‘ತಪ್ಪು ಮಾಹಿತಿಯಿಂದ ಟ್ವೀಟ್ ಮಾಡಿದ್ದೆ’: ವಿವಾದವಾಗುತ್ತಿದ್ದಂತೆ ಉಲ್ಟಾ ಹೊಡೆದ ಕಪಿಲ್ ಸಿಬಲ್


Team Udayavani, Aug 24, 2020, 2:54 PM IST

‘ತಪ್ಪು ಮಾಹಿತಿಯಿಂದ ಟ್ವೀಟ್ ಮಾಡಿದ್ದೆ’: ವಿವಾದವಾಗುತ್ತಿದ್ದಂತೆ ಉಲ್ಟಾ ಹೊಡದ ಕಪಿಲ್ ಸಿಬಲ್

ಹೊಸದಿಲ್ಲಿ: ಇಂದು ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಭೆ ಹಲವು ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಿದೆ. ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಗೆ ಕೆಲಸ ಮಾಡಿದ ನಾವು ಬಿಜೆಪಿ ಜೊತೆ ಸೇರಿ ತಂತ್ರ ಮಾಡಿಲ್ಲ. ಆದರೂ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಕಪಿಲ್ ಸಿಬಲ್ ಅಸಮಧಾನದಿಂದ ಟ್ವೀಟ್ ಮಾಡಿದ್ದರು. ಆದರೆ ಇದೀಗ ತಮ್ಮ ಟ್ವೀಟ್ ಅನ್ನು ಹಿಂಪಡೆದಿರುವ ಅವರು ತಪ್ಪು ಮಾಹಿತಿಯಿಂದ ನಾನು ಟ್ವೀಟ್ ಮಾಡಿದ್ದೆ ಎಂದಿದ್ದಾರೆ.

ನಾಯಕತ್ವ ಬದಲಾವಣೆಗಾಗಿ ಸೋನಿಯಾ ಗಾಂಧಿಯವರಿಗೆ 23 ಮಂದಿ ಹಿರಿಯ ಕೈ ನಾಯಕರು ಪತ್ರ ಬರೆದಿದ್ದು, ಇಂದಿನ ಕಾರ್ಯಕಾರಣಿ ಸಭೆಯಲ್ಲಿ ಆ ಹಿರಿಯ ನಾಯಕರ ವಿರುದ್ಧ ರಾಹುಲ್ ಗಾಂಧಿ ಅಸಮಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಪಕ್ಷದ ಹಿರಿಯ ನಾಯಕರು ಪತ್ರ ಬರೆದಿದ್ಯಾಕೆ? ಬರೆದಿದ್ದರೂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಯಾಕೆ? ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂದು ನಾಯಕತ್ವ ಬದಲಾವಣೆಗಾಗಿ ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಆರೋಪಿಸಿದ್ದಾರೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: ಕಾಂಗ್ರೆಸ್ ಸಭೆಯಲ್ಲಿ ಭಿನ್ನಾಭಿಪ್ರಾಯ ಸ್ಪೋಟ: ರಾಹುಲ್ ಬೆನ್ನಿಗೆ ನಿಂತ ರಮ್ಯಾ ಹೇಳಿದ್ದೇನು?

