ಜಪಾನ್ ಕಂಪೆನಿಯಿಂದ ತೇಲುವ ಮನೆ ನಿರ್ಮಾಣ!
Team Udayavani, Jun 30, 2022, 7:00 AM IST
ಹೊಸದಿಲ್ಲಿ: ಒಂದು ದೇಶ ಅಭಿವೃದ್ಧಿ ಹೊಂದಿರಲಿ, ಹೊಂದದೇ ಇರಲಿ, ಪ್ರವಾಹ ಮಾತ್ರ ಯಾವುದೇ ರಿಯಾಯಿತಿ ತೋರಿಸುವುದಿಲ್ಲ. ಅಲ್ಲಿ ಎಲ್ಲರ ಮನೆಗಳು, ಜೀವಗಳು ಕೊಚ್ಚಿ ಹೋಗುತ್ತವೆ!
ಹೀಗೆ ಮನೆಗಳನ್ನು ಕಳೆದುಕೊಂಡು ನಿರ್ಗತಿಕ ರಾಗುವವರಿಗಾಗಿಯೇ ಜಪಾನಿನ ಇಚಿಜೊ ಕೊಮುಟೆನ್ ಎಂಬ ಕಂಪೆನಿ ತೇಲುವ ಮನೆಯನ್ನು ನಿರ್ಮಿಸಿದೆ. ಇದರ ಲಾಭವೇನೆಂದರೆ ಪ್ರವಾಹ ಬಂದಾಗ ಈ ಮನೆ ತೇಲಲು ಆರಂಭಿಸುತ್ತದೆ, ಇಳಿದಾಗ ಮತ್ತೆ ನೆಲಕ್ಕೆ ಬಂದು ನಿಲ್ಲುತ್ತದೆ! ಇದನ್ನು ಒಂದು ಟಿವಿ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಮೂಲಕವೂ ಕಂಪೆನಿ ತೋರಿಸಿದೆ. ಜನರು ಅಚ್ಚರಿಪಟ್ಟಿದ್ದಾರೆ.
ಹೇಗೆ ಇರಲಿದೆ?
ನೀರು ನುಗ್ಗಲು ಶುರುವಾದ ಕೂಡಲೇ ನಿಧಾನಕ್ಕೆ ಮನೆ ನೆಲಬಿಟ್ಟು ಎದ್ದೇಳಲು ಆರಂಭಿಸುತ್ತದೆ. ಗರಿಷ್ಠ 5 ಮೀಟರ್ವರೆಗೆ ಮನೆ ಮೇಲೆದ್ದು ತೇಲುತ್ತದೆ. ಮನೆಯ ಸುತ್ತ ಬಲವಾದ ಕಬ್ಬಿಣದ ಕಂಬಗಳನ್ನು ಹುಗಿದಿರಲಾಗುತ್ತದೆ. ಈ ಕಂಬಗಳಿಗೆ ಬಲವಾದ ವೈರ್ಗಳನ್ನು ಬಿಗಿದು ಅವನ್ನು ಮನೆಗೆ ಕಟ್ಟಿರಲಾಗುತ್ತದೆ. ಪ್ರವಾಹ ಬಂದಾಗ ಮೇಲೇಳುವ ಮನೆ, ಪ್ರವಾಹ ಹೋದಾಗ ನೆಲಕ್ಕಿಳಿಯುತ್ತದೆ.
Japanese Company Invents Flood-Proof Floating Houses #Mundo #Nature #LoveEarth #ClimateChange [Video]: Japanese housing developer Ichijo Komuten recently unveiled a “flood-resistant house” that can not only remain waterproof during floods, but also float… https://t.co/j1AxKu043d pic.twitter.com/lEXljWDbTp
— LeeTyler (@LeeTyler) June 24, 2022