ಡೇಟಿಂಗ್ ನಲ್ಲಿ ಮಲೈಕಾ – ಅರ್ಜುನ್: ಮೊದಲ ಮಗುವಿನ ನಿರೀಕ್ಷೆಯಲ್ಲಿ? ಬಿಟೌನ್ ನಲ್ಲಿ ಹಾಟ್ ಟಾಪಿಕ್
ಇದೇ ವರ್ಷದ ಅಕ್ಟೋಬರ್ ನಲ್ಲಿ ಮಲೈಕಾ -ಅರ್ಜುನ್ ಲಂಡನ್ ಗೆ ಭೇಟಿ ನೀಡಿದ್ದರು.
Team Udayavani, Nov 30, 2022, 4:34 PM IST
ಮುಂಬಯಿ: ಸಲೆಬ್ರಿಟಿಗಳ ಕುರಿತಾಗಿ ದಿನನಿತ್ಯ ಹತ್ತಾರು ಗಾಸಿಪ್ ಗಳು ಹರಿದಾಡುತ್ತಿರುತ್ತದೆ. ಸದ್ಯ ಬಾಲಿವುಡ್ ನ ಬೋಲ್ಡ್ ನಟಿ ಮಲೈಕಾ ಆರೋರಾ ಕುರಿತಾದ ಗಾಸಿಪ್ ಸುದ್ದಿಯೊಂದು ಬಿಟೌನ್ ನಲ್ಲಿ ಸದ್ದು ಮಾಡುತ್ತಿದೆ.
ನಟ ಅರ್ಬಜ್ ಖಾನ್ ಅವರಿಂದ ದೂರವಾದ ಬಳಿಕ ಮಲೈಕಾ ಆರೋರಾ ನಟ ಅರ್ಜುನ್ ಕಪೂರ್ ನೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಇವರಿಬ್ಬರ ಡೇಟಿಂಗ್ ಆರಂಭದಲ್ಲಿ ದೊಡ್ಡ ಸುದ್ದಿಯಾಗಿತ್ತು. ತಮಗಿಂತ ಕಿರಿಯವನನ್ನು ಡೇಟ್ ಮಾಡುತ್ತಿರುವ ಮಲೈಕಾ ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು. ಆದರೆ ಎಲ್ಲವನ್ನೂ ಮೀರಿ ಅರ್ಜುನ್ ಹಾಗೂ ಮಲೈಕಾ ಎಷ್ಟೋ ಬಾರಿ ಸಾರ್ವಜನಿಕವಾಗಿಯೇ ಕಾಣಿಸಿಕೊಂಡು, ಪ್ರವಾಸಿ ತಾಣಗಳಲ್ಲಿ ತಿರುಗಾಡಿದ್ದಾರೆ.
ಇದೇ ವರ್ಷದ ಅಕ್ಟೋಬರ್ ನಲ್ಲಿ ಮಲೈಕಾ -ಅರ್ಜುನ್ ಲಂಡನ್ ಗೆ ಭೇಟಿ ನೀಡಿದ್ದರು. ಅಲ್ಲಿ ಮಲೈಕಾ ತಾನು ತಾಯಿಯಾಗಲಿದ್ದೇನೆ ಎನ್ನುವುದನ್ನು ಕುಟುಂಬದ ಕೆಲ ಆಪ್ತರಿಗೆ ಹೇಳಿದ್ದಾರೆ ಎಂದು ಪಿಂಕ್ ವಿಲ್ಲಾ ವರದಿ ತಿಳಿಸಿದೆ.
ಅರ್ಜುನ್ – ಮಲೈಕಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ವೈರಲ್ ಆಗಿದೆ. ಆದರೆ ಈ ಸುದ್ದಿಯನ್ನು ಕುಟುಂಬದ ವ್ಯಕ್ತಿಯೊಬ್ಬರು ಇಟಿ ಟೈಮ್ಸ್ ಗೆ ಮಲೈಕಾ ಆರೋರಾ ಅವರು ಗರ್ಭಿಣಿಯಲ್ಲ. ಈ ಸುದ್ದಿ ವದಂತಿಯಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ಮಲೈಕಾ ಆರೋರಾ ಓಟಿಟಿಗೆ ಮೊದಲ ಬಾರಿ ಪ್ರವೇಶ ಮಾಡಲಿದ್ದು, ʼಮೂವಿಂಗ್ ವಿಥ್ ಮಲೈಕಾʼ ಎನ್ನುವ ಶೋವನ್ನು ಆರಂಭಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani
ಹೊಸ ಸೇರ್ಪಡೆ
ಮಣಿಪಾಲ: ಅಪಾರ್ಟ್ ಮೆಂಟ್ ನಲ್ಲಿ ಲಕ್ಷಾಂತರ ರೂ. ಸೊತ್ತುಗಳ ಕಳವು
ಷೇರುಗಳ ಮೌಲ್ಯ ಕುಸಿತ; ಎಸ್ ಬಿಐ, ಪಿಎನ್ ಬಿ ಬ್ಯಾಂಕ್ ಗಳಿಂದ ಅದಾನಿ ಪಡೆದ ಸಾಲದ ಮೊತ್ತ ಎಷ್ಟು ಗೊತ್ತಾ?
ಮಾರಿಗುಡ್ಡದಲ್ಲಿ ಗಡ್ಡಧಾರಿಗಳ ಅಬ್ಬರ
ಮಂಗಳೂರು : ಜ್ಯುವೆಲ್ಲರಿ ಶಾಪ್ ನಲ್ಲಿ ಸಿಬಂದಿಗೆ ಚೂರಿ ಇರಿತ
ಬಸವ ಕಲ್ಯಾಣದಲ್ಲಿ ಸಿದ್ದರಾಮಯ್ಯ,ಕೋಲಾರದಲ್ಲಿ ಡಿಕೆಶಿ: ಪ್ರಜಾಧ್ವನಿ ಯಾತ್ರೆಗೆ ಚಾಲನೆ