೆದ ಸಮಯದಲ್ಲಿ ಸ್ಥಳೀಯ ಪೊಲೀಸರು ಇರಲಿಲ್ಲ ಎಂದು ಮಮತಾ ಆರೋಪಿಸಿದ್ದರು. ಇದು ಅವರ ವಿರುದ್ಧದ ಪಿತೂರಿ ಮತ್ತು ಉದ್ದೇಶಪೂರ್ವಕವಾಗಿ ಇದನ್ನು ಮಾಡಲಾಗಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದರು.

ಸದ್ಯ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಎಸ್‌ ಎಸ್‌ ಕೆ ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯಾನರ್ಜಿಗೆ ಚಿಕಿತ್ಸೆ ನೀಡಲು ಐವರು ಹಿರಿಯ ವೈದ್ಯರ ತಂಡವನ್ನು ರಚಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಓದಿ : ಶಿವರಾತ್ರಿ ಮಹಿಮೆ! ಬೇಟೆಗಾಗಿ ಜಾಗರಣೆ ಮಾಡಿದ ಬೇಡನಿಗೆ ಒಲಿದ ಶಿವ

ಟಾಪ್ ನ್ಯೂಸ್

1-sad

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

1-asdas

Art of Living ಸಾಂಸ್ಕೃತಿಕ ಉತ್ಸವಕ್ಕೆ ಭಾವೈಕ್ಯದ ಸಮಾರೋಪ

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

court

Bhagavad Gita ಮೇಲೆ ಯಾರದ್ದೂ ಹಕ್ಕು ಸ್ವಾಮ್ಯ ಇಲ್ಲ: ದಿಲ್ಲಿ ಹೈಕೋರ್ಟ್‌

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sad

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

army

China border : ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ ಕಣ್ಗಾವಲಿಗೆ ತಂಡ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

mob

Whatsapp; 74 ಲಕ್ಷ ಖಾತೆಗಳಿಗೆ ನಿರ್ಬಂಧ

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

1-sad

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

army

China border : ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ ಕಣ್ಗಾವಲಿಗೆ ತಂಡ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.