ಕೇರಳದಲ್ಲಿ ನಿಲ್ಲದ ತಲ್ಲಣ


Team Udayavani, Aug 17, 2018, 6:50 AM IST

keralaa.jpg

ನವದೆಹಲಿ: ಕಳೆದೊಂದು ವಾರದಿಂದ ಕೇರಳವನ್ನು ಬಿಡದೇ ಆವರಿಸಿರುವ ಶತಮಾನದ ಮಹಾಮಳೆ ಕಳೆದ 48 ಗಂಟೆಗಳಲ್ಲಿ 60 ಜನರ ಬಲಿ ಪಡೆದಿದೆ. ತ್ರಿಶೂರ್‌, ಕಣ್ಣೂರ್‌,ಕಲ್ಲಿಕೋಟೆ, ಕೊಟ್ಟಾಯಂನ ಅಂಬಾಯತ್ತೋಡ್‌ನಲ್ಲಿ ಗುರುವಾರ ಭೂಕುಸಿತ ಉಂಟಾ ಗಿದ್ದು, ಪಾಲಕ್ಕಾಡ್‌ ಜಿಲ್ಲೆಯ ಉತ್ತರದಲ್ಲಿರುವ ನೆನ್ಮಾರದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ 8 ಮಂದಿ ಮೃತಪಟ್ಟಿದ್ದಾರೆ. ಇದ ರಿಂದಾಗಿ, ಆ.1ರಿಂದ ಈವರೆಗೆ ಮಳೆಗೆ ಬಲಿಯಾದವರ ಸಂಖ್ಯೆ 100ಕ್ಕೇರಿದೆ. ಏತನ್ಮಧ್ಯೆ, ಆಗಸ್ಟ್‌ 15ರಂದು ನಿಯಂತ್ರಣಕ್ಕೆ ಬರ ಲಿದೆ ಎಂದು ಹೇಳಲಾಗಿದ್ದ ಮಹಾಮಳೆ 18ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿರುವುದು ಕೇರಳದ ಜನತೆಯನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. 

14 ಜಿಲ್ಲೆಗಳಲ್ಲಿ ಪ್ರವಾಹ ಭೀತಿ
ಕೇರಳ ಇತಿಹಾಸದಲ್ಲೇ ಇದೇ ಮೊದಲ ಬಾರಿ, ಕೇರಳ ವಿದ್ಯುತ್‌ಶಕ್ತಿ ಮಂಡಳಿಗೆ ಸೇರಿದ 52 ಅಣೆಕಟ್ಟು ಹಾಗೂ ಕೇರಳ ಜಲ ಆಯೋಗಕ್ಕೆ ಸೇರಿದ 22 ಅಣೆಕಟ್ಟುಗಳಲ್ಲಿ ನೀರು ಗರಿಷ್ಠ ಮಿತಿಯನ್ನೂ ಮೀರಿ ತುಂಬುತ್ತಿವೆ. ಪೆರಿಯಾರ್‌ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, 14 ಜಿಲ್ಲೆಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ಕೊಡಲಾಗಿದೆ. 

ನಾಗರಿಕರ ಮೊರೆ
ಸದ್ಯಕ್ಕೆ ಜಲಾವೃತಗೊಂಡಿರುವ ಪಟ್ಟಣಂತಿಟ್ಟ, ಎರ್ನಾಕುಳಂ, ಅಲಪ್ಪುಳ ಮುಂತಾದೆಡೆ ಜನರು ಅಪಾರ್ಟ್‌ ಮೆಂಟ್‌ಗಳು, ಎತ್ತರ ಮನೆಗಳ ಛಾವಣಿಗಳನ್ನು ಏರಿ ನಿಂತು ನೆರವಿಗಾಗಿ ಕೂಗುತ್ತಿದ್ದಾರೆ. ಇಂಥ ನಾಗರಿಕರು ತಮ್ಮಲ್ಲಿನ ಮೊಬೈಲ್‌ಗ‌ಳಿಂದಲೇ ಸಾಮಾ ಜಿಕ ಜಾಲ ತಾಣಗಳಲ್ಲಿ ನೆರವಿಗಾಗಿ ಮೊರೆಯಿಡುತ್ತಿದ್ದಾರೆ. ನಿರ್ಗತಿಕರಿಗೆ ಆಹಾರ ಪೊಟ್ಟಣ, ಕುಡಿಯುವ ನೀರಿನ ಬಾಟಲಿಗಳನ್ನು ಸರಬರಾಜು ಮಾಡಲಾಗುತ್ತಿದೆ. ಪಟ್ಟಣಂತಿಟ್ಟ ಜಿಲ್ಲೆಯ ರಣ್ಣಿ ಎಂಬ ಪ್ರಾಂತ್ಯದಲ್ಲಿನ ಥಿಯಾಲಜಿ ಸೆಮಿನರಿ  ಜಲಾವೃತವಾಗಿದ್ದ ರಿಂದಾಗಿ ಅದರೊಳಗೆ ಸಿಲುಕಿದ್ದ 20 ಮಂದಿಯನ್ನು ಏರ್‌ ಲಿಫ್ಟ್ ಮೂಲಕ ತಿರುವನಂತಪುರಂಗೆ ತರಲಾಗಿದೆ.

