ಜಮೀನು ವಿವಾದ: ಸಹೋದರ ಸಂಬಂಧಿಯ ರುಂಡ ಕಡಿದು, ಸೆಲ್ಫಿ ತೆಗೆದುಕೊಂಡ ಆರೋಪಿಗಳು
Team Udayavani, Dec 6, 2022, 9:59 AM IST
ಜಾರ್ಖಂಡ್: ಜಮೀನಿನ ವಿವಾದಕ್ಕೆ 20 ವರ್ಷದ ಯುವಕನೊಬ್ಬ ತನ್ನ 24 ವರ್ಷದ ಸಹೋದರ ಸಂಬಂಧಿಯ ರುಂಡ ಕಡಿದ ಭೀಭತ್ಸ ಘಟನೆ ಜಾರ್ಖಂಡ್ ನ ಖುಂಟಿ ಜಿಲ್ಲೆಯ ಮುರ್ಹು ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ದಾಸಾಯಿ ಮುಂಡ ಹಾಗೂ ಸಹೋದರ ಸಂಬಂಧಿಯಾದ ಸಾಗರ್ ಮುಂಡಾ ಎರಡು ಕುಟುಂಬಗಳ ಜೊತೆ ಕಳೆದ ಕೆಲ ಸಮಯದಿಂದ ಜಾಗದ ವಿಚಾರಕ್ಕೆ ನಾನಾ ಭಿನ್ನಾಭಿಪ್ರಾಯಗಳು ಬಂದಿದ್ದವು. ಅನೇಕ ಬಾರಿ ಕೈ-ಕೈ ಮಿಲಾಯಿಸುವ ಹಂತಕ್ಕೂ ಪರಿಸ್ಥಿತಿ ಬಂದಿದೆ.
ಡಿ. 1 ರಂದು ದಾಸಾಯಿ ಮುಂಡ ಕೆಲಸಕ್ಕೆ ಹೋಗಿದ್ದ ವೇಳೆ ಸಹೋದರ ಸಂಬಂಧಿ ದಾಸಾಯಿ ಮುಂಡರ ಮಗ ಕಾನು ಮುಂಡರನ್ನು ಸಾಗರ್ ಮುಂಡ ಅಪಹರಿಸಿಕೊಂಡು ಹೋಗಿದ್ದಾರೆ. ಈ ವಿಷಯ ತಿಳಿದ ದಾಸಾಯಿ ಪೊಲೀಸ್ ಠಾಣೆಗೆ ಸಾಗರ್ ಮೇಲೆ ದೂರು ನೀಡಿದ್ದರು.
ಪೊಲೀಸರು ತನಿಖೆ ಆರಂಭಿಸಿ ಪ್ರಮುಖ ಆರೋಪಿ, ಆತನ ಪತ್ನಿ ಸೇರಿದಂತೆ 6 ಜನರನ್ನು ಬಂಧಿಸಿದ್ದು, ವಿಚಾರಣೆ ವೇಳೆ ತಾವು ಕಾನು ಮುಂಡಾರನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಪೊಲೀಸರು ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದಾಗ, ದೇಹ ಕುಮಾಂಗ್ ಗೋಪ್ಲಾ ಅರಣ್ಯದಲ್ಲಿ ಮತ್ತು ರುಂಡ 15 ಕಿಮೀ ದೂರದ ದುಲ್ವಾ ತುಂಗ್ರಿ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಮುರ್ಹು ಪೊಲೀಸ್ ಠಾಣಾಧಿಕಾರಿ ಚೂಡಾಮಣಿ ತುಡು ತಿಳಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ ಈ ಕೃತ್ಯವೆಸಗಿದ ಬಳಿಕ ಆರೋಪಿಗಳು ಕಡಿದ ರುಂಡದೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಮೃತರ ಮೊಬೈಲ್ ಸೇರಿದಂತೆ ಐದು ಮೊಬೈಲ್ ಫೋನ್‌ಗಳು, ಎರಡು ಹರಿತವಾದ ಆಯುಧಗಳು, ಕೊಡಲಿ ಮತ್ತು ಎಸ್‌ಯುವಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಜಾಗದ ವಿಚಾರದಲ್ಲಿ ಎರಡು ಕುಟುಂಬ ನಡುವೆ ಇದ್ದ ವೈಷಮ್ಯವೇ ಈ ಘಟನೆಗೆ ಕಾರಣವೆಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ
ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್ ಜೋಷಿ ಸಂವಾ
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಹೊಸ ಸೇರ್ಪಡೆ
ಫೆ.11, 12: ನಮ್ಮ ಸಂತೆಯಲ್ಲಿ ನಿಮ್ಮ ಮಳಿಗೆಯೂ ಇರಲಿ
ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR
ಚೀನಾದ ಗೂಢಚಾರಿಕೆ ಬಲೂನ್ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ
“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು
ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್!