

Team Udayavani, May 22, 2023, 3:09 PM IST
ತಿರುವನಂತಪುರಂ: ಸಹೋದರನಿಂದಲೇ ಗರ್ಭಿಣಿಯಾಗಿದ್ದ ಅಪ್ರಾಪ್ತ ವಯಸ್ಕ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳಲು ಕೇರಳ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ. ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ ವಿವಿಧ ಸಾಮಾಜಿಕ ಮತ್ತು ವೈದ್ಯಕೀಯ ತೊಡಕುಗಳು ಉದ್ಭವಿಸುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಹೇಳಿದೆ.
ಅಪ್ರಾಪ್ತ ಬಾಲಕಿಯ ತಂದೆ ಆಕೆಯ ಗರ್ಭಪಾತಕ್ಕೆ ಅವಕಾಶ ಮಾಡಿ ಕೊಡಿಸುವಂತೆ ಕೋರಿದ್ದರು.ವೈದ್ಯಕೀಯ ಮಂಡಳಿ ಸಲ್ಲಿಸಿದ ವರದಿಯನ್ನು ಆಧರಿಸಿ ನ್ಯಾಯಮೂರ್ತಿ ಜಿಯಾದ್ ರಹಮಾನ್ ಅವರ ಏಕ ಪೀಠ ಈ ನಿರ್ಧಾರ ಕೈಗೊಂಡಿದೆ.
ವೈದ್ಯಕೀಯ ವರದಿಯನ್ನು ಪರಿಶೀಲಿಸಿದಾಗ, ಮಗುವು ದೈಹಿಕವಾಗಿ ಮತ್ತು ಮಾನಸಿಕವಾಗಿ ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯಕ್ಕೆ ಯೋಗ್ಯವಾಗಿದೆ ಎಂಬುದು ಸ್ಪಷ್ಟವಾಗಿದೆ. ಗರ್ಭಧಾರಣೆಯ ಮುಂದುವರಿಕೆ ಬಾಲಕಿಯ ಸಾಮಾಜಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಗಂಭೀರವಾದ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ಕೋರ್ಟ್ ಹೇಳಿದೆ. ವೈದ್ಯಕೀಯ ಮಂಡಳಿ ಪ್ರಕಾರ ಬಾಲಕಿ ಜೀವಂತ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇತ್ತು.ಅಂತಹ ಸಂದರ್ಭಗಳಲ್ಲಿ, ಅರ್ಜಿದಾರರ ಮಗಳ ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯವನ್ನು ಅನುಮತಿಸಲು ನಾನು ಒಲವು ತೋರುತ್ತೇನೆ” ಎಂದು ನ್ಯಾಯಾಧೀಶರು ಮೇ 19 ರ ತಮ್ಮ ಆದೇಶದಲ್ಲಿ ಹೇಳಿದ್ದರು.
Ad
ಮಂಗಳೂರೂ: ನೂಯಿ-ಪೊಳಲಿ ದ್ವಾರ ರಸ್ತೆಯೇ ಸವಾಲು; ಇಲ್ಲಿ ರಸ್ತೆ ರಚನೆ ಹೇಗೆ?
Gangolli: ಮೀನುಗಾರಿಕೆಗೆ ತರಳಿದ್ದ ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆ, ಓರ್ವನ ರಕ್ಷಣೆ
ಪುತ್ತೂರು-ಮಂಗಳೂರು ತಡೆರಹಿತ ಎಕ್ಸ್‌ಪ್ರೆಸ್‌ಗೆ ಚಾಲನೆ: 7 ಬಸ್; ದಿನಕ್ಕೆ 60 ಟ್ರಿಪ್
ಕಲಾವಿದನಿಗೆ ನಿಂದನೆ: ಕನ್ನಡ, ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿರುದ್ಧ ಪ್ರಕರಣ
Arrested: ಮಸಾಜ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ: ಮಹಿಳೆ ಸೆರೆ, ನಾಲ್ವರ ರಕ್ಷಣೆ
You seem to have an Ad Blocker on.
To continue reading, please turn it off or whitelist Udayavani.