ಮತ್ತೂಂದು ತುಕಡಿ
ಈಗಾಗಲೇ ಕೇರಳದಲ್ಲಿ ಪರಿಹಾರ ಕಾರ್ಯ ನಡೆಸುತ್ತಿರುವ ಭೂ ಸೇನೆ, ನೌಕಾ ಪಡೆ, ವಾಯು ಪಡೆ, ಕರಾವಳಿ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ (ಎನ್‌ಡಿಆರ್‌ಎಫ್) ತುಕಡಿಗಳಿಗೆ ಸಹಾಯಕವಾಗಿ 40 ಸೈನಿಕರುಳ್ಳ ಮತ್ತೂಂದು ಸೇನಾ ತುಕಡಿಯನ್ನು ರವಾನಿಸಲು ತೀರ್ಮಾನಿಸಿದೆ.

ಸಂಚಾರ ಅಸ್ತವ್ಯಸ್ತ
ಕೇರಳದ ಕೇಂದ್ರ ಭಾಗದಲ್ಲಿ ಎಡಬಿಡದೇ ಮಳೆ ಸುರಿದು ಎಲ್ಲೆಲ್ಲೂ ನೀರು ತುಂಬಿಕೊಂಡಿರುವುದರಿಂದ ಆ ಭಾಗದ ರೈಲು ಸಂಚಾ ರಕ್ಕೆ ತೀವ್ರ ಅಡಚಣೆಯಾಗಿದೆ. ಹಾಗಾಗಿ, ತಿರುವನಂತಪುರ ದಿಂದ ಇತರೆಡೆಗೆ ಸಾಗುವ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾ ಗಿದೆ. ಕೊಚ್ಚಿ ಮೆಟ್ರೋ ರೈಲು ಮಾರ್ಗವೂ ಸ್ಥಗಿತವಾಗಿದೆ. ರಸ್ತೆ ಮಾರ್ಗಗಳನ್ನೂ ಬಂದ್‌ ಮಾಡಲಾಗಿದೆ. 

ಸುಪ್ರೀಂ ಆತಂಕ 
ಕೇರಳದ ಪ್ರವಾಹ ಪರಿಸ್ಥಿತಿಯನ್ನು ವಿನಾಶಕಾರಿ ಎಂದು ಬಣ್ಣಿಸಿರುವ ಸುಪ್ರೀಂಕೋರ್ಟ್‌, ಮುಲ್ಲಪೆರಿಯಾರ್‌ ಅಣೆಕಟ್ಟಿನಲ್ಲಿರುವ ನೀರನ್ನು ಕಡಿಮೆ ಮಾಡುವ ಬಗ್ಗೆ ಕೇರಳ ಮತ್ತು ತಮಿಳುನಾಡು ನಡುವೆ ಎದ್ದಿರುವ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲು ತಾನು ಅನುವು ಮಾಡಿಕೊಡುವುದಾಗಿ ಹೇಳಿದೆ. ಮುಲ್ಲಪೆರಿಯಾರ್‌ ಅಣೆಕಟ್ಟಿನ ಗರಿಷ್ಟ ಮಟ್ಟ 142 ಅಡಿ ಇದ್ದು, ಇದನ್ನು ಮೀರಿ ನೀರು ಸಂಗ್ರಹವಾಗಿರುವುದರಿಂದ ಅಣೆಕಟ್ಟಿನ ಕ್ರೆಸ್ಟ್‌ ಗೇಟ್‌ ತೆರೆಯಲು ಕೇರಳ ಕಾತುರಿಸುತ್ತಿದ್ದರೆ, ಕ್ರೆಸ್ಟ್‌ ಗೇಟ್‌ ತೆರೆಯುವುದರಿಂದ ಪ್ರವಾಹದ ಭೀತಿ ತಲೆದೋರಲಿದೆ ಎಂದು ಆಪಾದಿಸಿರುವ ತಮಿಳುನಾಡು ಗೇಟ್‌ ತೆರೆಯದಂತೆ ತಾಕೀತು ಮಾಡಿದೆ. ಹಾಗಾಗಿ, ಈ ವಿಚಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ.

ಟಾಪ್ ನ್ಯೂಸ್

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.