Indian Navyಗೆ ಸಲಾಂ; ಮಗುವನ್ನು ರಕ್ಷಿಸಿರುವ ಈ ವಿಡಿಯೋ ನೋಡಿ
Team Udayavani, Aug 17, 2018, 6:12 PM IST
ತಿರುವನಂತಪುರಂ: ವರುಣನ ಅಬ್ಬರಕ್ಕೆ ದೇವರ ನಾಡು ಕೇರಳ ನಲುಗಿ ಹೋಗಿದ್ದು ಪ್ರವಾಹ, ಮಳೆಗೆ ಈವರೆಗೆ 160ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಸೇನಾಪಡೆ ಭರದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಏತನ್ಮಧ್ಯೆ ನೌಕಾಪಡೆಯ ವ್ಯಕ್ತಿ ಪ್ರವಾಹದಲ್ಲಿ ಸಿಲುಕಿ ಮನೆಯ ಮಹಡಿ ಮೇಲೆ ನಿಂತಿದ್ದ ಮಗುವನ್ನು ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೌಕಾಪಡೆ ಟ್ವೀಟರ್ ನಲ್ಲಿ ವಿಡಿಯೋವನ್ನು ಶೇರ್ ಮಾಡಿದೆ. ಕೇರಳದ ಅಲುವಾ ಪ್ರದೇಶದಲ್ಲಿ ಪ್ರವಾಹದಿಂದಾಗಿ ಮನೆಯ ಮಹಡಿ ಮೇಲೆ ನಿಂತಿದ್ದ ಮಗುವನ್ನು ವಿಮಾನದ ಪೈಲಟ್ ಕಮಾಂಡರ್ ವಿಜಯ್ ವರ್ಮಾ ಗಮನಿಸಿದ್ದರು. ಕೂಡಲೇ ಹೆಲಿಕಾಪ್ಟರ್ ಅನ್ನು ಮಗು ಇದ್ದ ಸ್ಥಳಕ್ಕೆ ತಂದು ಸಜ್ಜುಗೊಳಿಸಿ ಪೈಲಟ್ ನಿಲ್ಲಿಸಿದ ಕೂಡಲೇ(ನೇವಿ ಡೈವರ್) ಅಮಿತ್ ರೋಪ್ ಮೂಲಕ ಕೆಳಗಿಳಿದು ಮಗುವನ್ನು ತನ್ನ ತೋಳಿನಲ್ಲಿ ಹಿಡಿದುಕೊಂಡು ಏರ್ ಲಿಫ್ಟ್ ಮಾಡಿ ರಕ್ಷಿಸಿರುವ ವಿಡಿಯೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
Aluva Rescue effort pic.twitter.com/b3ZbwZ6vcr
— SpokespersonNavy (@indiannavy) August 16, 2018