5.20 ಕೋಟಿ ರೂ. ದಂಡ ಕಟ್ಟಿ: ಪಿಎಫ್‌ಐ ಗೆ ಕೇರಳ ಹೈಕೋರ್ಟ್ ಚಾಟಿ
Team Udayavani, Sep 29, 2022, 2:51 PM IST
ತಿರುವನಂತಪುರಂ : ಸೆಪ್ಟೆಂಬರ್ 23 ರಂದು ಕೇರಳದಾದ್ಯಂತ ಪಿಎಫ್‌ಐ ಕರೆ ನೀಡಿದ್ದ ಪ್ರತಿಭಟನೆ ವೇಳೆ ಸಂಭವಿಸಿದ ವ್ಯಾಪಕ ಹಿಂಸಾಚಾರ ನಂತರ ಸಾರ್ವಜನಿಕ ಆಸ್ತಿ ನಾಶಕ್ಕೆ ಸಂಬಂಧಿಸಿ 5.20 ಕೋಟಿ ರೂ. ಠೇವಣಿ ಮಾಡುವಂತೆ ಕೇರಳ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಹಿಂಸಾಚಾರದ ವೇಳೆ ರಾಜ್ಯ ಸಾರಿಗೆ ಕೆಎಸ್‌ಆರ್‌ಟಿಸಿ ಬಸ್ ಗಳಿಗೆ ಮಾಡಿದ ವ್ಯಾಪಕ ಹಾನಿಗೆ 2 ವಾರಗಳಲ್ಲಿ 5.20 ಕೋಟಿ ರೂ. ಠೇವಣಿ ಮಾಡುವಂತೆ ನಿಷೇಧಿತ ಸಂಘಟನೆಗೆ ಹೈಕೋರ್ಟ್ ನಿರ್ದೇಶಿಸಿದೆ.
ಇದನ್ನೂ ಓದಿ: ”ಆಪರೇಷನ್ ಗರುಡ”; ಏನಿದು ಸಿಬಿಐನ ಉನ್ನತ ಮಟ್ಟದ ಹೊಸ ಕಾರ್ಯಾಚರಣೆ?
ರಾಜ್ಯ ಮತ್ತು ಕೆಎಸ್‌ಆರ್‌ಟಿಸಿಯಿಂದ ಅಂದಾಜಿಸಲಾದ ಹಾನಿಗಳಿಗೆ ಎರಡು ವಾರಗಳಲ್ಲಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮೊತ್ತವನ್ನು ಪಾವತಿಸಬೇಕು ಎಂದು ಕೋರ್ಟ್ ಹೇಳಿದೆ.
ಪ್ರತಿಭಟನೆ ವೇಳೆ ತನ್ನ ಬಸ್‌ಗಳಿಗೆ ಆಗಿರುವ ಹಾನಿಗಾಗಿ ಪಿಎಫ್‌ಐನಿಂದ ಪರಿಹಾರವನ್ನು ಕೋರಿ ಕೆಎಸ್‌ಆರ್‌ಟಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಹಿಂಸಾಚಾರ ನಂತರ 487 ಪ್ರಕರಣಗಳನ್ನು ದಾಖಲಿಸಲಾಗಿದ್ದು, 1,992 ಜನರನ್ನು ಬಂಧಿಸಲಾಗಿದೆ ಮತ್ತು 687 ಮಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಸರಕಾರವು ನ್ಯಾಯಾಲಯಕ್ಕೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯ
ಬಾಹ್ಯಾಕಾಶ ಪ್ರವಾಸೋದ್ಯಮ ಕೈಗೆತ್ತಿಕೊಳ್ಳಲು ಇಸ್ರೋ ಅಧ್ಯಯನ: ಕೇಂದ್ರ ಸರ್ಕಾರ
ವಂದನಾ ನಿರ್ಣಯ; ಲೋಕಸಭೆಯಲ್ಲಿ ವಿಪಕ್ಷಗಳ ವಿರುದ್ಧ ಕಿಡಿ ಕಾರಿದ ಪ್ರಧಾನಿ ಮೋದಿ
ಭಾರತದ ಪ್ರದೇಶದೊಳಗೆ ನುಸುಳಿಬಂದ ಪಾಕ್ ಡ್ರೋನನ್ನು ಹೊಡೆದುರುಳಿಸಿದ ಬಿಎಸ್ಎಫ್
ಸ್ಮೃತಿ ಇರಾನಿ ಮಗಳು ಶಾನೆಲ್ಲೆ ಇರಾನಿಯ ವಿವಾಹ : ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