
ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್ ನಾಯ್ಕ ಗಡಿಪಾರು?
Team Udayavani, Mar 22, 2023, 11:30 AM IST

ನವದೆಹಲಿ: ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್ ನಾಯ್ಕ ಗಡಿಪಾರು ಆಗುವ ಸಾಧ್ಯತೆ ದಟ್ಟವಾಗಿದೆ. ಆತ ಮಾ.23ರಿಂದ 2 ದಿನಗಳ ಕಾಲ ಒಮಾನ್‌ಗೆ ಭೇಟಿ ನೀಡಲಿದ್ದಾನೆ.
ಅದಕ್ಕೆ ಪೂರಕವಾಗಿ ಆತನನ್ನು ಬಂಧಿಸಲು ಕೇಂದ್ರ ಗುಪ್ತಚರ ಸಂಸ್ಥೆಗಳು ಸಿದ್ಧತೆ ನಡೆಸಿವೆ. ಜತೆಗೆ ಒಮಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇವೆ. ಮಾ.23ರಂದು ಒಮಾನ್ ಅವ್ಕಾಫ್ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವಾಲಯ ಆಯೋಜಿಸಿರುವ “ಕುರಾನ್ ಒಂದು ಜಾಗತಿಕ ಅವಶ್ಯಕತೆ’ ಹಾಗೂ ಮಾ.25ರಂದು ಸುಲ್ತಾನ್ ಖಬೂಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ “ಪ್ರವಾದಿ ಮೊಹಮದ್: ಮಾನವಕುಲಕ್ಕೆ ಒಂದು ಕರುಣೆ’ ಎಂಬ ವಿಷಯಗಳ ಬಗ್ಗೆ ಭಾಷಣ ಮಾಡಲಿದ್ದಾನೆ.
ಟಾಪ್ ನ್ಯೂಸ್
