ಜಾಂಬಿಯದ ಅಜ್ಜನ ಮನೆ ಹುಡುಕಿಕೊಂಡು ಹೋದ ಕಮಲಾ ಹ್ಯಾರಿಸ್
Team Udayavani, Apr 2, 2023, 7:42 AM IST
ನವದೆಹಲಿ: ಭಾರತೀಯ ಮೂಲದ ಕಮಲಾ ಹ್ಯಾರಿಸ್ ಈಗ ಅಮೆರಿಕದ ಉಪಾಧ್ಯಕ್ಷೆ. ಸದ್ಯ ಆಫ್ರಿಕಾ ಖಂಡದ ಜಾಂಬಿಯ ಪ್ರವಾಸಕ್ಕೆ ತೆರಳಿರುವ ಅವರು ಒಂದು ವಿಶೇಷ ಸಂತೋಷದಲ್ಲಿದ್ದಾರೆ. ಅದಕ್ಕೆ ಕಾರಣ ಅವರು ಲುಸಾಕದಲ್ಲಿ ತಮ್ಮ ಅಜ್ಜ ಒಂದು ಕಾಲದಲ್ಲಿ ವಾಸವಾಗಿದ್ದ ಮನೆಗೆ ಭೇಟಿ ನೀಡಿದ್ದು!
ಅವರ ತಾಯಿಯ ತಂದೆ ಪಿ.ವಿ.ಗೋಪಾಲನ್ 1966ರಲ್ಲಿ ಭಾರತ ಸರ್ಕಾರದ ಪ್ರತಿನಿಧಿಯಾಗಿ ಲುಸಾಕದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆಗಷ್ಟೇ ಸ್ವತಂತ್ರಗೊಂಡಿದ್ದ ಜಾಂಬಿಯದಲ್ಲಿ ಬೇಕಾದಷ್ಟು ಕೆಲಸವಾಗಬೇಕಿತ್ತು.
ಈ ಹಿನ್ನೆಲೆಯಲ್ಲಿ ಗೋಪಾಲನ್ರನ್ನು “ಪರಿಹಾರ ಕ್ರಮಗಳು, ನಿರಾಶ್ರಿತರ ಕೇಂದ್ರದ’ ನಿರ್ದೇಶಕರಾಗಿ ನೇಮಿಸಲಾಗಿತ್ತು. ಇದರ ಆಸುಪಾಸಿನಲ್ಲೇ ಆಗಿನ್ನೂ ಚಿಕ್ಕ ವಯಸ್ಸಿನಲ್ಲಿದ್ದ ಕಮಲಾ ಹ್ಯಾರಿಸ್ ಲುಸಾಕಕ್ಕೆ ಹೋಗಿದ್ದರು. ಈಗವರು ಬಹಳ ಕಷ್ಟಪಟ್ಟು ಆ ಜಾಗವನ್ನು ಹುಡುಕಿಸಿ, ಭೇಟಿ ನೀಡಿ ಪುಳಕಿತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!