ಠಾಕ್ರೆ ಹತ್ಯೆಗೆ ಯತ್ನಿಸಿದ್ದ ಖಲಿಸ್ಥಾನಿ ಉಗ್ರರು

Team Udayavani, May 16, 2019, 6:00 AM IST

ಹೊಸದಿಲ್ಲಿ: 1989ರಲ್ಲಿ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಹತ್ಯೆಗೆ ಖಲಿಸ್ಥಾನಿ ಉಗ್ರರು ಯತ್ನಿಸಿದ್ದರು ಎಂದು ಶಿವಸೇನೆಯ ಮಾಜಿ ಮುಖಂಡ ನಾರಾಯಣ ರಾಣೆ ತಮ್ಮ ಆತ್ಮ ಚರಿತ್ರೆಯಲ್ಲಿ ಉಲ್ಲೇಖೀಸಿದ್ದಾರೆ. ಈ ಭೀತಿಯಿಂದಾಗಿ ಠಾಕ್ರೆ ತಮ್ಮ ಕುಟುಂಬದವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದರು. ಅಲ್ಲದೆ ತಾವು ಪತ್ನಿಯೊಂದಿಗೆ ಲೋಣಾವಲಕ್ಕೆ ತೆರಳಿದ್ದರು. ಠಾಕ್ರೆ ನಿವಾಸ ಮಾತೋಶ್ರೀಗೆ ಉಗ್ರರು ದಾಳಿ ನಡೆಸಲು ಯೋಜಿಸಿದ್ದಾರೆ ಎಂಬುದಾಗಿ ಆಗ ಸಿಎಂ ಆಗಿದ್ದ ಶರದ್‌ ಪವಾರ್‌ ತಿಳಿಸಿದ್ದರು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