

Team Udayavani, Oct 12, 2018, 11:45 AM IST
ಹೈದರಾಬಾದ್ : ತೆಲುಗು ದೇಶ ಪಕ್ಷದ ಸಂಸದ ಸಿ ಎಂ ರಮೇಶ್ ಅವರ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿನ ನಿವಾಸಗಳ ಮೇಲೆ ಇಂದು ಶುಕ್ರವಾರ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಹೈದರಾಬಾದ್ ಮತ್ತು ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಪೋಟ್ಲದುರ್ತಿ ಯಲ್ಲಿನ ಸಂಸದ ರಮೇಶ್ ಅವರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಇದೇ ರೀತಿ ಐಟಿ ಅಧಿಕಾರಿಗಳು ರಮಲೇಶ್ ಅವರ ರಿತ್ವಿಕ್ ಪ್ರೋಜೆಕ್ಟ್ ಕಂಪೆನಿಯ ಕಾರ್ಯಾಲಯದ ಮೇಲೂ ದಾಳಿ ನಡೆಸಿದರು.
ಇಂದು ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಐಟಿ ದಾಳಿ ಈಗಲೂ ಮುಂದುವರಿದಿದೆ; ಸುಮಾರು 30 ಐಟಿ ಅಧಿಕಾರಿಗಳು ಈ ದಾಳಿಗಳಲ್ಲಿ ಭಾಗಿಯಾಗಿದ್ದಾರೆ.
ರಾಜ್ಯಸಭೆಯ ತೆಲುಗು ದೇಶಂ ಸದಸ್ಯರಾಗಿರುವ ರಮೇಶ್ ಅವರು ಈ ಐಟಿ ದಾಳಿ ವೇಳೆ ದಿಲ್ಲಿಯಲ್ಲಿ ಇದ್ದಾರೆ.
ಕಡಪ ಜಿಲ್ಲೆಯಲ್ಲಿನ ರಮೇಶ್ ಅವರ ನಿವಾಸದ ಮೇಲೆ ದಾಳಿ ನಡೆಸುವ ಮುನ್ನ ಐಟಿ ಅಧಿಕಾರಿಗಳು ಅಲ್ಲಿದ್ದ ರಮೇಶ್ ಅವರ ಸಹೋದರ ಸಿ ಎಂ ಸುರೇಶ್ ಅವರನ್ನು ಹೊರಗೆ ಹೋಗುವಂತೆ ಸೂಚಿಸಿದರು. ಬಳಿಕವೇ ಅವರು ಶೋಧ ಕಾರ್ಯಾಚರಣೆ ಕೈಗೊಂಡರು.
ರಮೇಶ್ ಅವರು ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರ ಬಂಟನಾಗಿದ್ದಾರೆ. ಈ ಐಟಿ ದಾಳಿಗಳು ರಾಜಕೀಯ ಪ್ರೇರಿತವಾಗಿವೆ ಎಂದವರು ಟೀಕಿಸಿದ್ದಾರೆ. ಈ ದಾಳಿಗಳ ಹೊರತಾಗಿಯೂ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ತಮ್ಮ ಹೋರಾಟವನ್ನು ತಾನು ಮುಂದುವರಿಸುವುದಾಗಿಯೂ ಹೇಳಿದ್ದಾರೆ.
Ad
ಪತನಗೊಂಡ ವಿಮಾನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.. ಏರ್ ಇಂಡಿಯಾ ಸಿಇಒ ಮೊದಲ ಪ್ರತಿಕ್ರಿಯೆ
San Rechal:ಆರ್ಥಿಕ ಸಂಕಷ್ಟ-ಜನಪ್ರಿಯ ರೂಪದರ್ಶಿ ಸ್ಯಾನ್ ತಂದೆ ನಿವಾಸದಲ್ಲಿ ನೇ*ಣಿಗೆ ಶರಣು
Kidnapped: ಮಾಲಿಯಲ್ಲಿ ಶಸ್ತ್ರಸಜ್ಜಿತರಿಂದ ಮೂವರು ಭಾರತೀಯರ ಅಪಹರಣ… ಇನ್ನೂ ಸಿಗದ ಸುಳಿವು
Delhi: 6ದಿನಗಳಿಂದ ನಾಪತ್ತೆಯಾಗಿದ್ದ ದೆಹಲಿ ವಿದ್ಯಾರ್ಥಿನಿಯ ಮೃತದೇಹ ಯಮುನಾ ನದಿಯಲ್ಲಿ ಪತ್ತೆ
ಅಂದಿನಂತೆ ಇಂದಿಗೂ ಭಾರತವೇ ಸಾರೇ ಜಹಾಂ ಸೆ ಅಚ್ಛಾ: ಶುಕ್ಲಾ
You seem to have an Ad Blocker on.
To continue reading, please turn it off or whitelist Udayavani.