ಇದರಿಂದ ಕೆರಳಿದ್ದ ಹಿರಿಯ ನಾಯಕ ಕಪಿಲ್ ಸಿಬಲ್, ಕಳೆದ 30 ವರ್ಷದಲ್ಲಿ ನಾನು ಒಂದೇ ಒಂದು ದಿನವೂ ಬಿಜೆಪಿ ಪರವಾಗಿ ಯಾವುದೇ ವಿಚಾರದಲ್ಲೂ ಹೇಳಿಕೆ ನೀಡಿಲ್ಲ. ಆದರೂ ಈ ರೀತಿಯ ಆರೋಪ ಕೇಳಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ನಾವು ಬಿಜೆಪಿಯೊಂದಿಗೆ ಕೈಜೋಡಿಸಿ, ಪಕ್ಷದ ವಿರುದ್ಧ ತಂತ್ರ ರೂಪಿಸಿದ್ದೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ರಾಜಸ್ಥಾನ ಹೈಕೋರ್ಟ್​ನಲ್ಲಿ ವಾದ ಮಂಡಿಸಿ ಜಯ ಗಳಿಸಿದ್ದೇನೆ. ಮಣಿಪುರದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್​ ಪರವಾಗಿ ವಾದ ಮಂಡಿಸಿದ್ದೆ. ಕಳೆದ 30 ವರ್ಷದ ರಾಜಕೀಯದಲ್ಲಿ ಎಂದಿಗೂ ಬಿಜೆಪಿ ಪರವಾಗಿ ಹೇಳಿಕೆ ನೀಡಿಲ್ಲ. ಆದರೂ ನಾವು ಬಿಜೆಪಿ ಜೊತೆ ಕೈಜೋಡಿಸಿದ್ದೇವೆ! ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ, ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿ, ಸಭೆಯಲ್ಲಿ ರಾಹುಲ್ ಗಾಂಧಿಯವರು ಇಂತಹ ಯಾವುದೇ ಮಾತುಗಳನ್ನಾಡಿಲ್ಲ. ಸುಳ್ಳು ಸುದ್ದಿಗಳನ್ನು ನಂಬೇಡಿ ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: 1998-99ರಲ್ಲಿಯೂ ಕಾಂಗ್ರೆಸ್ ಇದೇ ಸ್ಥಿತಿ ಅನುಭವಿಸಿತ್ತು…ಅಂದು ಘಟಾನುಘಟಿ ನಾಯಕರ ರಾಜೀನಾಮೆ!

ಸುರ್ಜೇವಾಲ ಟ್ವೀಟ್ ನಂತರ ಮತ್ತೊಂದು ಟ್ವೀಟ್ ಮಾಡಿರುವ ಕಪಿಲ್ ಸಿಬಲ್, ಸಭೆಯಲ್ಲಿ ಇಂತಹ ಮಾತುಗಳನ್ನು ಆಡಿಲ್ಲ ಎಂದು ಸ್ವತಃ ರಾಹುಲ್ ಗಾಂಧಿಯವರೇ ನನಗೆ ಹೇಳಿದ್ದಾರೆ. ಹಾಗಾಗಿ ನನ್ನ ಟ್ವೀಟ್ ಅನ್ನು ಹಿಂಪಡೆಯುತ್ತೇನೆ ಎಂದು ಸಮಜಾಯಿಷಿ ನೀಡಿ ಟ್ವೀಟ್ ಮಾಡಿದ್ದಾರೆ.

ಒಟ್ಟಿನಲ್ಲಿ ನಾಯಕತ್ವದ ಕುರಿತಾಗಿ ಚರ್ಚೆ ನಡೆಯಬೇಕಾಗಿದ್ದ ಕಾಂಗ್ರೆಸ್ ಕಾರ್ಯಕಾರಣಿ ಸಭೆ, ಹೊಸ ರಾಜಕೀಯ ಚಟುವಟಿಕೆಗಳಿಗೆ ವೇದಿಕೆಯಾಗಿದೆ.

ಟಾಪ್ ನ್ಯೂಸ್

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

1-fdffsd

ಜ್ಞಾನವಾಪಿ ಮಸೀದಿ ಪ್ರಕರಣ: ಮುಂದಿನ ವಿಚಾರಣೆ ಮೇ 30ಕ್ಕೆ ಮುಂದೂಡಿಕೆ

1-fsdfdsf

ತಾಜ್ ಮಹಲ್ ಆವರಣದಲ್ಲಿ ನಮಾಜ್: ನಾಲ್ವರ ಬಂಧನ

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.