
NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ
Team Udayavani, Sep 22, 2023, 4:52 PM IST

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಶುಕ್ರವಾರ ಖಚಿತವಾಗಿದೆ.ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಹೊಸದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಹತ್ವದ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ನಡೆಸಿದರು. ಈ ವೇಳೆ ನಿಖಿಲ್ ಕುಮಾರ ಸ್ವಾಮಿ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಜರಿದ್ದರು.
”ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರು ನಮ್ಮ ಹಿರಿಯ ನಾಯಕರು ಹಾಗೂ ಗೃಹ ಸಚಿವರಾದ ಅಮಿತ್ ಶಾ ಅವರ ಸಮ್ಮುಖದಲ್ಲಿ NDA (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ) ಭಾಗವಾಗಲು ನಿರ್ಧರಿಸಿರುವುದು ನನಗೆ ಖುಷಿ ತಂದಿದೆ. ನಾವು ಅವರನ್ನು ಎನ್‌ಡಿಎಗೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಇದು ಎನ್‌ಡಿಎ ಮತ್ತು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ನವ ಭಾರತ, ಬಲಿಷ್ಠ ಭಾರತ ದೃಷ್ಟಿಯನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಜೆ.ಪಿ.ನಡ್ಡಾ ಟ್ವೀಟ್ ಮಾಡಿದ್ದಾರೆ.
ಸೀಟು ಹಂಚಿಕೆ ಮತ್ತು ಇತರ ವಿಚಾರಗಳ ಕುರಿತೂ ಚರ್ಚೆ ನಡೆದಿದ್ದು ಆ ಕುರಿತು ವಿವರಗಳನ್ನು ಬಹಿರಂಗಪಡಿಸಿಲ್ಲ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dalit; ದಲಿತ ಸಮ್ಮಾನ್ ಸಮಾರೋಹ್ ದಲ್ಲಿ ಪಾಲ್ಗೊಂಡ ರಾಜ್ ನಾಥ್ ಸಿಂಗ್

Chhattisgarh: ಕಾರು – ಟ್ರಕ್ ನಡುವೆ ಭೀಕರ ಅಪಘಾತ; ವಧು – ವರ ಸೇರಿ ಐವರು ಮೃತ್ಯು

Chhattisgarh: ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ ಮಾಡಿದ ಬಿಜೆಪಿ

I-T raids;ಬಿಜೆಪಿಯವರ ಮೇಲೇಕೆ ದಾಳಿಗಳಾಗುತ್ತಿಲ್ಲ:ಸಿದ್ದರಾಮಯ್ಯ ಪ್ರಶ್ನೆ

Hyderabad; ಆಸ್ಪತ್ರೆಗೆ ಭೇಟಿ ನೀಡಿ ಕೆಸಿಆರ್ ಯೋಗಕ್ಷೇಮ ವಿಚಾರಿಸಿದ ಸಿಎಂ ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ

Congress ಸರಕಾರ ಪತನವಾಗಲಿದೆ ಎಂಬ ಭ್ರಮೆಯಲ್ಲಿ ಬಿಜೆಪಿ:ಜಗದೀಶ್ ಶೆಟ್ಟರ್

Dalit; ದಲಿತ ಸಮ್ಮಾನ್ ಸಮಾರೋಹ್ ದಲ್ಲಿ ಪಾಲ್ಗೊಂಡ ರಾಜ್ ನಾಥ್ ಸಿಂಗ್

Chhattisgarh: ಕಾರು – ಟ್ರಕ್ ನಡುವೆ ಭೀಕರ ಅಪಘಾತ; ವಧು – ವರ ಸೇರಿ ಐವರು ಮೃತ್ಯು

Chhattisgarh: ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ ಮಾಡಿದ ಬಿಜೆಪಿ

ಹುಟ್ಟುಹಬ್ಬದಂದು ಹಿಮಾಲಯದ ತಪ್ಪಲಿನಲ್ಲಿ ಬೆತ್ತಲಾದ ನಟ ವಿದ್ಯುತ್; ಹಂಚಿಕೊಂಡ ಫೋಟೋ ವೈರಲ್